ಲಕ್ನೋ: ಅಯೋಧ್ಯೆ (Ayodhya) ರಾಮ ಮಂದಿರ (Ram Temple) ನಿರ್ಮಾಣ ಕಾಮಗಾರಿ ಶೇ. 50 ರಷ್ಟು ಪೂರ್ಣಗೊಂಡಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ತಿಳಿಸಿದ್ದಾರೆ.
ದೇವಾಲಯದ ಟ್ರಸ್ಟ್ ಪ್ರಕಾರ, 2024 ರಲ್ಲಿ ಮಂಕರ ಸಂಕ್ರಾಂತಿ ದಿನದಂದು ದೇವಾಲಯದ ಗರ್ಭಗುಡಿಯಲ್ಲಿ ರಾಮನ ವಿಗ್ರಹವನ್ನು ಇರಿಸುವ ಸಾಧ್ಯತೆಯಿದೆ. 2020 ರಲ್ಲಿ ಪ್ರಾರಂಭವಾದ ದೇವಾಲಯದ ನಿರ್ಮಾಣವು 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮದ್ಯ ನೀತಿ ಪ್ರಕರಣ – ಬೆಳ್ಳಂಬೆಳಗ್ಗೆ 35 ಕಡೆ ಇಡಿ ದಾಳಿ
Advertisement
Advertisement
1949ರಿಂದ ಆಂದೋಲನ ಆರಂಭವಾಗಿದ್ದು, ರಾಮಮಂದಿರದ ಕನಸನ್ನು ನನಸಾಗಿಸಲು ಸಮರ್ಪಣಾ ಪ್ರಯತ್ನಗಳು ನಡೆದಿವೆ. ಈಗ ಈ ಪ್ರಯತ್ನಗಳಿಂದಾಗಿ ದೇವಾಲಯದ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
Advertisement
ಶ್ರೀಕೃಷ್ಣ ದೇವರ ʻಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಶು ಕದಾಚನʼ ಉಪದೇಶದಂತೆ ನಾವು ರಾಮ ಮಂದಿರ ನಿರ್ಮಾಣ ಕಾರ್ಯ ನಡೆಸುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಮಸೀದಿ ಗುಮ್ಮಟದ ಮೇಲಿದ್ದ 100 ವರ್ಷದಷ್ಟು ಹಳೆಯ ಚಿನ್ನದ ಭಾಗ ಕಳ್ಳತನ