ಪಟ್ನಾ: ರಾಮ ದೇವರಲ್ಲ, ರಾಮನ ಮೇಲೆ ನನಗೆ ನಂಬಿಕೆಯೂ ಇಲ್ಲ ಎಂದು ಬಿಹಾರ್ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾನ್ಜಿ ಹೇಳಿದ್ದಾರೆ.
ಹಿಂದೂಸ್ತಾನ್ ಅವಾಮ್ ಮೋರ್ಚಾ (ಹೆಚ್‌ಎಎಂ) ಮುಖ್ಯಸ್ಥ ಮಾನ್ಜಿ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇದನ್ನೂ ಓದಿ: ಜೆಎನ್‌ಯು ಕ್ಯಾಂಪಸ್ ಬಳಿ ಕೇಸರಿ ಧ್ವಜ ಹಾರಿಸಿದ ಹಿಂದೂ ಸೇನೆ
Advertisement
Advertisement
ತುಳಸೀದಾಸ್ ಮತ್ತು ವಾಲ್ಮೀಕಿ ಅವರು ತಮ್ಮ ಸಂದೇಶಗಳನ್ನು ಹೇಳಲು ರಾಮ ಎನ್ನುವ ಪಾತ್ರವನ್ನು ಸೃಷ್ಟಿಸಿದ್ದಾರೆ. ಅವರು ಬರೆದಿರುವ ರಾಮಾಯಣ ಮಹಾಕಾವ್ಯದಲ್ಲಿ ಉತ್ತಮ ಅಂಶಗಳು ಇವೆ. ಅದರ ಮೇಲೆ ನನಗೆ ನಂಬಿಕೆ ಇದೆ. ನನಗೆ ತುಳಸೀದಾಸ್ ಮತ್ತು ವಾಲ್ಮೀಕಿ ಮೇಲೆ ನಂಬಿಕೆ ಇದೆಯೇ ಹೊರತು ರಾಮನಲ್ಲಲ್ಲ ಎಂದು ಮಾನ್ಜಿ ತಿಳಿಸಿದ್ದಾರೆ.
Advertisement
ಈ ವಿಶ್ವದಲ್ಲಿರುವುದು ಎರಡೇ ಜಾತಿ. ಶ್ರೀಮಂತ ಮತ್ತು ಬಡವ ಜಾತಿ. ಆದರೆ ನಮ್ಮಲ್ಲಿ ದಲಿತರ ವಿಚಾರವಾಗಿ ಬ್ರಾಹ್ಮಣರು ತಾರತಮ್ಯ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ನಂತರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೈಯಲ್ಲಿ ‘ಡೆಲ್ಲಿ ಫೈಲ್ಸ್’
Advertisement
ಶಬರಿ ಕೊಟ್ಟ ರುಚಿಯ ಹಣ್ಣನ್ನು ರಾಮ ತಿಂದನು ಎಂಬುದು ನಾವು ನಿತ್ಯ ಕೇಳುವ ಕಥೆ. ನಾವು ಕಚ್ಚಿದ ಹಣ್ಣನ್ನು ನೀವು ತಿನ್ನುವುದಿಲ್ಲ. ಆದರೆ ನಾವು ಮುಟ್ಟಿದ್ದನ್ನು ತಿನ್ನುತ್ತೀರಿ ಎಂದು ಚಾಟಿ ಬೀಸಿದ್ದಾರೆ.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿ ಬಿಹಾರ್‌ನಲ್ಲಿ ಬಿಜೆಪಿ, ಜೆಡಿ(ಯು), ಹೆಚ್‌ಎಎಂ, ವಿಐಪಿ ಪಕ್ಷಗಳು ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ಮಾನ್ಜಿ ಅವರ ಪುತ್ರ ಸಂತೋಷ್ ಮಾನ್ಜಿ ಅವರು ನಿತೀಶ್ ಕುಮಾರ್ ನೇತೃತ್ವದ ಬಿಹಾರ್ ಸಂಪುಟದ ಸಚಿವರಾಗಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಮನೆ, ಬದುಕು ಕಸಿಯಲು ಬಿಜೆಪಿ ನಾಯಕರಲ್ಲೇ ಪೈಪೋಟಿ: ಮುಫ್ತಿ