ಬೆಂಗಳೂರು: ಸ್ಪೀಕರ್ ವಿರುದ್ಧ ದಾಖಲಾತಿ ಇಟ್ಟುಕೊಂಡು ಬಿಜೆಪಿಯವರು (BJP) ಆರೋಪ ಮಾಡಬೇಕು. ಮಾಧ್ಯಮಗಳ ಮುಂದೆ ಆರೋಪ ಮಾಡೋದು ಸರಿಯಲ್ಲ ಎಂದು ಸ್ಪೀಕರ್ ಯು.ಟಿ ಖಾದರ್ ಪರವಾಗಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಬ್ಯಾಟಿಂಗ್ ಮಾಡಿದ್ದಾರೆ.
ಬಿಜೆಪಿ ನಾಯಕರು ಸ್ಪೀಕರ್ ಖಾದರ್ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುವ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಖಾದರ್ ಅವರ ಮೇಲೆ ಆರೋಪ ಮಾಡಿದ್ದಾರೆ. ಕಾಗೇರಿ ಅವರು ಹಿಂದೆ ಸ್ಪೀಕರ್, ಸಚಿವರು ಆಗಿದ್ದವರು. ಯಾವುದೇ ಅಕ್ರಮ ಆಗಿಲ್ಲ. ಪಾರದರ್ಶಕವಾಗಿದೆ ಅಂತ ಖಾದರ್ ಹೇಳಿದ್ದಾರೆ. ಸಾಕ್ಷಿ ಸಮೇತ ಕಾಗೇರಿ ಅವರು ಖಾದರ್ ಅವರಿಗೆ, ರಾಜ್ಯಪಾಲರಿಗೆ ದಾಖಲೆ ಕೊಡಲಿ. ದಾಖಲೆ ಇಟ್ಟು ಆರೋಪ ಮಾಡಲಿ. ಕೇವಲ ಮಾಧ್ಯಮದಲ್ಲಿ ಮಾತಾಡೋದು ಸರಿಯಲ್ಲ ಎಂದರು.
 


 
		 
		 
		 
		 
		
 
		 
		 
		