ಲಕ್ನೋ: ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ram Mandir) ನಿರ್ಮಾಣಕ್ಕಾಗಿ ಆಂದೋಲನ ಆರಂಭಿಸಿದ್ದು ದೇಶದ ಸಿಖ್ ಸಮುದಾಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿಕೆ ನೀಡಿದ್ದಾರೆ.
ಶನಿವಾರ ಉತ್ತರ ಪ್ರದೇಶದ (Uttar Pradesh) ಲಕ್ನೋದ ಗುರುದ್ವಾರ ಆಲಂಬಾಗ್‌ನಲ್ಲಿ ನಡೆದ ಗುರು ಗ್ರಂಥ ಸಾಹಿಬ್ ಪ್ರಕಾಶ್ ಉತ್ಸವದಲ್ಲಿ ರಾಜನಾಥ್ ಸಿಂಗ್ ಭಾಗವಹಿಸಿದ್ದರು. ನಂತರ ಮಾತನಾಡಿದ ಅವರು, ಸನಾತನ ಧರ್ಮದ ರಕ್ಷಣೆಗೆ ಸಿಖ್ ಸಮುದಾಯ ಸಾಕಷ್ಟು ಕೆಲಸ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಆಂಧ್ರದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; 6 ಮಂದಿ ಸಾವು
ರಾಮ ಜನ್ಮಭೂಮಿ ಆಂದೋಲನ ಪ್ರಾರಂಭಿಸಿದವರು ಸಿಖ್ಖರು. ಅವರ ಕೊಡುಗೆಯನ್ನು ಯಾವುದೇ ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಿಖ್ (Sikhs) ಸಮುದಾಯವು ಸನಾತನ ಧರ್ಮವನ್ನು ರಕ್ಷಿಸಲು ಸಾಕಷ್ಟು ಮಾಡಿದೆ ಎಂದು ತಿಳಿಸಿದ್ದಾರೆ.
ರಾಮ ಜನ್ಮಭೂಮಿಗೆ ಸಿಖ್ ಸಮುದಾಯದ ಕೊಡುಗೆಯನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಸರ್ಕಾರಿ ದಾಖಲೆಯ ಪ್ರಕಾರ ನಾನು ಒಂದು ಪ್ರಮುಖ ಸಂಗತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಡಿಸೆಂಬರ್ 1, 1858 ರಂದು, ಗುರು ಗೋವಿಂದ್ ಸಿಂಗ್ ಅವರ ಘೋಷಣೆಗಳನ್ನು ಕೂಗುವ ಮೂಲಕ ಸಿಖ್ಖರ ಗುಂಪು ಆವರಣವನ್ನು ವಶಪಡಿಸಿಕೊಂಡಿತು. ಗೋಡೆಗಳ ಮೇಲೆ ಎಲ್ಲೆಡೆ ‘ರಾಮ್ ರಾಮ್’ ಎಂದು ಬರೆಯಿತು ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ಹಮಾಸ್‌ನ್ನು ಭಾರತದ ಭಯೋತ್ಪಾದಕರ ಪಟ್ಟಿಗೆ ಸೇರಿಸೋ ಕಾಲ ಬಂದಿದೆ: ಇಸ್ರೇಲಿ ರಾಯಭಾರಿ
ಸಿಖ್ ಗುರು ಗುರುನಾನಕ್ ದೇವ್ ಅವರನ್ನು ಸ್ಮರಿಸಿದ ಸಚಿವರು, ಭಾರತ ಮತ್ತು ಭಾರತೀಯರನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಗುರುನಾನಕ್ ದೇವ್ ಕೂಡ ನಮಗೆ ಈ ಸ್ಫೂರ್ತಿಯನ್ನು ನೀಡಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]