– ಕಾಂಗ್ರೆಸ್‌ನಲ್ಲಿ ಜೋರಾದ ಡಿಸಿಎಂ ಕೂಗು
ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಡಿಸಿಎಂ (DCM) ಕೂಗು ಜೋರಾಗಿದ್ದು, ಆಕಾಂಕ್ಷಿಗಳೆಲ್ಲ ಒಟ್ಟಾಗಿ ದೆಹಲಿ ಅಂಗಳದಲ್ಲಿ ರಾಜಕೀಯ ಪಟ್ಟು ಹಿಡಿಯಲು ತೀರ್ಮಾನ ಮಾಡಿದ್ದಾರೆ.
Advertisement
ರಾಮ ಮಂದಿರ (Ram Mandir) ನಿರ್ಮಾಣದ ಎಫೆಕ್ಟ್ ತಡೆಯಲು ಡಿಸಿಎಂ ಹುದ್ದೆ ರಾಜ್ಯದಲ್ಲಿ ಅನಿವಾರ್ಯ ಎಂಬ ವಾದ ಮಂಡಿಸಲು ಕೈ ನಾಯಕರು ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ.
Advertisement
Advertisement
ಕಾಂಗ್ರೆಸ್‌ನಲ್ಲಿ ಡಿಸಿಎಂ ಕೂಗು ಹಿಂದೆ ಜೋರಾಗಿ ತಣ್ಣಗೆ ಆಗಿತ್ತು. ಆದರೆ ಈ ಬಾರಿ ಮತ್ತಷ್ಟು ಜೋರಾಗುವ ಸಾಧ್ಯತೆ ಇದ್ದು ಸಂಕ್ರಾಂತಿಗೆ ಮೊದಲೇ ದೆಹಲಿಗೆ ಡಿಸಿಎಂ ದಾಳ ಉರುಳಿಸಿಲು ಪ್ರತ್ಯೇಕ ನಿಯೋಗ ಕೊಂಡೊಯ್ಯುವ ಲೆಕ್ಕಾಚಾರವನ್ನು ಕೈ ನಾಯಕರು ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಶ್ರೀರಾಮ ನಮ್ಮ ದೇವರು, ಸೀತಾಮಾತೆ ನಮ್ಮ ತಾಯಿ – ಕಾಂಗ್ರೆಸ್ ಸಚಿವ ಸಂತೋಷ್ ಲಾಡ್
Advertisement
ಹೆಚ್ಚುವರಿ ಡಿಸಿಎಂ ಹುದ್ದೆಯನ್ನು ಹೈ ಕಮಾಂಡ್ ಬಳಿಯೆ ನೇರವಾಗಿ ಕ್ಲೈಮ್ ಮಾಡಲು ಸಚಿವರ ಗುಂಪು ಸಿದ್ಧವಾಗಿದೆ. ಅದರ ಪೂರ್ವ ತಯಾರಿಯ ಭಾಗವಾಗಿ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಚಿವರ ಸಭೆ ನಡೆದಿದೆ ಎನ್ನಲಾಗುತ್ತಿದೆ.
ರಾಮ ಮಂದಿರ ನಿರ್ಮಾಣದ ಎಫೆಕ್ಟ್ ತಡೆಯಲು ಡಿಸಿಎಂ ಹುದ್ದೆ ರಾಜ್ಯದಲ್ಲಿ ಅನಿವಾರ್ಯ ಎಂಬ ವಾದವನ್ನು ಹೈಕಮಾಂಡ್ ನಾಯಕರ ಜೊತೆ ಅಸಮಧಾನಿತ ಸಚಿವರು ಮುಂದಿಡಲಿದ್ದಾರೆ.