ಚಿರಂಜೀವಿ ಮತ್ತು ಶ್ರೀದೇವಿ ನಟಿಸಿರುವ ‘ಜಗತೇಕ ವೀರುಡು ಅತಿಲೋಕ ಸುಂದರಿ’ ಚಿತ್ರ ಬಿಡುಗಡೆಯಾಗಿ 35 ವರ್ಷಗಳು ಕಳೆದಿದೆ. ಇಂದು (ಮೆ.9) ಮತ್ತೆ ಈ ಚಿತ್ರ ಚಿತ್ರಮಂದಿರಗಳಲ್ಲಿ ರೀ ರಿಲೀಸ್ ಆಗಿದೆ.
ಈ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ (Chiranjeevi) ಸಂದರ್ಶನವೊಂದರಲ್ಲಿ ಮಾತನಾಡಿ, ಶ್ರೀದೇವಿ (Sridevi) ಈ ಚಿತ್ರದ ಹೃದಯ. ಈ ಸಂದರ್ಭದಲ್ಲಿ ಅವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ಚಿತ್ರ ಮತ್ತೆ ರಿಮೇಕ್ ಆದ್ರೆ ಅಥವಾ ಎರಡನೇ ಭಾಗ ಆದ್ರೆ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ (Janhvi Kapoor) ನಟಿಸಬೇಕು. ಅಶ್ವಿನಿ ದತ್ ಅವರ ಮಕ್ಕಳು ಇದನ್ನು ನಿರ್ಮಿಸಬೇಕು ಮತ್ತು ಅವರ ಅಳಿಯ ನಾಗ್ ಅಶ್ವಿನ್ ನಿರ್ದೇಶಿಸಬೇಕು. ಹಾಗೇನಾದ್ರೂ ಆದ್ರೆ ಆ ಚಿತ್ರ ಅದ್ಭುತವಾಗಿ ನಿರ್ಮಾಣ ಆಗಲಿದೆ ಎಂದಿದ್ದಾರೆ. ಇದನ್ನೂ ಓದಿ: ತುಪ್ಪದ ಬೆಡಗಿಗೆ ಬೇಡಿಕೆ- 7 ಸಿನಿಮಾಗಳಲ್ಲಿ ರಾಗಿಣಿ ಬ್ಯುಸಿ
ಜಗದೇಕ ವೀರುಡು ಅತಿಲೋಕ ಸುಂದರಿ 1990 ರಲ್ಲಿ ಬಿಡುಗಡೆಯಾದ ಒಂದು ಫ್ಯಾಂಟಸಿ ಚಿತ್ರ. ಈ ಚಿತ್ರದಲ್ಲಿ ಚಿರಂಜೀವಿ ಮತ್ತು ಶ್ರೀದೇವಿಯಲ್ಲದೆ, ಅಮರೀಶ್ ಪುರಿ, ಕನ್ನಡ ನಟ ಪ್ರಭಾಕರ್, ಅಲ್ಲು ರಾಮಲಿಂಗಯ್ಯ ಮತ್ತು ಇತರ ಪ್ರಮುಖ ನಟರು ನಟಿಸಿದ್ದಾರೆ.
ಚಿರಂಜೀವಿ ಇತ್ತೀಚೆಗೆ ‘ವಿಶ್ವಂಬರ’ ಚಿತ್ರದಲ್ಲಿ ನಟಿಸಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಚಂದನ್ ಶೆಟ್ಟಿ ಜೊತೆ ಹಸೆಮಣೆ ಏರಿದ ‘ಸೀತಾ ವಲ್ಲಭ’ ನಟಿ ಸುಪ್ರೀತಾ