ಹಾಟ್ ಬ್ಯೂಟಿ ಅಪ್ಸರಾ ‘ರಾಣಿ’ ಹಿಂದೆ ಬಿದ್ದ ರಾಮ್ ಗೋಪಾಲ್ ವರ್ಮಾ

Public TV
2 Min Read
Ram Gopal Varma

ಕ್ಷಿಣದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಇತ್ತೀಚಿನ ವರ್ಷಗಳಲ್ಲಿ ಸಿನಿಮಾಕ್ಕಿಂತ ಹೆಚ್ಚು ಹುಡುಗಿಯರ ಅಂದವನ್ನು ಹೊಗಳುವುದರಲ್ಲಿ ಮತ್ತು ಸದಾ ಹುಡುಗಿಯರ ಜತೆಯೇ ಕಾಲ ಕಳೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.

Apsara Rani 4

ಮಾಡೆಲ್ ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಬಿಂದಾಸ್ ಆಗಿ ಇರುವುದನ್ನೇ ಹವ್ಯಾಸ ಮಾಡಿಕೊಂಡಿರುವ ವರ್ಮಾ, ಈಗ ನಟಿ ಅಪ್ಸರಾ ರಾಣಿಯ ಹಿಂದೆ ಬಿದ್ದಿದ್ದಾರೆ. ನಿತ್ಯವೂ ಅಪ್ಸರಾ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿರುವ ವರ್ಮಾ, ಅದಕ್ಕೊಂದು ಕ್ಯಾಪ್ಷನ್ ಕೊಟ್ಟು ಕುತೂಹಲ ಮೂಡಿಸುತ್ತಿದ್ದಾರೆ.

Apsara Rani 1

ಈ ರಾಮ್ ಗೋಪಾಲ್ ವರ್ಮಾಗೂ ಮತ್ತು ಅಪ್ಸರಾ (Apsara Rani) ನಡುವಿನ ಸಂಬಂಧವೇನು ಎನ್ನುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ನಿತ್ಯವೂ ಅಪ್ಸರಾ ಧ್ಯಾನವನ್ನೇ ವರ್ಮಾ ಮಾಡುತ್ತಿರುವುದರ ಹಿಂದಿನ ಉದ್ದೇಶವೇನು ಎನ್ನುವುದು ಗೊತ್ತಿಲ್ಲ. ಆದರೆ, ಅಪ್ಸರಾರ ಹೊಸ ಫೋಟೋಗಳನ್ನು (Photoshoot) ಆರ್.ಜಿ.ವಿ ಪೋಸ್ಟ್ ಮಾಡುತ್ತಲೇ ಇದ್ದಾರೆ. ಇದನ್ನೂ ಓದಿ:ಫ್ಯಾಷನ್‌ ರೂಲ್ಸ್‌ ಬ್ರೇಕ್‌ ಮಾಡಿ, ನೆಕ್ಲೇಸ್‌ ಧರಿಸಿ ಹಾಡಿದ ಸಂಜಿತ್‌ ಹೆಗ್ಡೆ

Apsara Rani 10

ಅಪ್ಸರಾ ಜೊತೆ ವರ್ಮಾ ಸಲುಗೆಯಿಂದ ಇರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಅಪ್ಸರಾ ರಾಣಿ ವಿಚಿತ್ರ ಪ್ರಶ್ನೆಯೊಂದನ್ನು ವರ್ಮಾಗೆ ಕೇಳಿದ್ದರು. ಅದಕ್ಕೆ ರಾಮ್ ಗೋಪಾಲ್ ವರ್ಮಾ ಸಖತ್ತಾಗಿಯೇ ಉತ್ತರ ಕೊಟ್ಟಿದ್ದರು.

Apsara Rani 9

ಅಲ್ಲದೇ ಅಪ್ಸರಾ ರಾಣಿ ಈ ಹಿಂದೆ ಒಂದು ಹಾಟ್ ಹಾಟ್ ಆಗಿರುವ ವಿಡಿಯೋವನ್ನು ಟ್ವಿಟ್ ಮಾಡಿದ್ದರು. ಪಡ್ಡೆಗಳ ನಿದ್ದೆಗೆಡಿಸುವಂತಹ ಆ ವಿಡಿಯೋಗೆ ರಾಮ್ ಗೋಪಾಲ್ ವರ್ಮಾ ಅಷ್ಟೇ ಸುಂದರವಾಗಿ ಪದಗಳನ್ನು ಪೋಣಿಸಿದ್ದರು. ‘ಡೇಂಜರೆಸ್ ಹುಡುಗಿಯ ನೋಟವು, ಅಪಾಯಕಾರಿ ಅಲ್ಲವೆಂದು ಹೇಳುತ್ತದೆ’ ಎಂದು ವಿಡಿಯೋಗೆ ಕಾಮೆಂಟ್ ಮಾಡಿದ್ದರು.

Apsara Rani 8

ಅಪ್ಸರಾ ರಾಣಿಯು ಬೆಡ್ ಮೇಲೆ ಅರೆಬೆತ್ತಲೆಯಾಗಿ ಮಲಗಿಕೊಂಡು ಮಾದಕ ನೋಟದೊಂದಿಗೆ ಗುಲಾಬಿಯ ಒಂದೊಂದೆ ಪಕಳೆಗಳನ್ನು ಎಸೆಯುತ್ತಾರೆ. ಆ ಮಾದಕ ನಗು ಮತ್ತು ನೋಟಕ್ಕೆ ಆರ್.ಜಿ.ವಿ. ಫಿದಾ ಆಗಿದ್ದರು.

Apsara Rani 6

ಅಪ್ಸರಾ ರಾಣಿ ಹಾಕಿರುವ ವಿಡಿಯೋ ಜತೆ ಅನ್ನಿ ಬ್ರಾಂಟೆ ಅವರ ‘ಮುಳ್ಳನ್ನು ಹಿಡಿಯಲು ಧೈರ್ಯವಿಲ್ಲದವರು ಹೂವಿಗೆ ಹಂಬಲಿಸಬಾರು’ ಎಂಬ ಸಾಲುಗಳನ್ನು ಹಾಕಿದ್ದರು. ಈ ಸಾಲುಗಳ ಮೂಲಕ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ ಕೊಟ್ಟಿದ್ದರು ಅಪ್ಸರಾ.

Apsara Rani 5

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಖತ್ರಾ ಡೇಂಜರಸ್’ ಸಿನಿಮಾದಲ್ಲಿ ಅಪ್ಸರಾ ರಾಣಿ ನಟಿಸಿದ್ದರು. ಇದೊಂದು ಲೆಸ್ಬಿಯನ್ ಜೋಡಿಯ ಕಥೆಯಾಗಿದ್ದು, ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಸಿನಿಮಾ ಬಂದಿತ್ತು. ಈ ಸಿನಿಮಾದಲ್ಲಿ ಅಪ್ಸರಾ ಒಂದು ಪಾತ್ರ ಮಾಡಿದ್ದರೆ, ಇವರ ಜತೆ ನೈನಾ ಗಂಗೂಲಿ ಮತ್ತೊಂದು ಪಾತ್ರವನ್ನು ನಿರ್ವಹಿದ್ದರು.

ಲೆಸ್ಬಿಯನ್ ಕಥೆಯಾಗಿದ್ದರೂ, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾ ಹಂದರವನ್ನು ಈ ಸಿನಿಮಾ ಹೊಂದಿತ್ತು. ಈ ಸಿನಿಮಾ ರಿಲೀಸ್ ವೇಳೆ ಒಂದು ಪುಸ್ತಕವನ್ನು ಹಿಡಿದುಕೊಂಡು, ಹಾಟ್ ಹಾಟ್ ಆಗಿರುವ ಫೋಸ್ ಕೊಟ್ಟು ಫೋಟೋ ತಗೆಸಿಕೊಂಡಿದ್ದರು ಅಪ್ಸರಾ. ಅದನ್ನು ಪೋಸ್ಟ್ ಮಾಡಿ ‘ನೀವು ಪುಸ್ತಕವನ್ನು ಓದಲು ಬಯಸುತ್ತಿರೋ ಅಥವಾ ನನ್ನನ್ನು ಓದಲು ಬಯಸುತ್ತೀರೋ’ ಎಂದು ಕೇಳಿದ್ದರು. ಅದಕ್ಕೆ ರಾಮ್ ಗೋಪಾಲ್ ವರ್ಮಾ ಕ್ಷಣವೂ ಯೋಚಿಸಿದೆ ‘ನಿನ್ನನ್ನು ಓದುತ್ತೇನೆ ಎಂದು ಉತ್ತರಿಸಿದ್ದರು.

Share This Article