ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಮ್ ಚರಣ್ ದಂಪತಿ

Public TV
1 Min Read
Ram Charan 3 1

ಹೆಸರಾಂತ ನಟ ರಾಮ್ ಚರಣ್ ಮತ್ತು ಉಪಾಸನಾ (Upasana) ದಂಪತಿ ತಿರುಪತಿ ತಿಮ್ಮಪ್ಪನ (Tirupati) ದರ್ಶನ ಪಡೆದಿದ್ದಾರೆ. ಶೂಟಿಂಗ್ ನಡುವೆಯೂ ಬಿಡುವು ಮಾಡಿಕೊಂಡು ತಿಮ್ಮಪ್ಪನ ಸನ್ನಿಧಾನಕ್ಕೆ ಆಗಮಿಸಿದ್ದರು ರಾಮ್ ಚರಣ್. ತಿರುಪತಿಗೆ ದಂಪತಿ ಆಗಾಗ್ಗೆ ಬರುತ್ತಲೇ ಇರುತ್ತಾರೆ. ಈ ದಂಪತಿಯು ನಂಬಿರುವ ಅತ್ಯಂತ ಪ್ರಮುಖ ದೇವಸ್ಥಾನ ಇದಾಗಿದೆ.

Ram Charan 2 1

ಈ ನಡುವೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ನಟ ಶಿವರಾಜ್ ಕುಮಾರ್ (Shivaraj Kumar) ಮತ್ತು ತೆಲುಗಿನ ಹೆಸರಾಂತ ನಟ ರಾಮ್ ಚರಣ್ (Ram Charan) ಕಾಂಬಿನೇಷನ್ ನ ಚಿತ್ರವೊಂದು ಮೂಡಿ ಬರಲಿದೆ ಎಂದು ಹೇಳಲಾಗಿತ್ತು. ಅದು ಈಗ ನಿಜವಾಗಿಯೇ ಈ ಕಾಂಬಿನೇಷನ್ ಚಿತ್ರಕ್ಕೆ ಇದೇ ಮಾರ್ಚ್ 20ಕ್ಕೆ ಮುಹೂರ್ತ ನಡೆದಿದೆ. ಈ ಚಿತ್ರಕ್ಕೆ ಪೆದ್ದಿ ಎಂದು ಹೆಸರಿಡಲಾಗಿದೆ. ಪೆದ್ದಿ ಎಂದರೆ ತೆಲುಗಿನಲ್ಲಿ ದೊಡ್ಡದು ಎಂದರ್ಥ. ಇದು ಸಿನಿಮಾದ ಕಾನ್ಸೆಕ್ಟ್ ಕೂಡ ಆಗಿರಲಿದೆಯಂತೆ.

Ram Charan 1 4

ಈ ಸಿನಿಮಾದ ಕುರಿತಂತೆ ಹಲವಾರು ವಿಚಾರಗಳು ಈಗಾಗಲೇ ತೆಲುಗು ಸಿನಿಮಾ ರಂಗದಲ್ಲಿ ಗಿರಕಿ ಹೊಡೆಯುತ್ತಿವೆ. ಈ ಸಿನಿಮಾದಲ್ಲಿ ಶಿವಣ್ಣ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಸ್ವತಃ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ‘ತೆಲುಗಿನಲ್ಲಿ ಆಫರ್ ಬಂದಿದ್ದು ನಿಜ. ರಾಮ್ ಚರಣ್ ಅವರ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಬುಚ್ಚಿ ಬಾಬು ನನ್ನನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ಮಾತನಾಡಿದ್ದೇನೆ. ಆದರೆ, ಆ ಸಿನಿಮಾ ಬಗ್ಗೆ ಸದ್ಯ ಏನೂ ಹೇಳಲಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

 

ಜೈಲರ್ ಒಪ್ಪಿಕೊಳ್ಳುವಾಗಲೇ ಧನುಷ್ (Dhanush) ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೂ ಸಹಿ ಮಾಡಿದ್ದರು ಶಿವರಾಜ್ ಕುಮಾರ್. ನಂತರ ರಾಮ್ ಚರಣ್ ಅವರ ಸಿನಿಮಾದಲ್ಲೂ ನಟಿಸಲು ಮನಸ್ಸು ಮಾಡಿದ್ದರಂತೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಎನ್ನುವುದು ಹಲವರ ಲೆಕ್ಕಾಚಾರ.

Share This Article