ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಸೌತ್ ಮತ್ತು ಬಾಲಿವುಡ್ (Bollywood) ಸಿನಿಮಾಗಳ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಇತ್ತೀಚಿನ ಸಂದರ್ಶನ್ವೊಂದರಲ್ಲಿ ನೆಪೋಟಿಸಂನಿಂದ ಎದುರಿಸಿದ ಸಮಸ್ಯೆಯ ಕುರಿತು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಕೆಜಿಎಫ್ 2’ ಸಿಂಗರ್ ಜೊತೆ ಎಂಗೇಜ್ ಆದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್ ಮರವಂತೆ
Advertisement
ನೆಪೋಟಿಸಂನಿಂದ ನಾನು ಕೂಡ ಸಮಸ್ಯೆ ಎದುರಿಸಿದ್ದೇನೆ. ಇದರಿಂದ ಹಲವು ಅವಕಾಶಗಳು ಕೈತಪ್ಪಿವೆ. ಅದನ್ನೇ ಇಟ್ಟುಕೊಂಡು ದ್ವೇಷ ಸಾಧಿಸುವ ವ್ಯಕ್ತಿ ನಾನಲ್ಲ. ನನ್ನ ತಂದೆ ಸೈನ್ಯದಲ್ಲಿದ್ದವರು. ನಾನು ಕೂಡ ಸೈನ್ಯಕ್ಕೆ ಸೇರಲು ನಿರ್ಧರಿಸಿದ್ದರೆ, ಅವರು ನನಗೆ ಸಹಾಯ ಮಾಡುತ್ತಿದ್ದರು, ಸಲಹೆ ನೀಡುತ್ತಿದ್ದರು. ಅದನ್ನು ತಪ್ಪು ಎಂದು ಹೇಳಲಾಗದು ಎಂದು ನೆಪೋಟಿಸಂ ಪರವಾಗಿಯೇ ರಕುಲ್ ಮಾತನಾಡಿದ್ದಾರೆ. ಅವರ ಹೇಳಿಕೆಗೆ ಇದೀಗ ಪರ ವಿರೋಧದ ಚರ್ಚೆಯಾಗುತ್ತಿದೆ.
Advertisement
Advertisement
ಇನ್ನೂ ಜುಲೈ 12ರಂದು ‘ಇಂಡಿಯನ್ 2’ (Indian 2) ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕಮಲ್ ಹಾಸನ್, ಸಿದ್ಧಾರ್ಥ್ ಜೊತೆ ರಕುಲ್ ನಟಿಸಿದ್ದರು. ಇದೀಗ ಅಜಯ್ ದೇವಗನ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಜೊತೆ ಟಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.
Advertisement
2009ರಲ್ಲಿ ಕನ್ನಡದ ಗಿಲ್ಲಿ ಸಿನಿಮಾದಲ್ಲಿ ಜಗ್ಗೇಶ್ ಪುತ್ರ ಗುರುರಾಜ್ಗೆ ನಾಯಕಿಯಾಗಿ ರಕುಲ್ ನಟಿಸಿದರು. ಬಳಿಕ ಸೌತ್ ಸಿನಿಮಾಗಳಲ್ಲಿ ಹೆಚ್ಚು ಗುರುತಿಸಿಕೊಂಡರು.