Connect with us

Cinema

ರಶ್ಮಿಕಾ ಮಂದಣ್ಣ ಬಗ್ಗೆ ರಕ್ಷಿತ್ ಪ್ರತಿಕ್ರಿಯೆ

Published

on

ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.

ಇತ್ತೀಚೆಗೆ ರಕ್ಷಿತ್ ತಮ್ಮ ಮುಂಬರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು, ತಮಿಳು ಭಾಷೆಯ ಚಿತ್ರವನ್ನು ಪ್ರಮೋಟ್ ಮಾಡಲು ಚೆನ್ನೈಗೆ ತೆರಳಿದ್ದರು.

ಚೆನ್ನೈಯಲ್ಲಿ ಪ್ರತಿಕೆಯೊಂದು ರಕ್ಷಿತ್ ಅವರ ಸಂದರ್ಶನ ನಡೆಸಿತು. ಈ ವೇಳೆ ಸಂದರ್ಶಕ, ರಕ್ಷಿತ್‍ಗೆ ಸಾಂತಾ ಕ್ಲಾಸ್ ಆಗಲು ಹೇಳಿದ್ದರು. ಈ ಸಂದರ್ಭದಲ್ಲಿ ಸಂದರ್ಶಕ ರಶ್ಮಿಕಾ ಅವರ ಹೆಸರು ಹೇಳಿದಾಗ, ರಕ್ಷಿತ್ ಅವರಿಗೆ ಶುಭ ಹಾರೈಸಿದರು.

ರಶ್ಮಿಕಾ ಬಗ್ಗೆ ಮಾತನಾಡಿದ ರಕ್ಷಿತ್, ಅವರು ಯಾವಾಗಲೂ ದೊಡ್ಡದಾಗಿ ಕನಸು ಕಾಣುತ್ತಾರೆ. ನನಗೆ ರಶ್ಮಿಕಾರ ಹಿಂದಿನ ಜೀವನದ ಬಗ್ಗೆ ತಿಳಿದಿದೆ. ಅವರಿಗೆ ಈ ಕನಸುಗಳು ಎಲ್ಲಿಂದ ಬರುತ್ತದೆ ಎಂಬುದು ನನಗೆ ತಿಳಿದಿದೆ. ಸಾಂತಾ ಅವರ ಎಲ್ಲ ಕನಸನ್ನು ನನಸು ಮಾಡಲಿ ಎಂದು ಬಯಸುತ್ತೇನೆ ಎಂದರು.

ಅವನೇ ಶ್ರೀಮನ್ನಾರಾಯಣ 5 ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಇದೇ ಮೊದಲ ಬಾರಿಗೆ ನಟ ರಕ್ಷಿತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಜೋಡಿಯಾಗಿ ನಟಿ ಶಾನ್ವಿ ಶ್ರೀವಾಸ್ತವ್ ನಟಿಸಿದ್ದಾರೆ. ಈ ಸಿನಿಮಾವನ್ನು ಸಚಿನ್ ರವಿ ನಿರ್ದೇಶನ ಮಾಡಿದ್ದಾರೆ.

ಕನ್ನಡದಲ್ಲಿ ಈ ಚಿತ್ರ ಡಿಸೆಂಬರ್ 27ರಂದು ಬಿಡುಗಡೆಯಾಗಲಿದೆ. 2020, ಜನವರಿ 1ರಂದು ತೆಲುಗು ಭಾಷೆಯಲ್ಲಿ, ಜನವರಿ 3ರಂದು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಹಾಗೂ ಜನವರಿ 16ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

Click to comment

Leave a Reply

Your email address will not be published. Required fields are marked *