– ರಾಮ್ ಕಿಟ್ ಪರಿಕಲ್ಪನೆ ಏನು..?
ಕಾನ್ಪುರ: ಹೃದಯಾಘಾತವಾದಾಗ ತಕ್ಷಣ ನೀಡುವ ಚಿಕಿತ್ಸೆಗಳು ಒಬ್ಬ ವ್ಯಕ್ತಿಯ ಜೀವ ಉಳಿಸುವಲ್ಲಿ ಪ್ರಮುಖವಾಗಿವೆ. ಈ ಹಿನ್ನೆಲೆಯಲ್ಲಿ ಅಗತ್ಯ ಔಷಧ ಹೊಂದಿರುವ ಕಿಟ್ ಅನ್ನು ಉತ್ತರ ಪ್ರದೇಶದ (Uttar Pradesh) ಆಸ್ಪತ್ರೆಯೊಂದು ಅಭಿವೃದ್ಧಿಪಡಿಸಿದೆ. ಅದಕ್ಕೆ ʼರಾಮ್ ಕಿಟ್ʼ (Ram Kit) ಎಂದು ಹೆಸರಿಟ್ಟಿದೆ.
ಕಾನ್ಪುರದ ಲಕ್ಷ್ಮೀಪತ್ ಸಿಂಘಾನಿಯಾ ಇನ್ಸಿಟಿಟ್ಯೂಟ್ ಆಫ್ ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್ ಸರ್ಜರಿ ಅಭಿವೃದ್ಧಿಪಡಿಸಿದೆ. ಪ್ರಯಾಗ್ರಾಜ್ ಜಿಲ್ಲೆಯ ಸುಮಾರು 5 ಸಾವಿರ ಕುಟುಂಬಗಳಿಗೆ ಕಂಟೋನ್ಮೆಂ ಟ್ ಆಸ್ಪತ್ರೆಯ ಅಧಿಕಾರಿ ರಾಮ್ ಕಿಟ್ ನೀಡಲಿದ್ದಾರೆ. ಈ ರೀತಿಯ ಕಿಟ್ ನೀಡುತ್ತಿರುವ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಕೂಡ ಈ ಆಸ್ಪತ್ರೆ ಪಾತ್ರವಾಗಿದೆ.
ಕಿಟ್‌ನಲ್ಲಿ ಏನಿದೆ..?: ರಾಮನ ಚಿತ್ರದೊಂದಿಗೆ ಜೀವ ಉಳಿಸುವ ಪ್ರಮುಖ ಔಷಧಗಳು ಮತ್ತು ಆಸ್ಪತ್ರೆಯ ಸಹಾಯವಾಣಿಯ ಸಂಖ್ಯೆ ಇದೆ. ಜೊತೆಗೆ ‘ನಾವು ಚಿಕಿತ್ಸೆ ನೀಡುತ್ತೇವೆ. ರಾಮ ಗುಣಪಡಿಸುತ್ತಾರೆ ಎಂಬ ಪರಿಕಲ್ಪನೆಯನ್ನು ಈ ಕಿಟ್ ಹೊಂದಿದೆ. ಇದನ್ನೂ ಓದಿ: ಸರಯೂ ನದಿ ತಟದಲ್ಲಿ 1008 ಯಜ್ಞ ಮಂಟಪ ನಿರ್ಮಾಣ – 21 ಸಾವಿರ ಯತಿಗಳಿಂದ ರಾಮನಾಮ ಮಹಾ ಯಜ್ಞ
ರಾಮ್ ಕಿಟ್‌ನಲ್ಲಿ ಇಕೋಸ್ಪಿನ್ (ರಕ್ತ ತೆಳುಗೊಳಿಸುವ), ರೋಸುವಾಸ್ಟಾಟಿನ್ (ಕೊಲೆಸ್ಟ್ರಾಲ್ ನಿಯಂತ್ರಣ) ಮತ್ತು ಸೋರ್ಬಿಟ್ರೇ ಟ್ (ಹೃದಯದ ಉತ್ತಮ ಕಾರ್ಯಾಚರಣೆ) ಔಷಧಗಳನ್ನು ಇದು ಹೊಂದಿದೆ. ಈ ಔಷಧಗಳು ಹೃದಯದ ಸಮಸ್ಯೆ ಹೊಂದಿರುವವರಿಗೆ ತಕ್ಷಣದ ಪರಿಹಾರ ನೀಡುತ್ತದೆ. ಚಳಿಗಾಲದಲ್ಲಿ ಹೃದ್ರೋ ಗ ಮತ್ತು ಮಿದುಳಿನ ಪಾರ್ಶ್ವವಾಯು ಪ್ರಕರಣ ಹೆಚ್ಚುವ ಹಿನ್ನೆಲೆಯಲ್ಲಿ ರಾಮ್ ಕಿಟ್ ಪ್ರತಿಯೊಬ್ಬರಿಗೂ ಉಪಯೋಗವಾಗಲಿದೆ. ರೋಗಿಯ ಗೋಲ್ಡನ್ ಹವರ್‌ನಲ್ಲಿ ಜೀವ ಉಳಿಸಲು ಸಹಾಯ ಮಾಡುತ್ತದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಕೆ ಪಾಂಡೆ ವಿವರಿಸಿದ್ದಾರೆ.
ಈ ಸಂಬಂಧ ನ್ಪುರದ ಲಕ್ಷ್ಮೀ ಪತ್ ಸಿಂಘಾ ನಿಯಾ ಇನ್ಸಿಟಿಟ್ಯೂಟ್ ಆಫ್ ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್ ಸರ್ಜರಿಯ ಹಿರಿಯ ಹೃದ್ರೋ ಗ ತಜ್ಞ ಡಾ.ನೀರಾಜ್ ಕುಮಾರ್ ಪ್ರತಿಕ್ರಿಯಿಸಿ, ರಾಮನ ಮೇಲೆ ಇರುವ ನಂಬಿಕೆಯೇ ಇದಕ್ಕೆ ರಾಮ್ ಕಿಟ್ ಎಂದು ಹೆಸರಿಡಲು ಕಾರಣ ಎಂದಿದ್ದಾರೆ.