ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಡೆದ ಬೆಂಗಳೂರು ಕಂಬಳಕ್ಕೆ(Bengaluru Kambala) ಸಖತ್ ರೆಸ್ಪಾನ್ಸ್ ವ್ಯಕ್ತವಾಗಿದೆ. ಎರಡು ದಿನಗಳ ಕಂಬಳದಲ್ಲಿ ಲಕ್ಷಾಂತರ ಜನರು ಕರಾವಳಿಯ ಕಂಬಳವನ್ನ ಕಣ್ತುಂಬಿಕೊಂಡಿದ್ದಾರೆ. ನಿನ್ನೆ ತಡರಾತ್ರಿವರೆಗೆ ಕಂಬಳದಕೋಣಗಳ ಓಟವನ್ನ ಜನರು ಕಣ್ತುಂಬಿಕೊಂಡಿದ್ದಾರೆ. ಈ ಬೆಂಗಳೂರಿನ ಕಂಬಳಕ್ಕೆ ಮತ್ತಷ್ಟು ಕಳೆ ತುಂಬಲು ಚಿತ್ರರಂಗದ ನಟ-ನಟಿಯರು ಕೂಡ ಭಾಗಿಯಾಗಿ ಕಂಬಳಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ದರ್ಶನ್
Advertisement
ಇಂದಿನ ಕಂಬಳಕ್ಕೆ ಸ್ಯಾಂಡಲ್‌ವುಡ್, ಬಾಲಿವುಡ್ ತಾರೆಯರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಮತ್ತಷ್ಟು ಹೆಚ್ಚಿಸಿದ್ರು. ರಕ್ಷಿತ್ ಶೆಟ್ಟಿ (Rakshit Shetty), ಉಪೇಂದ್ರ, ಪೂಜಾ ಹೆಗ್ಡೆ (Pooja Hegde), ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು, ಬೃಂದಾ ಆಚಾರ್ಯ ಕರಾವಳಿಯ ಕ್ರೀಡೆ ಕಂಡು ಪುಳಕಿತರಾದ್ರು. ಕಂಬಳದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹೊಸ ಹುರುಪು ತುಂಬಿದ್ದರು. ಕಂಬಳದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.
Advertisement
Advertisement
ರಾಜ್ಯ ರಾಜಧಾನಿಯಲ್ಲಿ ಕರಾವಳಿಯ ಕಂಬಳಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆ ಆರಂಭವಾದ ಕಂಬಳಕ್ಕೆ ತಡರಾತ್ರಿವರೆಗೂ ಉತ್ಸುಕತೆಯಿಂದ ಲಕ್ಷಾಂತರ ಜನರು ಭಾಗಿಯಾದ್ರೆ, ಇಂದು ಬೆಳಿಗ್ಗೆಯಿಂದಲೇ ಅರಮನೆ ಮೈದಾನಕ್ಕೆ ಬಂದ ಲಕ್ಷಾಂತರ ಜನರು ಕಂಬಳವನ್ನ ಕಣ್ತುಂಬಿಕೊಂಡರು. ಹಗ್ಗದ ಹಿರಿಯ, ಹಗ್ಗದ ಕಿರಿಯ, ಕೆನೆಹಲಗೆ, ಅಡ್ಡ ಪಲಾಯಿ ಹೀಗೆ ಒಂದರ ಹಿಂದೆ ಒಂದರಂತೆ ಸ್ಪರ್ಧೆ ನಡೀತಿದ್ರೆ, ನೆರೆದಿದ್ದ ಜನರು ತಮ್ಮ ಶಿಳ್ಳೆ, ಚಪ್ಪಾಳೆ ಮೂಲಕ ಹುರಿದುಂಬಿಸಿದ್ರು.
Advertisement
ರಾಜ, ಮಹಾರಾಜ ಕರೆಯಲ್ಲಿ ಕೋಣಗಳ ಜೋಡಿ ಓಟದ ಮೂಲಕ ಗಮನಸೆಳೆದ್ರೆ, ಅತ್ತ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ನೃತ್ಯತಂಡಗಳು ಜನರ ಮನತಣಿಸಿದ್ವು. ವೀಕೆಂಡ್ ಹಿನ್ನೆಲೆ ಬೆಂಗಳೂರಿನಲ್ಲಿ ನೆಲೆಸಿರೋ ಕರಾವಳಿಯ ಜನರು ಮಾತ್ರವಲ್ಲದೇ ಸಿಲಿಕಾನ್ ಸಿಟಿ ಜನರು ಕೂಡ ಕಂಬಳ ಕಂಡು ಫುಲ್ ಖುಷ್ ಆಗಿದ್ರು.
ಒಟ್ಟಿನಲ್ಲಿ ಕಂಬಳ ಕೂಟದಲ್ಲಿ ಭಾಗಿಯಾಗಿದ್ದ 178 ಜೋಡಿ ಎಲ್ಲಾ ಬಹುಮಾನ ಗೆಲ್ಲಲು ಸಾಧ್ಯವಾಗದೇ ಇದ್ರೂ ಬೆಂಗಳೂರು ಕಂಬಳದಲ್ಲಿ ನೋಡುಗರ ಮನಸ್ಸು ಗೆದ್ದಿದ್ದಂತೂ ನಿಜ. ‘ಕಾಂತಾರ’ (Kantara) ಚಿತ್ರದಲ್ಲಿ ಸಿನಿ ಪ್ರಿಯರ ಮನಸ್ಸು ಗೆದ್ದಿದ್ದ ಕೋಣಗಳು ಜನರ ಮನಸು ಗೆಲ್ಲುವುದರ ಜೊತೆ ಜೊತೆಗೆ ಕರಾವಳಿಯ ವೈಭವವನ್ನ ಅನಾವರಣ ಮಾಡೋ ಮೂಲಕ ಚಿನ್ನದ ಪದಕವನ್ನ ಸಹ ಪಡೆದಕೊಂಡಿತ್ತು. ಒಂದು ಕಡೆ ಕಂಬಳ ನೋಡೋದಕ್ಕೆ ಜನರ ಸೇರಿದ್ರೆ, ಇನ್ನೊಂದಿಷ್ಟು ಜನ ತಮ್ಮ ನೆಚ್ಚಿನ ಸ್ಟಾರ್‌ಗಳನ್ನ ನೋಡೋಕೆ ಎಂದೇ ಧಾವಿಸಿದ್ದರು.