ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭಗೊಂಡಿದ್ದು. ಇದರ ಪೂರ್ವಭಾವಿಯಾಗಿ ಮಂಗಳೂರಿನಲ್ಲಿ ಮೊದಲ ಬಾರಿಗೆ ವಿಶ್ವ ಹಿಂದೂ ಪರಿಷತ್ ಬೈಠಕ್ ನಡೆಯಲಿದೆ.
ಡಿಸೆಂಬರ್ 25 ರಿಂದ 30ರವರೆಗೆ 6 ದಿನಗಳ ಕಾಲ ಮಂಗಳೂರಿನ ಸಂಘನಿಕೇತನದಲ್ಲಿ ಬೈಠಕ್ ನಡೆಯಲಿದ್ದು, 32 ದೇಶಗಳ 350 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
Advertisement
Advertisement
ಭಾರತ, ಅಮೇರಿಕ, ಜರ್ಮನಿ, ಮಲೇಶಿಯಾ, ಬಾಗ್ಲಾದೇಶ, ನೇಪಾಳ ಸೇರಿದಂತೆ 32 ದೇಶಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದು ರಾಮಮಂದಿರದ ಮುನ್ನುಡಿಯ ಸಭೆ ಎಂದು ಹೇಳಲಾಗಿದೆ. ಡಿ.27 ರಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
Advertisement
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹಕ ಸುರೇಶ್ ಭಯ್ಯಾಜಿ ಜೋಶಿ, ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಅಧ್ಯಕ್ಷರಾದ ವಿಷ್ಣು ಸದಾಶಿವ ಕೊಕ್ಜೆ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ಮೊದಲ 3 ದಿನ ಕೇಂದ್ರೀಯ ವಿಭಾಗದ ಪ್ರಮುಖರ ಜೊತೆ ಸಭೆ ನಡೆದರೆ ಮತ್ತೆ ಮೂರು ದಿನ ಅಂತರಾಷ್ಟ್ರೀಯ ಬೈಠಕ್ ನಡೆಯಲಿದೆ.