– ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ
ಬೆಂಗಳೂರು: ಏಕ್ ಲವ್ ಯಾ ಸಿನಿಮಾ ಕಾರ್ಯಕ್ರಮದಲ್ಲಿ ಪುನೀತ್‍ಗೆ ಅಪಮಾನ ವಿಚಾರವಾಗಿ ಅಭಿಮಾನಿಗಳಲ್ಲಿ ಮತ್ತು ನಾಡಿನ ಜನತೆಯಲ್ಲಿ ನಟಿ ರಕ್ಷಿತಾ ಪ್ರೇಮ್ ಕ್ಷಮೆ ಕೇಳಿದ್ದಾರೆ.
ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಕಾರ್ಯಕ್ರಮ ಶುರುವಾಗಿದ್ದು ಅಪ್ಪು ಅವರಿಗೆ ನಮನ ಸಲ್ಲಿಸುವ ಮೂಲಕವಾಗಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಹೀಗಾಯಿತ್ತು. ಅದು ಶಾಂಪೇನ್ ಅಲ್ಲ ಅದು ನಾನ್ ಅಲ್ಕೋಹಾಲಿಕ್ ಬಾಟಲ್ ಆಗಿದೆ. ಹಾಗೇ ಯಾರು ಬೇಕು ಎಂದು ಮಾಡುವುದಿಲ್ಲ. ನಮಗೆ ಗೊತ್ತಿಲ್ಲದೇ ಆದ ಕಾರಣ ನಾನು ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ನಾನು ಬಾಟಲ್ ಓಪನ್ ಮಾಡುವಾಗ ತಾಂತ್ರಿಕ ತೊಂದರೆಯಿಂದಾಗಿ ಅಪ್ಪು ಫೋಟೋ ಎಲ್‍ಇಡಿ ಮೇಲೆ ಬಂದು ಬಿಟ್ಟಿತ್ತು. ನಾವು ಯಾರ ಭಾವನೆಯನ್ನು ನೋಯಿಸುವ ಉದ್ದೇಶ ಇರಲಿಲ್ಲ. ಸಾಂಗ್ ರಿಲೀಸ್ ಕಾರ್ಯಕ್ರಮವಾಗಿತ್ತು. ಆ ಹಾಡಿಗೆ ಸಂಬಧಪಟ್ಟಂತೆ ನಾವು ಎನೋ ಮಾಡಲು ಹೋಗಿ ಹೀಗೆ ಆಯ್ತು. ಅಪ್ಪು ಅಭಿಮಾನಿಗಳಿಗೆ ಈ ವಿಚಾರವಾಗಿ ನೋವು ಆಗಿದೆ ಎಂದು ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ: ರಕ್ಷಿತಾ
ನಾನು ಇನ್‍ಸ್ಟಾಗ್ರಾಮ್‍ನಲ್ಲಿ ಈ ವಿಚಾರವಾಗಿ ಕ್ಷಮೆ ಕೇಳಿ ಪೋಸ್ಟ್ ಹಾಕಿದಾಗ ಕೆಲವು ಅಭಿಪ್ರಾಯಗಳು ಬರುತ್ತವೆ. ಅದನ್ನು ನೋಡಿದಾಗ ಗೊತ್ತಾಗುತ್ತದೆ ಕೆಲವರಿಗೆ ಈ ವಿಚಾರವಾಗಿ ಬೇಸರವಾಗಿದೆ ಎಂದು. ನಾನು ನನ್ನ ಚಿತ್ರ ತಂಡ ಪರವಾಗಿ ಕ್ಷಮೆ ಕೇಳುತ್ತೇನೆ. ನಮಗೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ. ನಾನು ಬಾಟಲ್ ಓಪನ್ ಮಾಡಿದಾಗ ಅಪ್ಪು ಫೋಟೋ ಎಲ್‍ಇಡಿ ಮೇಲೆ ಬರುತ್ತಿದ್ದಂತೆ, ನಾವು ಆ ವೀಡಿಯೋ ತಕ್ಷಣ ಸ್ಟಾಪ್ ಮಾಡಿದೆವು ಎಂದಿದ್ದಾರೆ. ಇದನ್ನೂ ಓದಿ: ಏಕ್ ಲವ್ ಯಾ ಸಿನಿಮಾ ತಂಡದಿಂದ ಅಪ್ಪುಗೆ ಅವಮಾನ- ಶಾಂಪೇನ್ ಚಿಮ್ಮಿಸಿ ಸಂಭ್ರಮ
ನಟಿ ರಕ್ಷಿತಾ ಪ್ರೇಮ್ ಇನ್‍ಸ್ಟಾಗ್ರಾಮ್‍ನಲ್ಲಿ, ಅಪ್ಪು ಅಗಲಿಕೆಯ ನೋವಿನಿಂದ ನಾನಿನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಹಲವಾರು ವಿಷಯಗಳು ನನ್ನನ್ನೂ ಇನ್ನೂ ಕಾಡುತ್ತಿವೆ. ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಾಂಪೇನ್ ಓಪನ್ ಮಾಡಿದ್ದು, ಅಪ್ಪು ಅಭಿಮಾನಿಗಳಲ್ಲಿ ಅಸಮಧಾನ ಉಂಟಾಗಿದ್ದರೆ ನನ್ನ ಮತ್ತು ನನ್ನ ತಂಡದ ಕಡೆಯಿಂದ ಕ್ಷಮೆಯಾಚಿಸುತ್ತೇನೆ. ಇದು ಯಾವುದು ಉದ್ದೇಶಪೂರ್ವಕವಲ್ಲ. ಅಪ್ಪು ಇಂದೀಗೂ ಎಂದಿಗೂ ನಮ್ಮ ಮನಸ್ಸಿನಲ್ಲಿದ್ದಾರೆ ಎಂದು ಬರೆದುಕೊಂಡು ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ
ನಡೆದಿದ್ದೇನು?: ಏಕ್ ಲವ್ ಯಾ ಸಿನಿಮಾ ತಂಡ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ವೇಳೆ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಲಾಯಿತ್ತು. ಆದರೆ ಶ್ರದ್ಧಾಂಜಲಿ ವೇಳೆ ಅಪ್ಪು ಫೋಟೋ ಮುಂದೆ ನಟಿ ರಕ್ಷಿತಾ ಪ್ರೇಮ್ ಶಾಂಪೇನ್ ಚಿಮ್ಮಿಸಿದ್ದರು. ಈ ವೇಳೆ ಅಪ್ಪು ಅವರ ಫೋಟೋ ಎಲ್‍ಇಡಿ ಮೇಲೆ ಬಂದಿದೆ. ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಆಗಿತ್ತು. ಇದನ್ನು ಗಮನಿಸಿದ ಸಾರಾ ಗೋವಿಂದ್ ಅವರು, ಅಪ್ಪು ಅಗಲಿಕೆ ನೋವಿನಿಂದ ಹೊರಬಂದಿಲ್ಲ. ಆದರೆ ಇಲ್ಲಿ ಅಪ್ಪು ಅವರಿಗೆ ಅವಮಾನ ಮಾಡಿದಂತಾಗಿದೆ. ಹೀಗಾಗಿ ಚಿತ್ರತಂಡ ಕೂಡಲೇ ಕ್ಷಮೆ ಕೇಳಬೇಕು ಎಂದು ಸೂಚನೆ ನೀಡಿದ್ದರು. ಅಂತೆಯೇ ಇದೀಗ ಪ್ರೇಮ್ ಹಾಗೂ ಅಕುಲ್ ಬಾಲಾಜಿ, ನಟಿ ರಕ್ಷಿತಾ ಪ್ರೇಮ್, ರಚಿತಾ ರಾಮ್ ಸೇರಿದಂತೆ ಇಡೀ ಚಿತ್ರತಂಡ ಕ್ಷಮೆ ಕೇಳಿದೆ.