ಬೆಂಗಳೂರು : ತೀವ್ರ ಕಗ್ಗಂಟ್ಟಾಗಿರೋ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನಾ ದಿನಾ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಸಿದ್ದರಾಮಯ್ಯ ಬಣ, ಮೂಲ ಕಾಂಗ್ರೆಸ್ ಬಣ, ಡಿಕೆಶಿ, ಸತೀಶ್, ಎಸ್.ಆರ್.ಪಾಟೀಲ್ ಸೇರಿದಂತೆ ಅನೇಕ ನಾಯಕರು ಟವಲ್ ಹಾಕಿದ್ದಾರೆ. ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನಧ ರೇಸ್ ಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೆಸರು ಹೊಸ ಎಂಟ್ರಿ ಆಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ನೀಡಬೇಕು ಅಂತ ಅಭಿಯಾನ ಪ್ರಾರಂಭವಾಗಿದೆ. ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಹಾಲಿ ಕಾರ್ಪೋರೇಟರ್ ಗಳು ರಾಮಲಿಂಗಾರೆಡ್ಡಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿ ಅಂತ ಟ್ವಿಟ್ಟರ್ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ 3 ಕಾರ್ಯಾಧ್ಯಕ್ಷ ಸ್ಥಾನ ಸಿದ್ದರಾಮಯ್ಯ ಹೊಸ ಗೇಮ್
Advertisement
Advertisement
ರಾಮಲಿಂಗಾರೆಡ್ಡಿ 7 ಬಾರಿ ಶಾಸಕರು. ಪಕ್ಷದ ಹಿರಿಯ ಮುಖಂಡರು. ಪಕ್ಷಕ್ಕಾಗಿ ಎಲ್ಲಾ ತ್ಯಾಗ, ಸಹಕಾರ ಕೊಟ್ಟಿದ್ದಾರೆ. ಸಚಿವರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಎಲ್ಲರನ್ನು ಸರಿದೂಗಿಸಿಕೊಂಡು ಹೋಗೋ ಸಾಮರ್ಥ್ಯ ಇದೆ. ಹೀಗಾಗಿ ರಾಮಲಿಂಗಾರೆಡ್ಡಿಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ಪಕ್ಷದ ಪ್ರಬಲವಾಗುತ್ತೆ ಅನ್ನೋದು ಬೆಂಬಲಿಗರ ವಾದ. ರಾಮಲಿಂಗಾರೆಡ್ಡಿ ಪರ ಎಷ್ಟು ನಾಯಕರು ಬೆಂಬಲ ಕೊಡ್ತಾರೋ ಗೊತ್ತಿಲ್ಲ. ಹೈಕಮಾಂಡ್ ನಿರ್ಧಾರ ಮಾಡಿದ್ರೆ ಕಾಂಗ್ರೆಸ್ ನಲ್ಲಿ ಯಾವುದು ಅಸಾಧ್ಯ ಅಲ್ಲ. ಇದನ್ನೂ ಓದಿ: ಅಧ್ಯಕ್ಷ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮನೆ ಬಾಗಿಲು ತಟ್ಟಿದ ಡಿಕೆಶಿ