ವಿಶ್ವ ಹಿಂದೂ ಪರಿಷತ್‍ನವರು ದೇಶ ಭಕ್ತರಾ?: ರಾಮಲಿಂಗಾರೆಡ್ಡಿ

Public TV
2 Min Read
Ramalinga Reddy

– ಕಾಂಗ್ರೆಸ್ ಪಕ್ಷ ಒಂದಲ್ಲ ಒಂದು ದಿನ ಅಧಿಕಾರಕ್ಕೆ ಬರುತ್ತೆ

ಚಿಕ್ಕಬಳ್ಳಾಪುರ: ದೇಶವನ್ನ ಲೂಟಿ ಮಾಡಿದ ಈಸ್ಟ್ ಇಂಡಿಯಾ ಕಂಪನಿಯ ಬ್ರೀಟಿಷರು, ಮೊಘಲರು 17 ಬಾರಿ ದಂಡೆತ್ತಿ ಬಂದು ದೇಶವನ್ನ ಲೂಟಿ ಮಾಡಿದ ಮಹಮದ್ ಘಜ್ನಿ ಗಿಂತ ಬಿಜೆಪಿಯವರು ಕಡೆಯಾದವರು ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ದೇಶವನ್ನ ಬಿಜೆಪಿಯವರು ಮಾರಾಟ ಮಾಡುತ್ತಿದ್ದಾರೆ. ದೇಶದ ಆರು ಕಾಲು ಕೋಟಿ ಸಂಪತ್ತನ್ನ ಮಾರಾಟಕ್ಕಿಟ್ಟಿದ್ದಾರೆ. ಇವರು ಈಸ್ಟ್ ಇಂಡಿಯಾ ಕಂಪನಿಯ ದರೋಡೆಕೋರರಿಗಿಂತ ಕಡೆಯಾದವರು. ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಮುಖಂಡರ ಸಭೆ ನಡೆಸಿ ನಂತರ ಮಾತನಾಡಿ ಹೇಳಿದ್ದಾರೆ.ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್‌ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್

ಕಾಂಗ್ರೆಸ್ ಪಕ್ಷ ಸತ್ತು ಹೋಗುತ್ತಿರೋ ಪಕ್ಷ ಅನ್ನೋ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಪಕ್ಷ ಒಂದಲ್ಲ ಒಂದು ದಿನ ಮತ್ತೆ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಪಕ್ಷ ಸಾಯೋದು ಬದುಕೋದು ಬೇರೆ ಪ್ರಶ್ನೆ ಆದರೆ ಕಾಂಗ್ರೆಸ್ ಪಕ್ಷವನ್ನ ಜನ ಸಾವಿರಾರು ವರ್ಷ ನೆನಪಿಟ್ಟುಕೋತಾರೆ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಂತಹ ಪಕ್ಷವಾಗಿದೆ. ದೇಶವನ್ನ ಬಲಿಷ್ಠವಾಗಿ ಕಟ್ಟಿದಂತಹ ಪಕ್ಷ ಕಾಂಗ್ರೆಸ್‍ವಾಗಿದೆ. ಬಿಜೆಪಿಯ ಪೂರ್ವಜರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ರಾ? ಆರ್‍ಎಸ್‍ಎಸ್ ವಿಶ್ವ ಹಿಂದೂ ಪರಿಷತ್ ನವರು ಭಾಗವಹಿಸಿದ್ರಾ? ಅವರು ಯಾರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದವರು ಅಲ್ಲ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದವರು ದೇಶಭಕ್ತರಾಗ್ತಾರಾ? ಎಂದು ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಿಮ್ಮ ಪ್ರೋತ್ಸಾಹ, ಬೆಂಬಲ ನನಗೆ ಶ್ರೀರಕ್ಷೆ : ಧ್ರುವ ಸರ್ಜಾ

ramalinga reddy

ಆಸ್ತಿಪಾಸ್ತಿ ಪ್ರಾಣ ಕಳೆದುಕೊಂಡವರು ಕಾಂಗ್ರೆಸ್ ನವರು ದೇಶಭಕ್ತರು. ಈ ಬಿಜೆಪಿಯವರು ಯಾರ ಯಾರ ಜೊತೆಯಲ್ಲಿ ಶಾಮೀಲಾಗಿದ್ರಾ ಗೊತ್ತಾ? ಚರಿತ್ರೆ ಓದಿದರೆ ದೇಶ ಭಕ್ತರು ಯಾರೆಂಬುದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು. ಇನ್ನೂ ಉತ್ತರಪ್ರದೇಶದಲ್ಲಿ ಹಿಂಸಾಚಾರ ನಡೆದು 4-5 ಮಂದಿ ರೈತರು ಸತ್ತಿದ್ದಾರೆ. ಅಲ್ಲಿ ಪ್ರಜಾಪ್ರಭುತ್ವ ಇಲ್ಲ. ಡಾನ್‍ಗಳ ಆಡಳಿತ ನಡೆಯುತ್ತಿದೆ. ಪ್ರಿಯಾಂಕಾ ಗಾಂಧಿಯನ್ನು ತಡೆಯುತ್ತಾರೆ. ಎಲ್ಲಿದೆ ಪ್ರಜಾಪ್ರಭುತ್ವ ಎಂದು ಪ್ರಶ್ನಿಸಿದ್ದಾರೆ.

Share This Article