ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಮುರಿದು ಬಿದ್ದ ನಂತರವೂ ಒಬ್ಬರಿಗೊಬ್ಬರು ಗೌರವಿಸುವುದನ್ನು ಮರೆತಿಲ್ಲ. ರಕ್ಷಿತ್ ಅಭಿಮಾನಿಗಳು ರಶ್ಮಿಕಾ ಬಗ್ಗೆ ಏನಾದರೂ ಕೆಟ್ಟ ಕಾಮೆಂಟ್ ಮಾಡಿದಾಗೆಲ್ಲ ರಶ್ಮಿಕಾ ಪರ ನಿಂತುಕೊಂಡು ರಕ್ಷಿತ್ ಮಾತನಾಡಿದ್ದಾರೆ. ಅಷ್ಟರ ಮಟ್ಟಿಗೆ ರಶ್ಮಿಕಾ ಮೇಲೆ ರಕ್ಷಿತ್ ಅವರಿಗೆ ಗೌರವವಿದೆ. ಈ ಕಾರಣಕ್ಕಾಗಿಯೇ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಅವರ ಒಡೆತನದ ಪರಮ್ ಸ್ಟುಡಿಯೋದಿಂದ ಹಾರೈಕೆಗಳನ್ನು ಟ್ವಿಟ್ ಮಾಡಲಾಗಿದೆ. ಅತೀ ಸುಂದರವಾದ ಫೋಟೋ ಹಾಕಿ ‘ಸ್ಟಾರ್ ಮತ್ತು ಸುಂದರವಾದ ನಟಿಗೆ ಶುಭಾಶಯಗಳು. ನಿಮ್ಮ ಜನುಮದಿನ ವಿಶೇಷ, ಸಿನಿಮಾದಿಂದ ಸಿನಿಮಾಗೆ ನಿಮ್ಮ ಅಸಾಧಾರಣ ಶಕ್ತಿಯನ್ನು ಪ್ರಸ್ತುತಪಡಿಸುತ್ತಿದ್ದೀರಿ’ ಎಂದು ಸುಂದರವಾದ ಸಾಲುಗಳ ಮೂಲಕ ರಶ್ಮಿಕಾ ಅವರನ್ನು ವರ್ಣನೆ ಮಾಡಲಾಗಿದೆ.
ಈ ಹಿಂದೆ ರಶ್ಮಿಕಾ ಮತ್ತು ರಕ್ಷಿತ್ ಅವರು ಎಂಗೇಜ್ ಮೆಂಟ್ ಮುರಿದು ಬಿದ್ದಾಗ ರಕ್ಷಿತ್ ಅಭಿಮಾನಿಗಳು ರಶ್ಮಿಕಾ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡುತ್ತಿದ್ದರು. ಪ್ರತಿ ಸಲವೂ ಅವರನ್ನು ಟ್ರೋಲ್ ಮಾಡುತ್ತಿದ್ದರು. ರಕ್ಷಿತ್ ಶೆಟ್ಟಿ ಅವರಿಗೆ ಹೋಲಿಕೆ ಮಾಡಿ, ಬೈಯುತ್ತಿದ್ದರು. ಆಗೆಲ್ಲ ರಶ್ಮಿಕಾ ಪರವಾಗಿಯೇ ರಕ್ಷಿತ್ ನಿಂತಿದ್ದರು. ಯಾರೂ ಯಾರಿಗೂ ಕೆಟ್ಟದ್ದಾಗಿ ಮಾತನಾಡುವ ಹಕ್ಕಿಲ್ಲ. ಜೀವನದಲ್ಲಿ ಎಲ್ಲವೂ ನಡೆಯುವುದು ಸಹಜ. ನನ್ನ ಸಿನಿಮಾವನ್ನು ನೀವು ಪ್ರೀತಿಸುತ್ತಿದ್ದರೆ, ನನ್ನನ್ನು ಅಭಿಮಾನಿಸುತ್ತಿದ್ದರೆ, ಅವರನ್ನೂ ಗೌರವಿಸಿ ಎಂದಿದ್ದರು. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ
ರಕ್ಷಿತ್ ಶೆಟ್ಟಿ ನಟನೆಯ ಮತ್ತು ನಿರ್ಮಾಣದ ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದವರು ರಶ್ಮಿಕಾ. ಚೊಚ್ಚಲು ಸಿನಿಮಾದಲ್ಲೇ ಅವರು ಸಿಕ್ಕಾಪಟ್ಟೆ ಫೇಮಸ್ ಆದರು. ಒಂದು ರೀತಿಯಲ್ಲಿ ರಕ್ಷಿತ್ ಮತ್ತು ರಶ್ಮಿಕಾ ಜೋಡಿ ಸ್ಯಾಂಡಲ್ ವುಡ್ ಹಿಟ್ ಪೇರ್ ಆಯಿತು. ಅಲ್ಲಿಂದ ರಶ್ಮಿಕಾ ಕನ್ನಡದ ಬಹುತೇಕ ಸ್ಟಾರ್ ಗಳ ಜತೆ ನಟಿಸಿದರು. ಈ ನಡುವೆ ರಕ್ಷಿತ್ ಮತ್ತು ರಶ್ಮಿಕಾ ಪ್ರೇಮಗೀತೆ ಹಾಡಿದರು. ಗೆಳೆತನ ಪ್ರೇಮಕ್ಕೆ ತಿರುಗಿತು. ಮನೆಯವರ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಆದರೆ, ಈ ಬಂಧನ ತುಂಬಾ ದಿನ ಉಳಿಯಲಿಲ್ಲ. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ
2018ರಲ್ಲಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ತೆಲುಗು ಸಿನಿಮಾ ರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟರು. ವಿಜಯ್ ದೇವರಕೊಂಡ ಹೆಸರಿನ ಜತೆ ರಶ್ಮಿಕಾ ಮಂದಣ್ಣ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಹರಡಿತು. ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವಲ್ಲಿಗೆ ಸುದ್ದಿ ಬೆಳೆಯಿತು. ಈ ಕುರಿತು ಇಬ್ಬರೂ ನಿರಾಕರಿಸಿದರೂ, ಹಲವಾರು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಈ ಸುದ್ದಿಯನ್ನು ಸದಾ ಜೀವಂತವಾಗಿಡುತ್ತಿದ್ದಾರೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್
ಸದ್ಯ ಬಾಲಿವುಡ್ ಗೂ ರಶ್ಮಿಕಾ ಹಾರಿದ್ದಾರೆ. ಅಲ್ಲಿಯೂ ಸ್ಟಾರ್ ನಟರ ಚಿತ್ರಗಳಿಗೆ ಸಹಿ ಮಾಡಿದ್ದಾರೆ. ಅಲ್ಲದೇ ಇದಕ್ಕೂ ಮೊದಲು ತಮಿಳು ಚಿತ್ರದಲ್ಲೂ ನಟಿಸಿದ್ದಾರೆ. ಇತ್ತೀಚಿಗೆ ತೆರೆಕಂಡ ‘ಪುಷ್ಪಾ’ ಸಿನಿಮಾ ರಶ್ಮಿಕಾ ಮತ್ತಷ್ಟು ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿತು. ಹೀಗಾಗಿ ದಕ್ಷಿಣದ ಸೂಪರ್ ಸ್ಟಾರ್ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರಾಗಿದ್ದಾರೆ.