ಬಜೆಟ್ ಅಧಿವೇಶನದ ಕೊನೆ ದಿನ ಲೋಕಸಭೆಯಲ್ಲಿ ಪ್ರಧಾನಿ ಮಾತು
ನವದೆಹಲಿ: ಅಯೋಧ್ಯೆ ರಾಮಮಂದಿರ (Ram Mandir) ಮುಂದಿನ ತಲೆಮಾರಿಗೆ ಹೆಮ್ಮೆಯ ಸಂಕೇತ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿಪ್ರಾಯಪಟ್ಟಿದ್ದಾರೆ.
Advertisement
ಬಜೆಟ್ ಅಧಿವೇಶನದ ಕೊನೆಯ ದಿನದಂದು ಲೋಕಸಭೆಯಲ್ಲಿ ರಾಮಮಂದಿರ ಕುರಿತು ಮೋದಿ ಮಾತನಾಡಿದರು. ರಾಮಮಂದಿರಾ ಮುಂದಿನ ತಲೆಮಾರಿಗೆ ಹೆಮ್ಮೆಯನ್ನು ಮೂಡಿಸಲಿದೆ. ಇದರಲ್ಲಿ ಸಂವೇದನೆ ಸಂಕಲ್ಪ ಇದೆ. ಸಬ್ ಕಾ ಸಾಥ್.. ಸಬ್ ಕಾ ವಿಕಾಸ್ ತತ್ವವೂ ಇದೆ. ಮುಂದಿನ ತಲೆಮಾರಿಗಾಗಿ ನಾವು ಕೆಲಸ ಮಾಡೋಣ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಮನಿಲ್ಲದೆ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ: ಅಮಿತ್ ಶಾ
Advertisement
Advertisement
ಹೊಸ ಸಂಸತ್ ಭವನ ಆಗಬೇಕಿತ್ತು ಎನ್ನುವುದು ಎಲ್ಲರ ಅಭಿಪ್ರಾಯವೂ ಆಗಿತ್ತು. ಆದರೆ ಯಾರು ನಿರ್ಣಯ ತೆಗೆದುಕೊಂಡಿರಲಿಲ್ಲ. ಈ ಅವಧಿಯಲ್ಲಿ ಹೊಸ ಸಂಸತ್ ಭವನ ನಿರ್ಮಾಣವಾಯಿತು. ನಮ್ಮ ಮಾರ್ಗದರ್ಶನಕ್ಕೆ ಸೆಂಗೋಲ್ ಇಲ್ಲಿ ಸ್ಥಾಪಿಸಲಾಗಿದೆ. ದೇಶವನ್ನು ಮುನ್ನಡೆಸಲು ಇದು ಪ್ರೇರಣೆ ನೀಡಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
Advertisement
ಜಿ20 ಯಿಂದ ಭಾರತಕ್ಕೆ ಗೌರವ ಸಿಕ್ಕಿದೆ. ಎಲ್ಲ ರಾಜ್ಯಗಳು ವಿಶ್ವದ ಮುಂದೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿವೆ. ಜಿ20 ಜೊತೆಗೆ ಪಿ20 ಸಭೆಯೂ ನಡೆಯಿತು. ಬೇರೆ ಬೇರೆ ದೇಶದ ಸ್ಪೀಕರ್‌ಗಳು ಬಂದಿದ್ದರು. ಭಾರತ ಪ್ರಜಾಪ್ರಭುತ್ವ ಬೇರು, ಅದನ್ನು ತಿಳಿಸುವ ಕೆಲಸ ಆಗಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿ – ಗೃಹ ಸಚಿವ ಅಮಿತ್ ಶಾ ಭರವಸೆ
ಸ್ಪೀಕರ್ ಓಂ ಬಿರ್ಲಾ ಅವರು ಭಾರತದ ಸಂಸದೀಯ ಪರಂಪರೆ ತಿಳಿಸುವ ಕೆಲಸ ಮಾಡಿದ್ದಾರೆ. ಸಂಸತ್ ಗ್ರಂಥಾಲಯವನ್ನು ಸಾಮಾನ್ಯ ಜನರಿಗಾಗಿ ತೆರೆಯಿರಿ. ಇದು ಅತಿದೊಡ್ಡ ಸೇವೆಯಾಗಿದೆ. ಇದಕ್ಕಾಗಿ ನಾವು ನಿಮ್ಮನ್ನು ಅಭಿನಂದಿಸುತ್ತೇವೆ. ಪೇಪರ್‌ಲೆಸ್ ವ್ಯವಸ್ಥೆ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೀರಿ. 17 ಅವಧಿಯಲ್ಲಿ 97% ಪ್ರಮಾಣದಷ್ಟು ಸಂಸತ್ ಕಲಾಪಗಳು ಯಶಸ್ವಿಯಾಗಿವೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಯಶಸ್ವಿ ನಿರೀಕ್ಷೆ ಇದೆ. ಇದಕ್ಕಾಗಿ ನಾನು ಸಂಸದರು, ವಿಪಕ್ಷ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.