ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಕ್ಷಿತ್ ಅಭಿನಯದ ಬಹುನಿರೀಕ್ಷಿತ ‘777 ಚಾರ್ಲಿ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಇದೇ ಜೂನ್ 10ಕ್ಕೆ ವಿಶ್ವದೆಲ್ಲೆಡೆ ‘777 ಚಾರ್ಲಿ’ ಚಿತ್ರ ತೆರೆ ಕಾಣುತ್ತಿದೆ.
Advertisement
ಪ್ರತಿ ಸಿನಿಮಾದಲ್ಲೂ ಡಿಫರೆಂಟ್ ಕಂಟೆಂಟ್‌ನಿಂದ ಎಂಟ್ರಿ ಕೊಡುವ ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ ಎಂದೂ ಮಾಡಿರದ ಡಿಫರೆಂಟ್ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ತಂಡ ಈಗ ‘777 ಚಾರ್ಲಿ’ ಚಿತ್ರದ ದಿನಾಂಕ ಅನೌನ್ಸ್ ಮಾಡಿದ್ದಾರೆ. ರಕ್ಷಿತ್ ಹೊಸ ಸಿನಿಮಾ ಇದೇ ಜೂನ್ 10ಕ್ಕೆ ದೇಶಾದ್ಯಂತ ತೆರೆ ಕಾಣಲಿದೆ.
Advertisement
Advertisement
ಕಿರಣ್ ರಾಜ್ ನಿರ್ದೇಶನ ಚಿತ್ರಕ್ಕಿದ್ದು, ಶ್ವಾನ ಮತ್ತು ಮನುಷ್ಯನ ಸಂಬಂಧದ ಮೇಲೆ ಹೆಣೆಯಲಾದ ಕಥೆಯೇ `777′ ಚಾರ್ಲಿ ಸ್ಟೋರಿಯಾಗಿದೆ. ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಸಂಗೀತ ಶೃಂಗೇರಿ ನಟಿಸಿದ್ದಾರೆ. ಮೂರು ವರ್ಷಗಳ ನಂತರ ಈಗ ತೆರೆ ಕಾಣ್ತಿರೋ ರಕ್ಷಿತ್ ಅಭಿನಯದ `777 ಚಾರ್ಲಿʼ ಚಿತ್ರದ ಮೇಲೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಇದನ್ನು ಓದಿ: ʻಕೆಜಿಎಫ್ 2ʼ ರಿಲೀಸ್ ಬೆನ್ನಲ್ಲೇ ಯಶ್ ಟೆಂಪಲ್ ರನ್: ಧರ್ಮಸ್ಥಳದಲ್ಲಿ ಯಶ್
Advertisement
‘777’ ಚಾರ್ಲಿ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ದಾನಿಷ್ ಶೇಠ್, ಬಾಬಿ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘777 ಚಾರ್ಲಿʼ ಚಿತ್ರ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ಮಲಯಾಳಂನಲ್ಲಿ ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಪೋಸ್ಟರ್‌ನಿಂದ ಸಿನಿಪ್ರಿಯರ ಗಮನ ಸೆಳೆದಿರೋ ರಕ್ಷಿತ್ ನಟನೆಯ `777 ಚಾರ್ಲಿ’ ಚಿತ್ರಕ್ಕಾಗಿ ಕಾಯ್ತಿದ್ದಾರೆ.