ಬೆಂಗಳೂರು: ನಾಮಪತ್ರ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕಟ್ಟುನಿಟ್ಟಿನ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಹೊಸ ಹೊಸ ಪ್ರಚಾರ ತಂತ್ರ ಅಳವಡಿಸಿಕೊಂಡು ಪಕ್ಷದ ಇಮೇಜ್ ವೃದ್ಧಿಸಲು ಬಿಜೆಪಿ ಪ್ಲಾನ್ ಮಾಡಿದೆ.
ಈಗ ಪ್ರಚಾರ ಚಾಣಕ್ಯ ರಾಮ್ ಮಾಧವ್ ಸೂಚನೆ ಹಿನ್ನೆಲೆಯಲ್ಲಿ, “ನಮ್ಮ ಮನೆ ಬಿಜೆಪಿ ಮನೆ” ಮೂಲಕ ಪ್ರಚಾರಕ್ಕೆ ಬಿಜೆಪಿ ಮುಂದಾಗಿದೆ.
Advertisement
ಏಪ್ರಿಲ್ 25 ರಂದು ರಾಜ್ಯದ 224 ಕ್ಷೇತ್ರಗಳಲ್ಲಿ ನಮ್ಮ ಮನೆ ಬಿಜೆಪಿ ಮನೆ ಆಚರಿಸಲು ಸೂಚನೆ ನೀಡಲಾಗಿದೆ. ಒಂದು ಕ್ಷೇತ್ರದಲ್ಲಿ ಕನಿಷ್ಟ 5 ಸಾವಿರ ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವಂತೆ ಸೂಚನೆ ನೀಡಲಾಗಿದೆ.
Advertisement
ರಾಜ್ಯಾದ್ಯಂತ 11,20,000 ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸಬೇಕು. ಮನೆ ಮೇಲೆ ಹಾರಿಸಲಾದ ಧ್ವಜದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.
Advertisement
ಅಭ್ಯರ್ಥಿಗಳ ಜೊತೆ ಮಾತು:
ರಾಜ್ಯದ ಎಲ್ಲ 224 ಕ್ಷೇತ್ರಗಳ ಮೇಲೆ ಪ್ರಧಾನಿ ಮೋದಿ ಕಣ್ಣು ಹಾಕಿದ್ದು, ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಜೊತೆ ಏಪ್ರಿಲ್ 26 ರಂದು ಟೆಲಿಕಾನ್ಫರೆನ್ಸ್ ಮೂಲಕ ಮೋದಿ ಮಾತನಾಡಲಿದ್ದಾರೆ. ಏಪ್ರಿಲ್ 26 ರಂದು ಬೆಳಿಗ್ಗೆ 9 ರಿಂದ 10 ಗಂಟೆಯ ಅವಧಿಯಲ್ಲಿ 30 ನಿಮಿಷಗಳ ಕಾಲ ಚುನಾವಣೆ ಸಿದ್ಧತೆ, ಬೂತ್ ಸಶಕ್ತೀಕರಣ ನಡೆಸುವುದು ಹೇಗೆ ಎನ್ನುವ ಬಗ್ಗೆ ಮಾತನಾಡಲಿದ್ದಾರೆ. 224 ಕ್ಷೇತ್ರದ ಬಗ್ಗೆಯೂ ಮೋದಿ ಸಂಪೂರ್ಣ ಮಾಹಿತಿ ಹಿಡಿದುಕೊಂಡು ಮಾತನಾಡಲಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.