– ರಾಜಾಜಿನಗರದ ರಾಮಮಂದಿರದಲ್ಲಿ ವಿಶೇಷ ಪೂಜೆ
ಬೆಂಗಳೂರು: ರಾಜಧಾನಿಯಲ್ಲಿ ಇಂದು ಎಲ್ಲೆಡೆ ರಾಮನವಮಿ(Ram Navami) ಸಂಭ್ರಮ ಮನೆಮಾಡಿದ್ದು, ದೇವಾಲಯಗಳಲ್ಲಿ ರಾಮನಾಮ ಸ್ಮರಣೆ ಮೊಳಗಿದೆ. ರಾಮನವಮಿ ಪ್ರಯುಕ್ತ ರಾಜಾಜಿನಗರದ(RajajiNagara) ರಾಮಮಂದಿರದಲ್ಲಿ ವಿಶೇಷ ಪೂಜೆ-ಪುನಸ್ಕಾರ ನೆರವೇರಿತು.
ರಾಮನವಮಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ, ಪೂಜೆ ಮಾಡಲಾಗಿದೆ. ಇದೀಗ ಭಕ್ತಗಣ ರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅಲ್ಲದೇ 63 ಅಡಿ ಎತ್ತರದ ರಾಮಾಂಜನೇಯ ಮೂರ್ತಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದಲೇ ದೇಗುಲದತ್ತ ಭಕ್ತ ಸಾಗರ ಹರಿದುಬರುತ್ತಿದೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಮಹಿಳೆ ರೋಲರ್ ಕೋಸ್ಟರ್ ಆಡುವಾಗ ಕೆಳಗೆ ಬಿದ್ದು ಸಾವು
ರಥೋತ್ಸವ ಮೆರವಣಿಗೆಗೆ ಬ್ರಹ್ಮರಥವು ಸಜ್ಜಾಗಿ ನಿಂತಿದ್ದು, ದೇವಾಲಯದಲ್ಲಿ ಮಂಡಲ ಹಾಕಿ ವಿಶೇಷ ಪೂಜೆ-ಪುನಸ್ಕಾರ ನೆರವೇರಿಸಲಾಯಿತು. ಇದನ್ನೂ ಓದಿ: ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ
ಇತ್ತ ಪುಟಾಣಿಗಳು ಬಾಲರಾಮನ ವೇಷ ತೊಟ್ಟು ಬಂದಿದ್ದು, ರಥೋತ್ಸವದಲ್ಲಿ ಎಲ್ಲರ ಗಮನ ಸೆಳೆಯಿತು. ಇನ್ನೂ ಶ್ರೀರಾಮನ ಭವ್ಯ ರಥವು ರಾಜಾಜಿನಗರದ ರಾಜಬೀದಿಯಲ್ಲಿ ಸಾಗಿತು.