ಅಂದು ಪಾಕ್‌ ಪಡೆಗಳಿಂದ ಧ್ವಂಸ – ಇಂದು ರಾಷ್ಟ್ರಪತಿಗಳಿಂದ ದೇವಾಲಯ ಉದ್ಘಾಟನೆ

Public TV
1 Min Read
Kali Mandir

ಢಾಕಾ: ಬಾಂಗ್ಲಾದಲ್ಲಿ ಪಾಕ್ ಬೀಳಿಸಿದ್ದ ಕಾಳಿ ದೇವಾಲಯವನ್ನು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು  ಉದ್ಘಾಟನೆ ಮಾಡಿದ್ದಾರೆ.

ಬಾಂಗ್ಲಾದೇಶದ ಢಾಕಾದಲ್ಲಿ 1971ರಲ್ಲಿ ಪಾಕಿಸ್ತಾನಿ ಪಡೆಗಳು ಧ್ವಂಸಮಾಡಿದ್ದ ಐತಿಹಾಸಿಕ ಶ್ರೀ ರಮಣ ಕಾಳಿ ದೇವಸ್ಥಾನವನ್ನು ರಾಷ್ಟ್ರಪತಿಯವರು ಉದ್ಘಾಟನೆ ಮಾಡಿದ್ದಾರೆ. ಬರೋಬ್ಬರಿ 50 ವರ್ಷಗಳ ಬಳಿಕ ಈ ಐತಿಹಾಸಿಕ ದೇವಾಲಯವನ್ನು ನವೀಕರಣ ಮಾಡಲಾಗಿದೆ. 1971ರಲ್ಲಿ ಪಾಕಿಸ್ತಾನ ಸೇನೆ ಆಪರೇಷನ್ ಸರ್ಚ್‍ಲೈಟ್ ಎಂಬ ಕಾರ್ಯಾಚರಣೆ ನಡೆಸಿ ದೇವಾಲಯವನ್ನು ಸಂಪೂರ್ಣವಾಗಿ ನಾಶ ಮಾಡಲಾಗಿತ್ತು. ಇದನ್ನೂ ಓದಿ: ಬಾಂಗ್ಲಾ ದೇಶದಲ್ಲಿ ಇಸ್ಕಾನ್ ದೇವಾಲಯ ಧ್ವಂಸ – ದೇಗುಲದ ಸದಸ್ಯನ ಹತ್ಯೆ

ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧವು ಭಾಷೆ, ಸಂಸ್ಕೃತಿ ಮತ್ತು ರಕ್ತಸಂಬಂಧದಿಂದ ಗುರುತಿಸಲ್ಪಟ್ಟಿದೆ. ಅನ್ಯಾಯದ ವಿರುದ್ಧ ನಿಲ್ಲುವ ಧೈರ್ಯವನ್ನು ನಾವು ವಂದಿಸುತ್ತೇವೆ ಎಂದು ಕೋವಿಂದ್ ತಮ್ಮ ಭಾಷಣದಲ್ಲಿ ಹೇಳಿದ್ಧಾರೆ. ದೇವಾಲಯ, ಅತಿಥಿ ಗೃಹ, ಆಳವಾದ ಕೊಳವೆ ಬಾವಿ ಮತ್ತು ಮುಖ್ಯ ಪ್ರವೇಶ ದ್ವಾರವನ್ನು ಉದ್ಘಾಟಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ದೇವಾಲಯದ ಮೇಲೆ ನಡೆದಿರೋ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Kali Mandir 1

ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶೀ ಹರ್ಷವರ್ಧನ್, ಇದು ಎರಡು ದೇಶಗಳಿಗೆ ಭಾವನಾತ್ಮಕ ಕ್ಷಣ ಎಂದು ಬಣ್ಣಿಸಿದ್ದಾರೆ. 1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ಮುಕ್ತಿಪಡೆದುಕೊಂಡಿತು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *