ನವದೆಹಲಿ: ನಿರೀಕ್ಷೆಯಂತೆ ಎನ್‍ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ರಾಷ್ಟ್ರಪತಿ ಚುನಾವಣೆಯಲ್ಲಿ ವಿಜಯಿ ಆಗಿದ್ದಾರೆ. ಈ ಮೂಲಕ ಕೆ.ಆರ್. ನಾರಾಯಣ್ ಬಳಿಕ ರಾಷ್ಟ್ರಪತಿ ಹುದ್ದೆ ಏರಿದ ಎರಡನೇ ದಲಿತ ನಾಯಕ ಎನ್ನುವ ಹೆಗ್ಗಳಿಕೆಗೆ ಕೋವಿಂದ್ ಪಾತ್ರರಾಗಿದ್ದಾರೆ.
14ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ಕೋವಿಂದ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಉತ್ತಮ ಮಾತುಗಾರ, ಆಡಳಿತ ಜ್ಞಾನ, ರಾಜಕೀಯ ಜ್ಞಾನ, ರಾಜ್ಯಸಭೆ ಅನುಭವ ಇರುವ ಹಿನ್ನೆಲೆಯಲ್ಲಿ ಕೋವಿಂದ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ತಿಳಿಸಿತ್ತು.
Advertisement
Congratulations to Shri Ram Nath Kovind Ji on being elected the President of India! Best wishes for a fruitful & inspiring tenure.
— Narendra Modi (@narendramodi) July 20, 2017
Advertisement
20 years ago and the present…always been a privilege to know you, President Elect. pic.twitter.com/IkhnOtYf8N
— Narendra Modi (@narendramodi) July 20, 2017
Advertisement
ಒಟ್ಟು ಎಷ್ಟು ವೋಟ್ ಬಿದ್ದಿದೆ?
ಒಟ್ಟು 10,98,903 ಮತ ಮೌಲ್ಯದ ಪೈಕಿ 2930 ಮತದಾರರಿಂದ ಒಟ್ಟು 7,02,044 ಮತಗಳನ್ನು ಕೋವಿಂದ್ ಪಡೆದರೆ, ಮೀರಾ ಕುಮಾರ್ 1844 ಮತದಾರರಿಂದ 3,67,314 ಮತಗಳನ್ನು ಪಡೆದಿದ್ದಾರೆ.
Advertisement
ಕರ್ನಾಟಕವನ್ನು ಹೊರತುಪಡಿಸಿದರೆ ಬಹುತೇಕ ರಾಜ್ಯಗಳಲ್ಲಿ ಕೋವಿಂದ್ ಅವರಿಗೆ ಹೆಚ್ಚು ಮತ ಬಿದ್ದಿದೆ. ಕೋವಿಂದ್ ಅವರ ಪರ 522, ಮೀರಾ ಕುಮಾರ್ ಅವರ ಪರ 225 ಮಂದಿ ಸಂಸದರು ಮತ ಚಲಾಯಿಸಿದ್ದಾರೆ. ಒಟ್ಟು 77 ಮತ ತಿರಸ್ಕೃತಗೊಂಡಿದ್ದು, ಇದರಲ್ಲಿ 21 ಸಂಸದರು ಸೇರಿದ್ದಾರೆ. ಒಟ್ಟು 5 ರಾಜ್ಯಗಳಲ್ಲಿ ಅಡ್ಡ ಮತದಾನವಾಗಿದೆ. ಕರ್ನಾಟಕದಲ್ಲಿ ಮೀರಾ ಕುಮಾರ್ ಅವರಿಗೆ 163 ಶಾಸಕರಿಂದ 21,353 ಮತಗಳು ಬಿದ್ದರೆ, ಕೋವಿಂದ್ ಅವರಿಗೆ 56 ಶಾಸಕರಿಂದ 7,336 ಮತಗಳು ಬಿದ್ದಿದೆ.
ಈ ಚುನಾವಣೆಯಲ್ಲಿ ಒಟ್ಟು 771 ಸಂಸದರಲ್ಲಿ 768 ಸಂಸದರು, 4109 ಶಾಸಕರಲ್ಲಿ 4083 ಶಾಸಕರು ಮತ ಚಲಾಯಿಸಿದ್ದರು. ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅವಧಿ ಜುಲೈ 24ಕ್ಕೆ ಮುಕ್ತಾಯಗೊಳ್ಳಲಿದ್ದು, ಜು.25 ರಂದು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ: ಚಾಲೆಂಜ್ ಎಸೆದು ಗೆದ್ದ ಅಮಿತ್ ಶಾ
#RamNathKovind got 2,930 votes with value of 7,02,044, #MeiraKumar got 1,844 votes with value of 3,67,314: returning officer Anoop Mishra
— Press Trust of India (@PTI_News) July 20, 2017
Prime Minister Narendra Modi congratulates President elect #RamNathKovind in Delhi pic.twitter.com/0Ukdkj0kR3
— ANI (@ANI) July 20, 2017
I also congratulate @meira_kumar Ji for her campaign, which was in spirit of the democratic ethos & values we all are proud of.
— Narendra Modi (@narendramodi) July 20, 2017
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ಮತ ಎಣಿಕೆ: ಗುಜರಾತ್ ನಲ್ಲಿ ಕೈಗೆ ಶಾಕ್
ಯಾರು ರಾಮನಾಥ್ ಕೋವಿಂದ್?
ಉತ್ತರಪ್ರದೇಶದ ಕಾನ್ಪುರದ ದಿಹಾಟ್ ಎಂಬಲ್ಲಿ 1945 ಅಕ್ಟೋಬರ್ 1ರಂದು ರಾಮನಾಥ್ ಕೋವಿಂದ್ ಜನಿಸಿದ್ದು, ಕಾನ್ಪುರ ವಿಶ್ವವಿದ್ಯಾನಿಲಯದಿಂದ ಬಿ.ಕಾಂ, ಎಲ್‍ಎಲ್ ಬಿ ಪದವಿ ಪಡೆದಿದ್ದಾರೆ. 1977 ರಿಂದ 1979ರವರೆಗೆ ದೆಹಲಿ ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ. 1980ರಿಂದ 1993ರವರೆಗೆ ಸುಪ್ರೀಂ ಕೋರ್ಟ್ ವಕೀಲರಾಗಿ ಕಾರ್ಯನಿರ್ವಹಿಸಿದ್ದರು. 1994ರಲ್ಲಿ ಉತ್ತರಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಇವರು 12 ವರ್ಷಗಳ ಕಾಲ ಸಂಸದರಾಗಿದ್ದರು. ಬಿಜೆಪಿ ದಲಿತ್ ಮೋರ್ಚಾ (1998-2002) ಮತ್ತು ಆಲ್-ಇಂಡಿಯಾ ಕೋಲಿ ಸಮಾಜದ ಅಧ್ಯಕ್ಷರಾಗಿ ಮಾಜಿ ಅಧ್ಯಕ್ಷರಾಗಿದ್ದ ಇವರು ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು. ಆಗಸ್ಟ್ 8, 2015 ರಂದು ಬಿಹಾರದ ಗವರ್ನರ್ ಆಗಿ ಆಯ್ಕೆಯಾಗಿದ್ದರು.
ರಾಜ್ಯಸಭೆಯಲ್ಲಿದ್ದಾಗ ಕೋವಿಂದ್ ಸಾಧನೆ ಏನು?
ಹಾಜರಿ: ಬಿಹಾರ ಮೂಲದ ರಾಮನಾಥ್ ಕೋವಿಂದ್ 1994 ರಿಂದ 2000 ಹಾಗೂ 2000 ರಿಂದ 2006 ದವರೆಗೆ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದರು. 12 ವರ್ಷಗಳ ಸಂಸತ್ ಅವಧಿಯಲ್ಲಿ ನಡೆದ ಕಲಾಪಗಳಿಗೆ ಇವರು 87% ರಷ್ಟು ಹಾಜರಿ ಹಾಕಿದ್ದರು. ಮೊದಲನೆ ಅವಧಿಯಲ್ಲಿ 89% ಹಾಗೂ ಎರಡನೇ ಅವಧಿಯಲ್ಲಿ 85% ರಷ್ಟು ಹಾಜರಿ ಹಾಕಿರುವುದು ಇವರ ವಿಶೇಷತೆ. ಒಟ್ಟು 44 ಅಧಿವೇಶನಕ್ಕೆ ಹಾಜರಾಗಿದ್ದು ಕೋವಿಂದ್ 14 ಅಧಿವೇಶನಗಳಿಗೆ 100% ರಷ್ಟು ಹಾಜರಿ ಹಾಕಿದ್ದಾರೆ. 28 ಅಧಿವೇಶನಗಳಲ್ಲಿ 90% ರಷ್ಟು ಹಾಜರಿ ಹಾಕಿದ್ದರು.
283 ಪ್ರಶ್ನೆಗಳು: 12 ವರ್ಷಗಳಲ್ಲಿ ಕೋವಿಂದ್ 34 ಸಚಿವಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 283 ಪ್ರಶ್ನೆಗಳನ್ನು ಕೇಳಿದ್ದಾರೆ. ಹಣಕಾಸು ಮತ್ತು ರೈಲ್ವೇ ಇಲಾಖೆಗೆ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಾರೆ. ಇನ್ನೂ 10 ಕ್ಕಿಂತ ಹೆಚ್ಚು ಪ್ರಶ್ನೆಗಳನ್ನು 12 ಇಲಾಖೆಗಳಿಗೆ ಕೇಳಿದ್ದಾರೆ.
ಹಣಕಾಸು ಇಲಾಖೆಗೆ ಕೇಳಿದ ಪ್ರಶ್ನೆಗಳ ಪೈಕಿ, ಬ್ಯಾಂಕ್ ಗಳಲ್ಲಿ ಸಫಾಯಿ ಕರ್ಮಚಾರಿಗಳ ನೇಮಕ, 1000 ರೂ. ನೋಟ್‍ನಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರಕಟಿಸುವ ಬಗ್ಗೆ, ಕಪ್ಪು ಹಣವನ್ನು ನಿಗ್ರಹಿಸಲು ತೆಗೆದುಕೊಂಡ ಕ್ರಮ, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಎಸ್‍ಸಿ/ಎಸ್‍ಟಿ ಸದಸ್ಯರನ್ನು ನಾಮನಿರ್ದೇಶನ ಮಾಡುವ ಕುರಿತಂತೆ ಕೇಳಿದ್ದಾರೆ.
ಹೆಚ್ಚಿನ ಪ್ರಶ್ನೆಗಳು ರೈಲ್ವೆ ಸಚಿವರಿಗೆ ಮತ್ತು ನಿಲ್ದಾಣಗಳ ಬಗ್ಗೆ ಕೇಳಿದ್ದಾರೆ. ಅದಷ್ಟೇ ಅಲ್ಲದೆ ಉತ್ತರ ಪ್ರದೇಶದಲ್ಲಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಹಣಕಾಸು ದುರುಪಯೋಗವಾಗಿರುವುದರ ಬಗ್ಗೆ, ಎಸ್‍ಸಿ/ಎಸ್‍ಟಿ ಮತ್ತು ಎಎಸ್/ಎಸ್‍ಟಿ ವರ್ಗಗಳಲ್ಲಿ ಬರುವ ಉಳಿದ ಜಾತಿಗಳ ಅಭಿವೃದ್ಧಿ ಕಲ್ಯಾಣದ ಬಗ್ಗೆ ಸಮಾಜದ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೂ ಪ್ರಶ್ನೆಗಳನ್ನು ಕೇಳಿದ್ದಾರೆ. ಎಸ್‍ಸಿ ಮತ್ತು ಎಸ್‍ಟಿ ಅವರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಪ್ರಶ್ನೆಗಳನ್ನು 12 ವರ್ಷದ ಅವಧಿಯಲ್ಲಿ ಕೇಳಿದ್ದಾರೆ.
ಉಲ್ಲೇಖ ಮತ್ತು ಭರವಸೆಗಳು: 12 ವರ್ಷದ ಅವಧಿಯಲ್ಲಿ ಅವರು 5 ಬಾರಿ ವಿಶೇಷ ಪ್ರಕರಣಗಳನ್ನು ಪ್ರಸ್ತಾಪಿಸಿ ಸಂಸದರ ಗಮನವನ್ನು ಸೆಳೆದಿದ್ದಾರೆ. ಅವುಗಳಲ್ಲಿ ಬಿಹಾರ್ನ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಎಸ್‍ಸಿ ವರ್ಗದ ಸಾಲಿನಲ್ಲಿ ಬರುವ ತಂತಿ ಎಂಬ ಜಾತಿಯ ಬಗ್ಗೆ, ಬಿಹಾರ್ನ ಜೈಲಿನಲ್ಲಿ ಖೈದಿಗಳೊಂದಿಗೆ ತಪ್ಪಾಗಿ ನಡೆದುಕೊಳ್ಳುವುದು, ನೇಕಾರರ ಸಮಸ್ಯೆಗಳು ಹಾಗೂ ಟಿನ್ಸುಕಿಯಾದ ಗುಂಡಿನ ದಾಳಿಯ ಬಗ್ಗೆ ವಿಶೇಷವಾಗಿ ಅವರ ಮಾತಿನಲ್ಲಿ ಉಲ್ಲೇಖಿಸಿದ್ದಾರೆ.
ಅವರು ಒಟ್ಟು ಏಳು ಭರವಸೆಗಳನ್ನು ಜನರಿಗೆ ನೀಡಿದ್ದು ಅದರಲ್ಲಿ ಆರು ಭರವಸೆಗಳನ್ನು ಈಡೇರಿಸಿದ್ದಾರೆ. ಎನ್‍ಡಿಎ ಸರ್ಕಾರದಲ್ಲಿ 2, ಬೇರೆ ಸರ್ಕಾರದಲ್ಲಿ ಉಳಿದ 4 ಭರವಸೆಗಳನ್ನು ಪೂರ್ಣಗೊಳಿಸಿದ್ದಾರೆ.
ಚರ್ಚೆಗಳು: ರಾಮನಾಥ್ ಕೋವಿಂದ್‍ರವರು ಒಟ್ಟು 89 ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಎಂದು ರಾಜ್ಯಸಭಾ ವೆಬ್‍ಸೈಟ್ ಹೇಳಿದೆ. 16 ಸಂದರ್ಭಗಳಲ್ಲಿ ಹಲವಾರು ಸಮಿತಿಗಳ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. 15 ಬಾರಿ ಇವರು ಉಲ್ಲೇಖ ಮಾಡಿರುವ ವಿಚಾರಗಳ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದರೆ, 14 ಸಂದರ್ಭಗಳಲ್ಲಿ ಕರಡು ಮಸೂದೆಯ ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ. ಬಜೆಟ್ ವಿಚಾರವಾಗಿ 2 ಬಾರಿ ಚರ್ಚೆಯಲ್ಲಿ ಭಾಗವಹಿಸಿದ್ದರೆ, ಖಾಸಗಿ ಸದಸ್ಯರ ನಿರ್ಣಯಗಳು ಮತ್ತು ಮಸೂದೆಗಳ ವಿಚಾರವಾಗಿ ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ.
ಅನುದಾನ ಬಳಕೆ: 12 ವರ್ಷ ರಾಜ್ಯಸಭಾ ಸದಸ್ಯರಾಗಿ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ (ಎಂಪಿಎಲ್‍ಎಡಿ) ಅಡಿ 20 ಕೋಟಿ ಹಣ ರೂ. ಹಣ ಇವರಿಗೆ ಸಿಕ್ಕಿತ್ತು. ಸಿಕ್ಕಿದ ಅನುದಾನದಲ್ಲಿ 19.19 ಕೋಟಿ ರೂ. ಹಣವನ್ನು ಕೋವಿಂದ್‍ರವರು ಅಭಿವೃದ್ಧಿ ಕಾರ್ಯಗಳಿಗೆ ಬಳಸಿದ್ದಾರೆ. ಅನುದಾನ ನೀಡಿದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡುವ ಮೂಲಕ ಪ್ರಾಮಾಣಿಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಸಮಿತಿಯ ಸದಸ್ಯರಾಗಿ: ರಾಮನಾಥ್ ಕೋವಿಂದ್‍ರವರು 12 ವರ್ಷಗಳ ಅವಧಿಯಲ್ಲಿ ಹಲವಾರು ಸಮಿತಿಯ ಸದಸ್ಯರಾಗಿದ್ದಾರೆ, ಮುಖ್ಯವಾಗಿ ಪರಿಶಿಷ್ಟ ಜಾತಿ/ಪಂಗಡ ಕಲ್ಯಾಣ ಸಮಿತಿ, ಗೃಹ ವ್ಯವಹಾರದ ಸಮಿತಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಮಿತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿ, ಕಾನೂನು ಮತ್ತು ನ್ಯಾಯ ಸಮಿತಿ, ರಾಜ್ಯಸಭಾ ಸಮಿತಿಯ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು.