ಚಿಕ್ಕಮಗಳೂರು: ಮೂಡಿಗೆರೆಯ (Mudigere) ಗುಡ್ನಳ್ಳಿಯ ಅಂಧ ಓಟಗಾರ್ತಿ ರಕ್ಷಿತಾ ರಾಜು (Rakshitha Raju) ಹ್ಯಾಂಗ್‍ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ (Para Asina Games) ಮಹಿಳೆಯರ ವಿಭಾಗದ 1,500 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಯುವತಿಯ ಸಾಧನೆಗೆ ಗ್ರಾಮದ ಜನ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರ ಬಂಧನ
5 ನಿಮಿಷ 21 ಸೆಕೆಂಡಿನಲ್ಲಿ 1,500 ಮೀಟರ್ ಕ್ರಮಿಸಿ ಅವರು ಚಿನ್ನ ಗೆದ್ದಿದ್ದಾರೆ. ಕೋಚ್ ರಾಹುಲ್ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಕಳೆದ ಬಾರಿ ಪ್ಯಾರಿಸ್‍ನಲ್ಲಿ ನಡೆದ ಟಿ11ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು. ಈ ಬಾರಿ ಚಿನ್ನ ಗೆಲ್ಲುವ ಮೂಲಕ ಭರವಸೆಯ ಕ್ರೀಡಾಪಟುವಾಗಿ ಹೊರ ಹೊಮ್ಮಿದ್ದಾರೆ. ಅವರ ಕೋಚ್ ರಾಹುಲ್ ಕೂಡ 1,500 ಮೀಟರ್ ಓಟದಲ್ಲಿ ಪದಕ ಪಡೆದಿದ್ದಾರೆ.
Advertisement
Advertisement
ಅಂಧ ಯುವತಿಯ ಈ ಸಾಧನೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವತಿಯ ಗ್ರಾಮದ ಯುವಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಮೂಲಕ ಯುವತಿ ಮುಂದೆಯೂ ಉನ್ನತ ಸಾಧನೆಗೆ ಮಾಡಲಿ ಎಂದು ಹಾರೈಸಿದ್ದಾರೆ. ಮುಂದಿನ ವಾರ ದೆಹಲಿಯಲ್ಲಿ ಪ್ರಧಾನಿ ಮೋದಿ ಕೂಡ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನ ಗೆದ್ದವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: `ಕೈ ಕಮಲ’ ಕ್ರೆಡಿಟ್ ಗಲಾಟೆ – ಬಿಜೆಪಿ ಶಾಸಕ ಚಾಲನೆ ನೀಡಿದ್ದ ಕಾಮಗಾರಿಗೆ ಮತ್ತೆ ಭೂಮಿ ಪೂಜೆ
Advertisement
Web Stories