ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಬಂಧನಕ್ಕೆ ಒಳಗಾಗಿ ಜೈಲುಪಾಲಾಗಿರುವ ದರ್ಶನ್ (Darshan) ಅವರನ್ನು ಭೇಟಿ ಮಾಡಲು ನಟಿ ರಕ್ಷಿತಾ, ನಿರ್ದೇಶಕ ಪ್ರೇಮ್ ಜೈಲಿಗೆ ಆಗಮಿಸಿದ್ದಾರೆ.
ಇಂದು ಸಂಜೆ ಪರಪ್ಪನ ಅಗ್ರಹಾರಕ್ಕೆ (Parappana Agrahara) ಕಾರಿನಲ್ಲಿ ರಕ್ಷಿತಾ(Rakshitha), ಪ್ರೇಮ್(Pream) ದಂಪತಿ ಆಗಮಿಸಿ ಭೇಟಿ ಮಾಡಿದರು. ಇದನ್ನೂ ಓದಿ: ಜನಪ್ರಿಯ ವಾಹಿನಿಯಲ್ಲಿ ಧಾರಾವಾಹಿ ಆಯ್ತು ರೇಣುಕಾಸ್ವಾಮಿ ಮರ್ಡರ್
ಜೈಲು ನಿಯಮಗಳ ಪ್ರಕಾರ ಒಂದು ವಾರದಲ್ಲಿ ಮೂವರಿಗೆ ಮಾತ್ರ ಬೇಟಿ ಮಾಡಲು ಅವಕಾಶ ಇರುತ್ತದೆ. ಈ ಮೊದಲು ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಭೇಟಿ ಮಾಡಿದ್ದರು. ನಂತರ ನಟ ವಿನೋದ್ ಪ್ರಭಾಕರ್ ಭೇಟಿ ಮಾಡಿ ಮಾತನಾಡಿದ್ದರು.