ಗಾಂಧಿನಗರ: ಉತ್ತರ ಪ್ರದೇಶ, ಮಧ್ಯಪ್ರದೇಶದ ಬಳಿಕ ಗುಜರಾತ್‍ನಲ್ಲಿಯೂ ಬುಲ್ಡೋಜರ್ ಈಗ ಘರ್ಜನೆ ಮಾಡುತ್ತಿದೆ.
ರಾಮನವಮಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 3 ದಿನಗಳ ಹಿಂದೆ ಮಧ್ಯಪ್ರದೇಶದ ಖಾರ್ಗೋನ್‍ನಲ್ಲಿ ಅಕ್ರಮವಾಗಿ ನಿರ್ಮಾಣಗೊಂಡ ಕೆಲ ಅಂಗಡಿಗಳು, ಮನೆಗಳನ್ನು ಬುಲ್ಡೋಜರ್ ಮೂಲಕ ಸರ್ಕಾರವೇ ನಾಶಪಡಿಸಿತ್ತು. ಇದೀಗ ಅಂಥಾದ್ದೇ ದೃಶ್ಯ ಗುಜರಾತ್‍ನ ಖಂಬತ್‍ನಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಯೋಗಿಗೆ ಬೆದರಿಕೆ ಹಾಕಿದ್ದ ಎಸ್‍ಪಿ ಶಾಸಕನ ಅಕ್ರಮ ಪೆಟ್ರೋಲ್ ಬಂಕ್ ಧ್ವಂಸ
Advertisement
— DeshGujarat (@DeshGujarat) April 15, 2022
Advertisement
ರಾಮನವಮಿ ಯಾತ್ರೆ ವೇಳೆ ಹಿಂಸಾಚಾರ ನಡೆದಿದ್ದ ಪ್ರದೇಶದಲ್ಲಿರುವ ಅಂಗಡಿಗಳನ್ನು ಗುಜರಾತ್ ಸರ್ಕಾರ ಬುಲ್ಡೋಜರ್ ಮೂಲಕ ಧ್ವಂಸ ಮಾಡಿದೆ.
Advertisement
ದರ್ಗಾ ಮುಂದಿದ್ದ ಅಂಗಡಿಗಳನ್ನು ನಾಶ ಪಡಿಸಲಾಗಿದ್ದು ರಾಮನವಮಿ ಹಿಂಸಾಚಾರ ಸಂಪೂರ್ಣ ಪೂರ್ವನಿಯೋಜಿತ ಎಂದು ಹೇಳಿದೆ.
Advertisement
ದರ್ಗಾದ ಮೌಲ್ವಿಯೇ ಹಿಂಸಾಚಾರದ ಪ್ರಮುಖ ಸೂತ್ರಧಾರ. ಅಕ್ರಮ ಮತ್ತು ಕ್ರಿಮಿನಲ್ ಚಟುವಟಿಕೆಗಳು ಇಲ್ಲಿ ನಡೆಯುತ್ತಿದ್ದವು. ಈಗಾಗಲೇ ಮೌಲ್ವಿ ಸೇರಿ 11 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.