ಬೆಂಗಳೂರು: ಬಿಜೆಪಿ ನಾಯಕರು ಸಚಿವ ಜಮೀರ್ ಅಹ್ಮದ್ (Zameer Ahmed Khan) ಅವರ ವಿಮಾನದ ಬಗ್ಗೆ ಮಾತನಾಡುವ ಬದಲು ಪ್ರಧಾನಿಯವರಿಗೆ ಹೇಳಿ ರಾಜ್ಯಕ್ಕೆ ಬರ ಪರಿಹಾರ ಕೊಡಿಸಲಿ ಎಂದು ಬಿಜೆಪಿ (BJP) ವಿರುದ್ಧ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅವರು ವಿಮಾನದಲ್ಲಿ ಹಾಡು ಹಾಕಿಕೊಂಡು ಹೋಗಿದ್ದಾರೆ ಎಂಬ ಬಿಜೆಪಿ ನಾಯಕರ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಬಿಜೆಪಿ ನಾಯಕರು, ಚಿಕ್ಕ ಪುಟ್ಟ ಹಾಗೂ ದೊಡ್ಡ ನಾಯಕರು ಎಲ್ಲರೂ ಜಮೀರ್ ಅವರ ವಿಮಾನ ಪ್ರಯಾಣದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಪ್ರಯಾಣ ಎರಡೂವರೆ ಗಂಟೆ ಇರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಬ್ರಿಗೇಡ್ ರೋಡ್, ಎಂ.ಜಿ.ರೋಡ್‍ನಲ್ಲಿ ಯಾವುದೇ ನಿರ್ಬಂಧವಿಲ್ಲ: ಪರಮೇಶ್ವರ್
Advertisement
Advertisement
ಜಮೀರ್ ವಿಷಯ ಹಾಗೆ ಇರಲಿ, ರಾಜ್ಯದಲ್ಲಿ ಬರಗಾಲ ಆಗಿ 223 ತಾಲೂಕು ಬರ ಎಂದು ಘೋಷಣೆ ಆಗಿದೆ. ಕೇಂದ್ರ ಬರ ಪರಿಹಾರ ಹಣ ಕೊಡಿಸುವ ಕೆಲಸವನ್ನು ಮೊದಲು ಬಿಜೆಪಿಗರು ಮಾಡಲಿ. ನಮ್ಮ ಮಂತ್ರಿಗಳು ಕೇಂದ್ರದ ನಾಯಕರ ಭೇಟಿಯಾಗಿ ಬರ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಯಾಕೆ ಪರಿಹಾರ ಬಿಡುಗಡೆ ಮಾಡಿಲ್ಲ? ಬಿಜೆಪಿ ನಾಯಕರು ನಿಮ್ಮ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿದ್ದೀರಾ ಎಂದು ಕಿಡಿಕಾರಿದ್ದಾರೆ.
Advertisement
Advertisement
ಬಿಜೆಪಿಗರು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಪರಿಹಾರ ಕೊಡಿ ಎಂದು ಹೇಳ್ತಿಲ್ಲ. ಬಿಜೆಪಿಯವರ ನಿಯೋಗ ಹೋಗಿ ಪರಿಹಾರ ಕೇಳಲಿ, ಬರ ಪರಿಹಾರದ ಬಗ್ಗೆ ಕೇಳುವ ಧೈರ್ಯ ಇಲ್ಲ. ಇವರು ಜಮೀರ್ ಬಗ್ಗೆ ಮಾತಾನಾಡುತ್ತಾರೆ. ಜಮೀರ್ ಐಷಾರಾಮಿ ವಿಮಾನದಲ್ಲಿ ಹೋದರು. ನೀವು ಏನು ಮಾಡಿದ್ರಿ ಹೇಳಿ ಮೊದಲು. ಹಣ ಬಿಡುಗಡೆ ಬಗ್ಗೆ ಯಾಕೆ ಹೇಳ್ತಿಲ್ಲ. ಬಿಜೆಪಿ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಬಡವರ ಬಗ್ಗೆ ಕಾಳಜಿ ಇಲ್ಲ. ಅದಕ್ಕೆ ಹಣ ಬಿಡುಗಡೆ ಮಾಡ್ತಿಲ್ಲ. 25 ಸಂಸದರು ಏನ್ ಮಾಡ್ತಿದ್ದಾರೆ? ಈ ಬಗ್ಗೆ ಮೊದಲು ಬಿಜೆಪಿ ನಾಯಕರು ಉತ್ತರ ಕೊಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಾಲೆಗಳಲ್ಲಿ ಮಕ್ಕಳಿಂದಲೇ ಶೌಚಾಲಯ ಕ್ಲೀನ್ ಪ್ರಕರಣ ತನಿಖೆ ಆಗಬೇಕು: ಜಿ.ಪರಮೇಶ್ವರ್