Ramayana: ಯಶ್ ಸಿನಿಮಾದಲ್ಲಿ ಶೂರ್ಪನಕಿಯಾಗಿ ರಕುಲ್ ಪ್ರೀತ್ ಸಿಂಗ್

Public TV
1 Min Read
rakul 1

ನ್ನಡದ ‘ಗಿಲ್ಲಿ’ (Gilli Film) ನಟಿ ರಕುಲ್ ಪ್ರೀತ್‌ ಸಿಂಗ್ (Rakul Preet Singh) ಇದೀಗ ಯಶ್ (Yash) ನಿರ್ಮಾಣದ‌ ರಾಮಾಯಣ ಸಿನಿಮಾದಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಶೂರ್ಪನಕಿಯಾಗಿ ‘ರಾಮಾಯಣ’ ಚಿತ್ರಕ್ಕೆ ರಕುಲ್ ಎಂಟ್ರಿ ಕೊಡ್ತಿದ್ದಾರೆ. ಇದನ್ನೂ ಓದಿ:11 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡುತ್ತಿದ್ದೇವೆ; ಮ್ಯೂಸಿಕ್‌ ಡೈರೆಕ್ಟರ್ ಜಿ.ವಿ ಪ್ರಕಾಶ್

Rakul Preet Singh 2ನ್ಯಾಷನಲ್ ಸ್ಟಾರ್ ಯಶ್ ಸಹ ನಿರ್ಮಾಪಕನಾಗಿ ಕೈಜೋಡಿಸಿರುವ ‘ರಾಮಾಯಣ’ ಸಿನಿಮಾತಂಡ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ರಾಮನಾಗಿ ರಣ್‌ಬೀರ್ ಕಪೂರ್ (Ranbir Kapoor) ಮತ್ತು ಸೀತೆಯಾಗಿ ಸಾಯಿ ಪಲ್ಲವಿ (Sai Pallavi) ನಟಿಸುತ್ತಿದ್ದಾರೆ. ಲಂಕಾಧೀಶ ರಾವಣನ ಸಹೋದರಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ.

rakul preet singhಕನ್ನಡದ ‘ಗಿಲ್ಲಿ’ ಚಿತ್ರದ ಮೂಲಕ ಬಣ್ಣದ ಹಚ್ಚಿದ ನಟಿ ರಕುಲ್ ತೆಲುಗು ಸಿನಿಮಾಗಳ ನಂತರ ಬಾಲಿವುಡ್‌ನಲ್ಲಿ ಸ್ಟಾರ್ ನಟರ ಜೊತೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡರು. ಇದೀಗ ರಾಮಾಯಣ ಸಿನಿಮಾದ ಆಫರ್ ಸಿಕ್ಕಾಗ ಸೂಕ್ತ ಅವಕಾಶ ಎನಿಸಿ ನಟಿ ಓಕೆ ಎಂದಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ನಲ್ಲಿ ರಕುಲ್ ಭಾಗಿಯಾಗಲಿದ್ದಾರೆ.

ಅಂದಹಾಗೆ, ಇತ್ತೀಚೆಗೆ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕವೂ ನಟಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

Share This Article