ಪ್ರೇಮ್ ಕಾಲೆಳೆದವರಿಗೆ ಮಾತಿನಲ್ಲೇ ಚಾಟಿ ಬೀಸಿದ ರಕ್ಷಿತಾ

Public TV
2 Min Read
rakshitha prem collage

ಬೆಂಗಳೂರು: ಮಹಿಳೆಯರಿಗೆ ಮರ್ಯಾದೆ ಕೊಡದ ಅಭಿಮಾನಿಗಳಿಗೆ ನಟಿ ರಕ್ಷಿತಾ ಪ್ರೇಮ್ ವಾರ್ನಿಂಗ್ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದವರಿಗೆ ರಕ್ಷಿತಾ ಪ್ರೇಮ್ ಬರಹದಲ್ಲೇ ಚಾಟಿ ಬೀಸಿದ್ದಾರೆ.

ಅಭಿಮಾನಿ ಬರೆದ ಪತ್ರವನ್ನ ಶೇರ್ ಮಾಡಿದ್ದಕ್ಕೆ ಫ್ಯಾನ್ಸ್‍ಗಳಿಂದ ಕಮೆಂಟ್ ಗಳ ಸುರಿಮಳೆ ಬಂದಿತ್ತು. ಹೀಗಾಗಿ ಫೇಸ್‍ಬುಕ್ ನಲ್ಲಿ ಬರಹ ಬರೆದು ಮರ್ಯಾದೆ ಕೊಡದೆ ಮಾತನಾಡಿದವರ ವಿರುದ್ಧ ರಕ್ಷಿತಾ ಸಿಡಿದೆದ್ದಿದ್ದಾರೆ.

rakshitha prem

ಪ್ರತಿಯೊಂದು ಚಿತ್ರದ ನಿರ್ದೇಶಕನ ಆಲೋಚನೆಯನ್ನು, ಸೃಜನಶೀಲತೆಯನ್ನು ಹಾಗೂ ಅವರ ಭಾವನೆಯನ್ನು ನಾನು ಗೌರವಿಸುತ್ತೇನೆ. ಚಿತ್ರರಂಗದಲ್ಲಿ ಎಲ್ಲರಿಗೂ ಅವರದ್ದೇ ಆದ ಕತೆ ಇರುತ್ತದೆ. ಎಲ್ಲರೂ ತಮ್ಮ ಜೀವನದಲ್ಲಿ ತಮ್ಮದೇ ಆದ ಕಷ್ಟಗಳನ್ನು ಅನುಭವಿಸುತ್ತಾರೆ. ಯಾರು ಹೆಚ್ಚು ಕಷ್ಟಪಟ್ಟಿದ್ದಾರೆ ಹಾಗೂ ಯಾರು ಕಡಿಮೆ ಕಷ್ಟಪಟ್ಟಿದ್ದಾರೆ ಎಂಬುದು ನೋಡುವುದ್ದಕ್ಕೆ ಇದು ಸ್ಪರ್ಧೆ ಅಲ್ಲ. ಅಲ್ಲದೇ ಒಬ್ಬರ ಕಷ್ಟಗಳನ್ನು ಇನ್ನೊಬ್ಬರ ಕಷ್ಟಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಬರೆದಿದ್ದಾರೆ.

rakshitha

ಸಾಕಷ್ಟು ಜನರು ನಾನು ನಿನ್ನೆ ಒಂದು ಆರ್ಟಿಕಲ್ ಬರೆದಿದ್ದೇನೆ ಎಂದುಕೊಂಡಿದ್ದಾರೆ. ಜನರು ನನ್ನ ಹಾಗೂ ನನ್ನ ಯೋಗ್ಯತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ನನ್ನ ಬಗ್ಗೆ ಮಾತನಾಡುವುದಿರಲಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರಿಗೆ ಹೇಗೆ ಗೌರವ ನೀಡಬೇಕೆಂದು ಕೆಲವರಿಗೆ ಗೊತ್ತಿಲ್ಲ. ಈ ರೀತಿ ಕಮೆಂಟ್ ಮಾಡುವುದರಿಂದ ನಿಮ್ಮ ಕ್ಲಾಸ್ ಏನು ಎಂದು ಗೊತ್ತಾಗುತ್ತದೆ ಎಂದು ರಕ್ಷಿತಾ ಪ್ರೇಮ್ ಪೋಸ್ಟ್ ಮಾಡಿದ್ದಾರೆ.

prem

ಅಲ್ಲದೇ ರಕ್ಷಿತಾ ತಮ್ಮ ಪತಿ, ನಿರ್ದೇಶಕ ಪ್ರೇಮ್ ಬಗ್ಗೆಯೂ ಬರೆದು ಪೋಸ್ಟ್ ಮಾಡಿದ್ದಾರೆ. ಪ್ರೇಮ್ ‘ದಿ-ವಿಲನ್’ ಸಿನಿಮಾವನ್ನು ಏಕಾಂಗಿಯಾಗಿ ನಿರ್ದೇಶನ ಮಾಡಿದ್ದರು. ನಾನು ಅವರನ್ನು ಮದುವೆಯಾಗಿದ್ದೇನೆ ಎಂದರೆ ನಾನು ಅವರಿಗೆ ಸಿನಿಮಾ ನಿರ್ದೇಶನ ಮಾಡುವುದು ಹೇಳಿಕೊಡುತ್ತಿದ್ದೇನೆ ಎಂದಲ್ಲ. ಯಾರಾದರೂ ನನ್ನನ್ನು ಟಾರ್ಗೆಟ್ ಮಾಡಬೇಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಮಾಡಬೇಡಿ. ನನ್ನನ್ನು ನೇರವಾಗಿ ಭೇಟಿ ಮಾಡಿ ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಿ ಎಂದು ರಕ್ಷಿತಾ ಕಿಡಿಕಾರಿದ್ದಾರೆ.

ಸಿನಿಮಾ ಅಥವಾ ನಿರ್ದೇಶನ ಯಾವುದೇ ಇರಲಿ, ಹಲೋ, ಹೈ ನಾನು ರಕ್ಷಿತಾ ಹಾಗೂ ನಾನು ಇಲ್ಲಿ ಏಕಾಂಗಿಯಾಗಿ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಪ್ರೇಮ್ ಮದುವೆಯಾಗಿದ್ದಕ್ಕೆ ನನಗೆ ನನ್ನ ಪಾಪೂಲ್ಯಾರಿಟಿ ಹಾಗೂ ನನ್ನ ಸ್ಟಾರ್‍ಡಮ್ ಬಂದಿಲ್ಲ. ಮುಂದಿನ ಬಾರಿ ನಿಮಗೆ ಏನಾದರೂ ಸಮಸ್ಯೆಯಿದ್ದರೆ ನೇರವಾಗಿ ನನ್ನನ್ನು ಭೇಟಿ ಮಾಡಿ ಮಾತನಾಡಿ. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರಿಗೆ ಇನ್ನೂ ಹೆಚ್ಚು ಗೌರವ ನೀಡುವುದನ್ನು ಕಲಿಯಿರಿ ಎಂದು ನಟಿ ರಕ್ಷಿತಾ ಪ್ರೇಮ್ ಫೇಸ್‍ಬುಕ್‍ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *