ನವದೆಹಲಿ: ಹಿರಿಯ ವಕೀಲ ಹಾಗೂ ಕೇಂದ್ರದ ಮಾಜಿ ಸಚಿವ ರಾಮ್ ಜೇಠ್ಮಲಾನಿ ಅವರು ಇಂದು ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಜೇಠ್ಮಲಾನಿಯವರು ಕಳೆದ ಎರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ದೆಹಲಿಯ ನಿವಾಸದಲ್ಲಿ ನಿಧನರಾಗಿದ್ದಾರೆ.
95 ವರ್ಷದ ರಾಮ್ ಜೇಠ್ಮಲಾನಿ ಅವರು ಸುಪ್ರೀಂ ಕೋರ್ಟಿನ ಹಿರಿಯ ವಕೀಲರಾಗಿದ್ದರು. ದೇಶದ ಖ್ಯಾತ ಕ್ರಿಮಿನಲ್ ವಕೀಲರಲ್ಲಿ ಇವರು ಕೂಡ ಒಬ್ಬರು. ರಾಮ್ ಅವರು ಬಿಜೆಪಿ ಪರವಾಗಿ ರಾಜ್ಯಸಭಾ ಸಂಸದರೂ ಆಗಿದ್ದರು. ಮೊಕದ್ದಮೆಗಳನ್ನು ಹೊರತುಪಡಿಸಿ ಅವರು ತಮ್ಮ ಹೇಳಿಕೆಗಳಿಂದಾಗಿ ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದರು.
ರಾಮ್ ಜೇಠ್ಮಲಾನಿಯವರು ತಮ್ಮ 17ನೇ ವಯಸ್ಸಿನಲ್ಲಿ ಕಾನೂನು ಪದವಿ ಪಡೆದಿದ್ದರು. ನಂತರ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಅವರಿಗೆ 18ನೇ ವಯಸ್ಸಿನಲ್ಲಿ ಕಾನೂನು ಅಭ್ಯಾಸ ಮಾಡಲು ಅವಕಾಶ ನೀಡಲಾಯಿತು.
ರಾಮ್ ಜೇಠ್ಮಲಾನಿಯವರಿಗೆ ಖ್ಯಾತ ವಕೀಲ ಮಹೇಶ್ ಜೇಠ್ಮಲಾನಿ ಎಂಬ ಮಗನಿದ್ದಾರೆ. ಒಬ್ಬ ಮಗಳು ಅಮೆರಿಕಾದಲ್ಲಿದ್ದು, ಮತ್ತೊಬ್ಬ ಮಗಳು ರಾಣಿ ಜೆಠ್ಮಲಾನಿ ಅವರು ಮೃತಪಟ್ಟಿದ್ದಾರೆ.
Veteran lawyer Ram Jethmalani passes away at his residence in Delhi. He was 95 years old. (file pic) pic.twitter.com/Utai8qxxh4
— ANI (@ANI) September 8, 2019