ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ (Rakshita Prem) 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ನಟಿಯ ಬರ್ತ್‌ಡೇಯನ್ನು ಪ್ರೇಮ್ ಅದ್ಧೂರಿಯಾಗಿ ಆಚರಿಸಿದ್ದಾರೆ. ಇದೀಗ ಪತ್ನಿ ರಕ್ಷಿತಾ ಹುಟ್ಟುಹಬ್ಬದ ಫೋಟೋಗಳನ್ನು ಪ್ರೇಮ್ (Director Prem) ಶೇರ್ ಮಾಡಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಲಂಚ್ ಡೇಟ್- ಮತ್ತೆ ಡೇಟಿಂಗ್ ಬಗ್ಗೆ ಶುರುವಾಯ್ತು ಚರ್ಚೆ
ಹ್ಯಾಪಿ ಬರ್ತ್‌ಡೇ ಮಗನೇ, ಸದಾ ಖುಷಿಯಾಗಿರು. ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ, ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ ಎಂದು ಪ್ರೇಮ್ ಪತ್ನಿಗೆ ಪ್ರೀತಿಯಿಂದ ಶುಭಕೋರಿದ್ದಾರೆ. ಇದನ್ನೂ ಓದಿ:ವಿಜಯ್ ಸೇತುಪತಿಗೆ ‘ಅಪ್ಪು’ ಚಿತ್ರದ ನಿರ್ದೇಶಕ ಆ್ಯಕ್ಷನ್ ಕಟ್- ಜೂನ್‌ನಿಂದ ಶೂಟಿಂಗ್ ಶುರು
View this post on Instagram
ನಟಿ ರಕ್ಷಿತಾ ಜನ್ಮದಿನದಂದು ಕೇಕ್ ಕತ್ತರಿಸಿ ಫ್ಯಾಮಿಲಿ ಜೊತೆ ಪಾರ್ಟಿ ಮಾಡಿದ್ದಾರೆ. ಅಮ್ಮ, ಪತಿ ಪ್ರೇಮ್, ಪುತ್ರ ಹಾಗೂ ಸಹೋದರ ರಾಣಾ ದಂಪತಿ ಕೂಡ ಭಾಗಿಯಾಗಿ ಶುಭಹಾರೈಸಿದ್ದಾರೆ.
ನಟಿಯ ಬರ್ತ್‌ಡೇಗೆ ಸ್ಯಾಂಡಲ್‌ವುಡ್ ನಟ-ನಟಿಯರು, ಆಪ್ತರು ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ. ರಕ್ಷಿತಾಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.
ರಕ್ಷಿತಾ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ನಿರ್ಮಾಪಕಿಯಾಗಿ ಹಾಗೂ ಕಿರುತೆರೆ ಡ್ಯಾನ್ಸ್ ಶೋಗಳಲ್ಲಿ ಜಡ್ಜ್ ಆಗಿ ಅವರು ಆ್ಯಕ್ಟೀವ್ ಆಗಿದ್ದಾರೆ.
2002ರಲ್ಲಿ ‘ಅಪ್ಪು’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ರಕ್ಷಿತಾ ನಟನೆಗೆ ಎಂಟ್ರಿ ಕೊಟ್ಟರು. ಅವರು ನಟಿಸಿದ ಮೊದಲ ಸಿನಿಮಾನೇ ಸೂಪರ್ ಹಿಟ್ ಆಗಿತ್ತು. ಕನ್ನಡದ ಜೊತೆ ತೆಲುಗು, ತಮಿಳಿನಲ್ಲಿಯೂ ರಕ್ಷಿತಾ ನಟಿಸಿದ್ದರು.
ಹಲವು ವರ್ಷಗಳ ಪ್ರೀತಿಗೆ 2007ರಲ್ಲಿ ಡೈರೆಕ್ಟರ್ ಪ್ರೇಮ್ ಜೊತೆ ರಕ್ಷಿತಾ ಮದುವೆಯ ಮುದ್ರೆ ಒತ್ತಿದ್ದರು. ಈ ದಂಪತಿಗೆ ಸೂರ್ಯ ಎಂಬ ಮಗನಿದ್ದಾರೆ.