ಬೆಂಗಳೂರು: ಮುಜರಾಯಿ ಇಲಾಖೆಯ (Muzrai Department) ‘ಸಿ’ ವರ್ಗದ ದೇವಾಲಯಗಳಿಗೆ ಹೆಚ್ಚು ಅನುದಾನ ನೀಡಬೇಕು. ಜೊತೆಗೆ ತಸ್ತಿಕ್ ಹಣ ಹೆಚ್ಚಳ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡಿರೋದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸಿಎಂ ಜೊತೆ ಬಜೆಟ್ ಪೂರ್ವ ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮುಜರಾಯಿ ಇಲಾಖೆ ಮತ್ತು ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಹಲವು ಬೇಡಿಕೆ ಇಟ್ಟಿದ್ದೇನೆ. ತಸ್ತಿಕ್ ಹಣ ಹೆಚ್ಚು ಮಾಡಲು ಸಿಎಂಗೆ ಬೇಡಿಕೆ ಇಟ್ಟಿದ್ದೇವೆ. ಮುಜರಾಯಿ ಇಲಾಖೆಗೆ ಹೆಚ್ಚು ಅನುದಾನ ನೀಡಬೇಕು. ‘ಸಿ’ ವರ್ಗದ ದೇವಸ್ಥಾನಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕು. ಕಾಶಿಯಲ್ಲಿ ಇದ್ದ ಕಟ್ಟಡ ಬಿದ್ದು ಹೋಗಿದೆ. ಹೊಸ ಕಟ್ಟಡ ನಿರ್ಮಾಣ ಮಾಡಲು ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಆನೇಕಲ್ | ಸಿಲಿಂಡರ್ ಬ್ಲಾಸ್ಟ್ – ಸ್ಫೋಟದ ತೀವ್ರತೆಗೆ ಮನೆ ಛಾವಣಿಯೇ ಚಿಂದಿ
Advertisement
Advertisement
ಸಾರಿಗೆ ಇಲಾಖೆ ಸಂಬಂಧ ಹೊಸದಾಗಿ 3,500 ಬಸ್ ಖರೀದಿ ಅವಶ್ಯಕತೆ ಇದೆ. 15 ವರ್ಷ ಓಡಿರೋ ಬಸ್ ಬದಲಾವಣೆ ಮಾಡಬೇಕು. ಹೀಗಾಗಿ ಹಣ ಕೊಡಬೇಕು. ವಾಯುವ್ಯ ಕರ್ನಾಟಕಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಬಿಜೆಪಿ ಅವಧಿಯಲ್ಲಿ ಇದ್ದ ಸಾಲಗಳನ್ನು ತೀರಿಸಲು ಸಹಾಯ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದೇವೆ. ಸಿಎಂ ಕೂಡಾ ಇದಕ್ಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಮನಸಿನಲ್ಲೂ ಕೊಡಬೇಕು ಅಂತ ಇದೆ. ಏನಾಗುತ್ತೋ ನೋಡೋಣ ಎಂದರು. ಇದನ್ನೂ ಓದಿ: ಆನಂದ್ ಸಿಂಗ್ ವಿರುದ್ಧ ಅಕ್ರಮ ಗಣಿಗಾರಿಕೆ ಕೇಸ್ – ಫೆ.24ಕ್ಕೆ ಅಂತಿಮ ತೀರ್ಪು ಪ್ರಕಟ
Advertisement