ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಡ್ರಗ್ಸ್ (Drugs) ವಿಚಾರವಾಗಿ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ (Money Laundering) ವಿಚಾರಣೆಗೆ ಹಾಜರಾಗುವಂತೆ ನಟಿ ರಾಕುಲ್‌ಗೆ ನೋಟಿಸ್ ನೀಡಲಾಗಿದೆ. ಈ ಮೂಲಕ ಮತ್ತೆ ನಟಿಗೆ ಸಂಕಷ್ಟ ಎದುರಾಗಿದೆ.
Advertisement
ಟಾಲಿವುಡ್ (Tollywood) ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (Enforcement Directorate) ರಾಕುಲ್ ಪ್ರೀತ್ ಸಿಂಗ್ ಶಾಕ್ ನೀಡಿದೆ. ಈ ಹಿಂದೆ ಸೆ. 3, 2021ರಂದು ನಟಿ ರಾಕುಲ್ ಪ್ರೀತ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು.
Advertisement
Advertisement
ಅವರ ಜೊತೆಗೆ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಶಾಸಕ ಪೈಲಟ್ ರೋಹಿತ್ ರೆಡ್ಡಿ (Pilot Rohith Reddy) ಅವರನ್ನೂ ಪ್ರತ್ಯೇಕ ಪ್ರಕರಣದಲ್ಲಿ ವಿಚಾರಣೆಗೆ ಕರೆಯಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಇಡಿ ಮಾದಕವಸ್ತು ಕಳ್ಳಸಾಗಣೆ ಮತ್ತು ಸೇವನೆಯ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಹಲವಾರು ತೆಲುಗು ಕಲಾವಿದರನ್ನು ಪ್ರಶ್ನಿಸಲಾಗಿದೆ. ಇದೀಗ ಮತ್ತೆ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಸಮನ್ಸ್ (Notice) ನೀಡಲಾಗಿದೆ. ಇದನ್ನೂ ಓದಿ: ದೀಪಿಕಾ ಕೇಸರಿ ಬಿಕಿನಿ ವಿವಾದ: `ಪಠಾಣ್’ ನಟಿಯ ಪರ ನಿಂತ ನಟಿ ರಮ್ಯಾ
Advertisement
2017ರಲ್ಲಿ ಡ್ರಗ್ಸ್ ಪ್ರಕರಣ ಇಡೀ ಟಾಲಿವುಡ್ ಅನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ತನಿಖೆ ಇನ್ನೂ ಕೂಡ ನಡೆಯುತ್ತಿದೆ. ತೆಲುಗಿನ ಸ್ಟಾರ್ಸ್ ರವಿತೇಜ (Ravi Teja), ಚಾರ್ಮಿ ಕೌರ್, ನವದೀಪ್, ಮುಮೈತ್ ಖಾನ್, ತನಿಶ್, ನಂದು, ತರುಣ್ ಮತ್ತು ಬಾಹುಬಲಿ ನಟ ರಾಣಾ ದಗ್ಗುಬಾಟಿ (Rana Daggubati) ಸೇರಿದಂತೆ ಇನ್ನೂ ಅನೇಕರಿಗೆ ಈ ಹಿಂದೆಯೇ ಇಡಿ ಸಮನ್ಸ್ ನೀಡಿತ್ತು.