ತಾನು ಕೈಹಿಡಿಯೋ ಹುಡುಗ ಹೇಗಿರಬೇಕೆಂದು ರಕ್ಷಿತಾ ಶೆಟ್ಟಿ (Rakshita Shetty) ಮನಬಿಚ್ಚಿ ಮಾತನಾಡಿದ್ದಾರೆ. ರಕ್ಷಿತಾ ಮಾತುಗಳನ್ನು ಕೇಳಿ ಅತಿಥಿಗಳು ತುಂಬಾ ಎಂಜಾಯ್ ಮಾಡಿದ್ದಾರೆ.
ನೀನು ಮದುವೆಯಾಗೋ ಹುಡುಗ ಹೇಗಿರಬೇಕು ಅಂತ ರಕ್ಷಿತಾಗೆ ರಜತ್ ಕೇಳ್ತಾರೆ. ಅದಕ್ಕೆ ರಕ್ಷಿತಾ, ‘ಹಳ್ಳಿ ಹುಡುಗ ಆಗಿರಬೇಕು. ತೋಟ ಇರಬೇಕು. ಕೃಷಿ ಮಾಡಬೇಕು’ ಅಂತ ಹೇಳಿದ್ದಾರೆ. ಇದನ್ನೂ ಓದಿ: ಗಿಲ್ಲಿ ಕ್ವಾಟ್ಲೆಗೆ ‘ಉಗ್ರ’ ರೂಪ ತಾಳಿದ ಮಂಜು; ಸ್ಪರ್ಧಿಗಳಿಗೆ ಫುಲ್ ಕ್ಲಾಸ್

‘ನನ್ನ ತಂದೆ-ತಾಯಿ ಸೋಷಿಯಲ್ ಮೀಡಿಯಾದಲ್ಲಿ ಇಲ್ಲ. ನಮ್ಮ ಫ್ಯಾಮಿಲಿಯಲ್ಲಿ ನಾನೇ ಮೊದಲು. ಮುಂದೆ ಸೋಷಿಯಲ್ ಮೀಡಿಯಾವೇ ನನಗೆ ಲೈಫ್. ನನ್ನ ಬ್ಲಾಗಿಂಗ್‌ಗೆ ಸಪೋರ್ಟ್ ಮಾಡುವಂತಹ ಹುಡುಗ ಬೇಕು’ ಅಂತ ರಕ್ಷಿತಾ ಹೇಳ್ತಾರೆ.
‘ಮದುವೆಯಾದ್ಮೇಲೆ ಬೇಡ ಅಂದ್ರೆ’ ಅಂತ ರಜತ್ ಕೇಳ್ತಾರೆ. ಅದಕ್ಕೆ ರಕ್ಷಿತಾ, ‘ಬೇಡ ಅಂದ್ರೂ ನಾನು ಕಂಟಿನ್ಯೂ ಮಾಡ್ತೀನಿ. ಇಷ್ಟ ಇದ್ರೆ ಇರ್ತಾರೆ. ಇಲ್ಲಾಂದ್ರೆ ಹೋಗ್ತಾರೆ’ ಎನ್ನುತ್ತಾರೆ. ನಾನು ಬ್ಲಾಗ್ ಮಾಡ್ತೀನಿ, ನಿಲ್ಲಿಸಲ್ಲ ಅನ್ನೋದನ್ನ ರಕ್ಷಿತಾ ಸ್ಪಷ್ಟಪಡಿಸ್ತಾರೆ. ಇದನ್ನೂ ಓದಿ: ಗಿಲ್ಲಿ ಜೊತೆ ಕಿರಿಕ್ ಮಾಡ್ಕೊಂಡ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳು
ರಕ್ಷಿತಾ ಕೈಹಿಡಿಯೋ ಹುಡುಗ ಹೇಗಿರಬೇಕು ಗೊತ್ತಾ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKSP pic.twitter.com/eyPaXAas2C
— Colors Kannada (@ColorsKannada) November 27, 2025
ರಕ್ಷಿತಾ ಮಾತಿಗೆ ಅತಿಥಿಗಳು ಬಿದ್ದು ಬಿದ್ದ ನಗ್ತಾರೆ. ಸ್ಪರ್ಧಿಗಳ ಜೊತೆ ಎಂಜಾಯ್ ಮೂಮೆಂಟ್ ಕಳೆಯುತ್ತಿದ್ದಾರೆ.

