– ನನಗಿಂತ ಸೀನಿಯರ್ಸ್ ಕ್ಯಾಬಿನೆಟ್‍ನಲ್ಲಿದ್ದಾರೆ
– ಯುವಕರಿಗೆ ಆದ್ಯತೆ ಕೊಟ್ಟು ಹಿರಿಯರನ್ನು ಕಡೆಗಣಿಸಬಾರ್ದು
– ನಮ್ಮನ್ನ ಮೂಲೆಯಲ್ಲಿಡಲು ಕೆಲವರ ಪ್ರಯತ್ನ
ಬೆಂಗಳೂರು: ಸಚಿವ ಡಿ.ಕೆ ಶಿವಕುಮಾರ್ 4ನೇ ಬಾರಿ ಸಚಿವರಾಗಿದ್ದಾರೆ. ಪರಮೇಶ್ವರ್ ಅವರು ಕೂಡ 4 ಬಾರಿ, ದೇಶಪಾಂಡೆ ಅವರು ಐದಾರು ಬಾರಿ ಮಂತ್ರಿ ಆಗಿದ್ದಾರೆ. ನಾವೇನು ತಪ್ಪು ಮಾಡಿದ್ದೇವೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅಸಾಮಾಧಾನ ಹೊರಹಾಕಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರ ಕಡೆಗಣನೆ ಹಾಗೂ ಕೆಲವು ಕಾಂಗ್ರೆಸ್ ಸಚಿವರ ಸಂಘಟನಾ ದೂರದೃಷ್ಟಿತ್ವ ಕೊರತೆಯಿಂದಾಗಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು. ಹಿರಿಯರು ನೀಡಿದ ಸಲಹೆಗಳನ್ನು ಪರಿಗಣಿಸದೇ ಇರುವುದು, ಕೆಲವು ಸಚಿವರ ಕಾರ್ಯಕ್ಷಮತೆಯೂ ಸಹ ಪಕ್ಷಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣವಾಯಿತು
1/6
— Ramalinga Reddy (@RLR_BTM) June 4, 2019
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಿಶ್ರ ಸರ್ಕಾರ ಆದಾಗ ನಾನು 6 ತಿಂಗಳಿನಿಂದ ಏನೂ ಮಾತನಾಡಿರಲಿಲ್ಲ. ಡಿಸೆಂಬರ್ ನಲ್ಲಿ ಕೊನೆಯದಾಗಿ ಮಾಧ್ಯಮಗಳ ಜೊತೆ ಮಾತನಾಡಿದೆ. ಪಕ್ಷದಲ್ಲಿ ತಾರತಮ್ಯ ಆಗುತ್ತಿದೆ ಎಂದು ಹೇಳಿದ್ದೆ. ಯಾವ ರೀತಿ ತಾರತಮ್ಯ ಎಂದು ಹೇಳಿದರೆ, ಈಗ ನಾವೆಲ್ಲ ಸಿನಿಯರ್ಸ್ ಆಗಿದ್ರೂ ಮಂತ್ರಿ ಸ್ಥಾನ ಕೊಡಲಿಲ್ಲ. ನಮಗೆ ಮಂತ್ರಿ ಸ್ಥಾನ ಕೊಡಿ ಎಂದು ನಾವು ಅವರಿಗೆ ಕೇಳೂ ಇಲ್ಲ. ಅದಕ್ಕಾಗಿ ಮನೆ ಬಾಗಿಲಿಗೆ ಹೋಗಿಲ್ಲ ಎಂದರು.
Advertisement
ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ಪಕ್ಷದ ಕುರಿತು ಏನೂ ಅರಿವಿಲ್ಲದೇ ಬಂದ ಹೊಸಬರಿಗೆ,ವಲಸಿಗರಿಗೆ ಮಣೆ ಹಾಕಿದ್ದೇ ಇಂದಿನ ಈ ಪರಿಸ್ಥಿತಿಗೆ ಕಾರಣ.
ರಾಜ್ಯದ ಮುಂಚೂಣಿ ನಾಯಕರು ಹಾಗೂ ಉಸ್ತುವಾರಿಗಳು ಪಕ್ಷದ ಆಂತರಿಕ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಎಡವಿದ್ದಾರೆ.
2/6
— Ramalinga Reddy (@RLR_BTM) June 4, 2019
Advertisement
ಸೀನಿಯಾರಿಟಿ ಮೇಲೆ ಸಚಿವ ಸ್ಥಾನ ಕೊಡಬೇಕು ಎಂದು ಮೊದಲಿನಿಂದಲೂ ಇದೆ. ಆದರೆ ಈಗ ಹೊಸಬರಿಗೆ ಅವಕಾಶ ಕೊಡಬೇಕು. ಹಾಗಾಗಿ ನಿಮಗೆ ಕೊಡುವುದಕ್ಕೆ ಆಗಲ್ಲ ಎಂದು ಹೇಳಿದ್ದರು. ಆದರೆ ನನಗಿಂತ ಹೆಚ್ಚು ಸೀನಿಯರ್ಸ್ ಆಗಿರುವವರು ಈಗ ಕ್ಯಾಬಿನೆಟ್‍ನಲ್ಲಿ ಇದ್ದಾರೆ. ಅವರಿಗೊಂದು ನೀತಿ ನಮಗೊಂದು ನೀತಿನಾ ಎಂದು ಕೇಳಿದೆ. ರೆಡ್ಡಿ ಕಮ್ಯೂನಿಟಿಗೆ ಈಗಾಗಲೇ ಕೊಡಲಾಗಿದೆ. ನಾಲ್ವರು ಬ್ರಾಹ್ಮಣರಿಗೆ ಸ್ಥಾನ ಕೊಟ್ಟಿದ್ದಾರೆ. ಇಬ್ಬರು ಲಿಂಗಾಯತರಿಗೆ ಸಚಿವ ಸ್ಥಾನ ಕೊಡಲಾಗಿದೆ. ಈ ತಾರತ್ಯಮ ಏಕೆ ಎಂದು ಈ ಹಿಂದೆ ಕೇಳಿದ್ದೆ ಎಂದರು.
Advertisement
ನಮ್ಮ ಸರ್ಕಾರವಿದ್ದೂ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಉತ್ಸಾಹ ಕಳೆದುಕೊಂಡಿದ್ದರು. ಇದಕ್ಕೆ ಪ್ರಮುಖ ಸ್ಥಾನದಲ್ಲಿರುವ ಕೆಲವು ಕಾಂಗ್ರೆಸ್ ಸಚಿವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಯಾವುದೇ ಉತ್ತಮ ಭಾಂಧವ್ಯ, ಸಂವಹನ ಇಲ್ಲದಿರುವುದು, ಹಿರಿಯ ನಾಯಕರು ಹಾಗೂ ಕಾರ್ಯಕರ್ತರ ನಿರ್ಲಕ್ಷ ಕಾರಣವಾಗಿದೆ.
3/6
— Ramalinga Reddy (@RLR_BTM) June 4, 2019
ಈ ಚುನಾವಣೆ ಆದ ಮೇಲೆ ಪಕ್ಷದಲ್ಲಿ ಸಾಕಷ್ಟು ವಿಧಿಮಾನಗಳು ಆಗಿದೆ. ಈ ರೀತಿ ಆಗುತ್ತಿರುವಾಗ ನನಗೆ ತಪ್ಪು ಎನಿಸಿದಾಗ ನಾನು ಹೇಳದೇ ಹೋದರೆ ಅದು ತಪ್ಪಾಗುತ್ತದೆ. ಯುವಕರಿಗೆ ಆದ್ಯತೆ ಕೊಡಬೇಕು. ಅದೇ ರೀತಿ ಹಿರಿಯರನ್ನು ಕಡೆಗಣಿಸಬಾರದು. ಮತ್ತೆ ಕೆಲವರನ್ನು ಬಿಟ್ಟು ಕೆಲವರನ್ನು ಮಾತ್ರ ಹಿಡಿದುಕೊಳ್ಳುತ್ತಾರೆ. ಅದಕ್ಕೆ ನಾನು ತಾರತಮ್ಯ ಎಂದು ಹೇಳಿದ್ದೇನೆ. ಈಗ ಡಿ.ಕೆ ಶಿವಕುಮಾರ್, ಪರಮೇಶ್ವರ್, ಜಾರ್ಜ್, 4 ಬಾರಿ ಸಚಿವರಾಗಿದ್ದಾರೆ. ಅವರಿಗೊಂದು ಮಾನದಂಡ, ನನಗೊಂದು ಮಾನದಂಡನಾ ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು.
ಈ ಕುರಿತು ಹಲವು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಸವಾಲಿನ ದಿನಗಳನ್ನು ಎದುರಿಸಲು, ಪಕ್ಷ ಹಾಗೂ ಸರ್ಕಾರದಲ್ಲಿ ಹಿರಿಯರ ಕಡೆಗಣನೆ ಸರಿದೂಗಿಸಬೇಕಾಗಿದೆ.
4/6 pic.twitter.com/R6qAplDrl0
— Ramalinga Reddy (@RLR_BTM) June 4, 2019
ನಾನು 1973ರಲ್ಲಿ ಕಾಂಗ್ರೆಸ್ ಸೇರಿದೆ. ನಮ್ಮ ಪಕ್ಷದಲ್ಲಿ 5-6 ಜನ ಸೀನಿಯರ್ಸ್ ಇದ್ದಾರೆ. ಈವಾಗ ನಮ್ಮನೆಲ್ಲ ಮೂಲೆಯಲ್ಲಿ ಇಟ್ಟು ನಮಗೆ ಸಬ್‍ಜೂನಿಯರ್ಸ್, ಹೊಸಬರಿಗೆ ಮಂತ್ರಿ ಸ್ಥಾನ ಕೊಟ್ಟರೆ ಸಹಜವಾಗಿ ನಮಗೆ ಬೇಸರ ಎನಿಸುತ್ತದೆ. ನಮಗೇನು ಆ ಸಾಮಥ್ರ್ಯ ಇಲ್ವಾ ಅಥವಾ ನಮ್ಮ ಮೇಲೆ ಏನಾದರೂ ಆರೋಪಗಳಿದ್ದೀಯಾ?. ಈ ತಾರತಮ್ಯ ಏಕೆ ಎಂದು ನನಗೆ ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು. ನನ್ನ ಪಕ್ಷ ಸರಿಯಾಗಿ ನಡೆಸಿಕೊಂಡಿದ್ದರೆ ನಾನು ಮಾಧ್ಯಮದ ಮುಂದೆ ಬರುತ್ತಿರಲಿಲ್ಲ ಎಂದು ಹೇಳಿದರು.
ಸರ್ಕಾರದಲ್ಲಿ ಹಿರಿಯರಿಗೆ ಪ್ರಾತಿನಿಧ್ಯ ನೀಡುವಂತಾಗಲು ಕಾಂಗ್ರೆಸ್ ಪಕ್ಷದ ಹಿರಿಯರೆಲ್ಲರೂ ಒಂದೆಡೆ ಸೇರಿ ಪಕ್ಷದ ಹಿತ ಸಮಾಲೋಚಿಸಬೇಕಾಗಿದೆ. ಜೊತೆಗೆ ಹಿರಿಯರು ಯಾರೂ ಪಕ್ಷ ಬಿಡದಂತೆ ಎಚ್ಚರಿಕೆವಹಿಸಬೇಕಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಹಿರಿಯ ನಾಯಕರು ಪಕ್ಷದಲ್ಲಿ ಮುಂದುವರೆಯುವುದು ಕಷ್ಟ ಸಾಧ್ಯವಾದೀತು.
5/6 pic.twitter.com/3KZOS3MgjN
— Ramalinga Reddy (@RLR_BTM) June 4, 2019
ನಮ್ಮನ್ನು ಕಾರ್ನರ್ ಮಾಡಲು ಕೆಲವು ಮಂದಿ ಪ್ರಯತ್ನಿಸುತ್ತಿದ್ದಾರೆ. ನಾನು ವೈಯಕ್ತಿಕವಾಗಿ ಯಾರ ಹೆಸರು ಹೇಳಲ್ಲ, ಅಲ್ಲದೆ ಯಾರ ವಿರುದ್ಧವೂ ಟೀಕೆ ಮಾಡುವುದಿಲ್ಲ. ಪಕ್ಷದಲ್ಲಿ ಕೆಲವು ಕೂತು ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಳಿಕ ಎಲ್ಲರ ಮೇಲೂ ಹೇರುತ್ತಾರೆ ಎಂದು ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದರು.