ಚೆನ್ನೈ: ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ (RamLalla Pran Pratishtha) ನೆರವೇರಲಿದ್ದು ಈ ಸಮಯದಲ್ಲೇ ತಮಿಳುನಾಡಿನ (Tamil Nadu) ಕಾಂಚಿಪುರಂನ ಕಂಚಿ ಕಾಮಕೋಟಿ ಮಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ (Vijayendra Saraswat Swamiji) ಸ್ವಾಮೀಜಿಗಳು 40 ದಿನಗಳ ಯಾಗ ನಡೆಸುವುದಾಗಿ ಘೋಷಿಸಿದ್ದಾರೆ.
Advertisement
ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠೆ ಸುಸಂದರ್ಭದಲ್ಲಿ ಕಾಶಿ ಯಜ್ಞಶಾಲೆಯಲ್ಲಿ (Kashi Yagyashala) ಜ.22 ರಿಂದ 40 ದಿನಗಳ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಅಂಗವಾಗಿ ಪ್ರಾಣಪ್ರತಿಷ್ಠೆಯಾದ ದಿನದಿಂದ 40 ದಿನಗಳ ಕಾಲ ಇಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ರಾಮ ಪ್ರತಿಷ್ಠಾಪನೆ ವೀಕ್ಷಣೆಗೆ ಮಾರಿಷಸ್ ಉದ್ಯೋಗಿಗಳಿಗೆ 2 ಗಂಟೆ ವಿಶೇಷ ಬ್ರೇಕ್
Advertisement
ಶ್ರೀರಾಮನ ಆಶೀರ್ವಾದದೊಂದಿಗೆ ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ ಸಮಾರಂಭ ನಡೆಯಲಿದ್ದು, ತಮಿಳುನಾಡಿನಲ್ಲಿರುವ ನಮ್ಮ ಕಾಶಿ ಯಜ್ಞಶಾಲೆ ಕೂಡ 40 ದಿನಗಳ ವಿಶೇಷ ಪೂಜೆ ಹಮ್ಮಿಕೊಳ್ಳಲಿದೆ. ಲಕ್ಷ್ಮೀಕಾಂತ ದೀಕ್ಷಿತ್ ಸೇರಿದಂತೆ ವೈದಿಕ ವಿದ್ವಾಂಸರು ಇದಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಯಜ್ಞಶಾಲೆಯಲ್ಲಿ 40 ದಿನಗಳ ಕಾಲ 100ಕ್ಕೂ ಹೆಚ್ಚು ವಿದ್ವಾಂಸರು ಪೂಜೆ, ಹವನ ನಡೆಸಲಿದ್ದಾರೆ. ವೈದಿಕ ಆಚರಣೆಗಳನ್ನು ನಿರ್ವಹಿಸಲು ‘ಯಜ್ಞಶಾಲೆ’ಯನ್ನು ಬಳಸಲಾಗುತ್ತದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಜ.22ರಂದು ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠೆ – ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ
Advertisement
Advertisement
ಅಯೋಧ್ಯೆ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಇಡೀ ಅಯೋಧ್ಯೆ ರಾಮಮಯವಾಗಿ ಸಿಂಗಾರಗೊಳ್ಳುತ್ತಿದೆ. ಎಲ್ಲೆಲ್ಲೂ ರಾಮನಾಮ, ರಾಮಭಕ್ತಿ, ರಾಮಜಪ ಕೇಳಿಬರುತ್ತಿದೆ. ನೂರಾರು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿರುವುದಕ್ಕೆ ರಾಮಭಕ್ತರು ಸಂತಸಗೊಂಡಿದ್ದಾರೆ. ಭಕ್ತರ ಯಾತ್ರೆ ಈಗ ರಾಮನೂರಿನ ಕಡೆ ಹೊರಟಿದೆ. ಇದನ್ನೂ ಓದಿ: ರಾಮಮಂದಿರ ಥೀಮ್‌ನ ಬನಾರಸಿ ಸೀರೆಗಳಿಗೆ ಹೊರ ದೇಶಗಳಲ್ಲೂ ಇದೆ ಬೇಡಿಕೆ- ವಿಶೇಷತೆ ಏನು..?