– ಚಾಮರಾಜಪೇಟೆ ರಾಮೇಶ್ವರ ಮಂದಿರಕ್ಕೆ ರಾಮನ ಶೋಭಾಯಾತ್ರೆ
ಬೆಂಗಳೂರು: ಅದು ಶ್ರೀರಾಮ ಪಾದ ಊರಿದ ಪವಿತ್ರ ಜಾಗ. ಏರಿಯಾದ ಹೆಸ್ರಲ್ಲಿ ರಾಮನ ಪಾದವಿದೆ. ರಾಮನೇ ರಾಯನಾಗಿರೋ ಆ ಏರಿಯಾದಲ್ಲಿ ರಾಮನ ವೈಭವವನ್ನ ಸಂಭ್ರಮಿಸೋಕೆ ಆ ಏರಿಯಾ ಸಜ್ಜಾಗಿದೆ. ರಾಮನ ನಾಮ ಜೊತೆಗೆ ವೈಭವದ ತೇರು ಸಾಗೋಕೆ ತಯಾರಿ ನಡೆದಿದೆ.
ವರ್ಷಗಳ ಹಿಂದೆ ಅಕ್ಷರಶಃ ಹೊತ್ತಿ ಉರಿದಿದ್ದ ಬೆಂಗಳೂರು ಏರಿಯಾ ಅಂದ್ರೆ ಪಾದರಾಯನಪುರ (Padarayanapura). ಸದಾ ಒಂದಲ್ಲ ಒಂದು ಸುದ್ದಿಯಾಗಿ ಚಾಲ್ತಿಯಲ್ಲಿರೋ ಪಾದರಾಯನಪುರಕ್ಕೆ ತನ್ನದೇ ಆದ ಇತಿಹಾಸವಿದೆ. ಶ್ರೀರಾಮ ಚಂದ್ರನು ವಿಶ್ರಮಿಸಿ ತನ್ನ ಪಾದವನ್ನ ಊರಿದ್ದ ಜಾಗದಲ್ಲಿ ಶ್ರೀರಾಮ (Srirama) ಪಾದದ ಶಿಲೆಯಿದೆ. ಈ ಹಿನ್ನೆಲೆ ಏರಿಯಾಗೆ ಪಾದರಾಯನಪುರ ಅನ್ನೋ ಹೆಸ್ರು ಬಂದಿದೆ ಅನ್ನೋ ಪ್ರತೀತಿ ಇದೆ. ಇದನ್ನೂ ಓದಿ: 600 ಕೋಟಿ ವೆಚ್ಚದ ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣಕ್ಕೆ ಸಿಎಂ ಶಂಕುಸ್ಥಾಪನೆ
ಸಾಕಷ್ಟು ಧರ್ಮ ದಂಗಲ್‍ಗೆ ಕಾರಣವಾಗಿದ್ದ ಪಾದರಾಯನಪುರದಲ್ಲಿ ಈ ಬಾರಿ ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಶ್ರೀರಾಮನ ವೈಭವದ ಶೋಭಾಯಾತ್ರೆ ಮಾಡೋಕೆ ಚಾಮರಾಜಪೇಟೆ ರಾಮೋತ್ಸವ ಸಮಿತಿಯಿಂದ ನಿರ್ಧಾರ ಮಾಡಲಾಗಿದೆ. ಗೋರಿಪಾಳ್ಯ (Goripalya) ಪಾದಾರಾಯನಪುರದ ಪುರಾತನ ರಾಮಪಾದ ದೇವಸ್ಥಾನದಿಂದ ಚಾಮರಾಜಪೇಟೆಯ ರಾಮೇಶ್ವರ ದೇವಸ್ಥಾನದವರೆಗೆ ಶೋಭಾಯಾತ್ರೆ ಮಾಡಲು ಭರ್ಜರಿ ಸಿದ್ಧತೆ ಮಾಡಲಾಗಿದೆ.
ಪಾದರಾಯನಪುರದಿಂದ ಶೋಭಾಯಾತ್ರೆಗೆ ಪರ್ಮಿಷನ್ ಸಿಗುತ್ತಾ ಅನ್ನೋದು ಸದ್ಯದ ಪ್ರಶ್ನೆ. ಈಗಾಗಲೇ ಸ್ಥಳೀಯ ಪೊಲೀಸರಿಗೆ ರಾಮೋತ್ಸವ ಸಮಿತಿ ಮನವಿ ಸಲ್ಲಿಸಿದೆ. ಮಾರ್ಚ್ 30ರಂದು ಇದೇ ಮೊದಲ ಬಾರಿಗೆ ನಡೆಯುತ್ತಿರುವ ರಾಮನವಮಿ ಶೋಭಾಯಾತ್ರೆಗೆ ಕಳೆದ ಬಾರಿ ಕೂಡ ಮನವಿ ಮಾಡಲಾಗಿತ್ತು. ಕರಗ ಕಾರಣ ನೀಡಿ ಅನುಮತಿ ನಿರಾಕರಣೆ ಮಾಡಲಾಗಿತ್ತು.
ಸದ್ಯಕ್ಕೆ ಪೋಲಿಸ್ರು ಮೌನವಹಿಸಿದ್ದು, ರಾಮೋತ್ಸವ ಸಮಿತಿಯ ಮನವಿಗೆ ಸ್ಪಂದಿಸಿದೇ ತಟಸ್ಥ ನಿಲುವನ್ನ ತೋರಿದೆ. ಸರ್ಕಾರ ಹಾಗೂ ಪೋಲಿಸ್ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ರೆ ರಾಮನ ಥೇರು ಪಾದರಾಯನಪುರದಲ್ಲಿ ಸಾಗಲಿದೆ.