ಥೈಲ್ಯಾಂಡ್‌ನಲ್ಲಿ `777 ಚಾರ್ಲಿ’ ಸಕ್ಸಸ್ ಸಂಭ್ರಮಿಸಿದ ರಕ್ಷಿತ್ & ಗ್ಯಾಂಗ್

ರಕ್ಷಿತ್ ಶೆಟ್ಟಿ `777 ಚಾರ್ಲಿ’ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಕಲೆಕ್ಷನ್ ಮಾಡಿದೆ. ಈ ಖುಷಿಯಲ್ಲಿ ರಕ್ಷಿತ್ ಆಂಡ್ ಗ್ಯಾಂಗ್ ಥೈಲ್ಯಾಂಡ್‌ಗೆ ಹಾರಿದ್ದಾರೆ.
View this post on Instagram
ಧರ್ಮ ಮತ್ತು ಚಾರ್ಲಿ ಕಥೆಯನ್ನ ಅಭಿಮಾನಿಗಳು ಅಪ್ಪಿ ಒಪ್ಪಿಕೊಂಡಿದ್ದಾರೆ. ಮುಗ್ಧ ನಾಯಿ ಮತ್ತು ಧರ್ಮ ಡೆಡ್ಲಿ ಕಾಂಬಿನೇಷನ್‌ಗೆ ಫ್ಯಾನ್ಸ್ ಫಿದಾ ಆಗಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ನಿರ್ಮಾಪಕನಾಗಿ ಗೆಲುವು ಕಂಡಿರೋ ರಕ್ಷಿತ್ ಶೆಟ್ಟಿ ಈಗ ತಮ್ಮ ಗ್ಯಾಂಗ್‌ನ ಕಟ್ಟಿಕೊಂಡು ಥೈಲ್ಯಾಂಡ್‌ಗೆ ಹಾರಿದ್ದಾರೆ.
View this post on Instagram
ಹೌದು.. `777 ಚಾರ್ಲಿ’ ಗೆದ್ದ ಖುಷಿಯಲ್ಲಿ ರಕ್ಷಿತ್ ಜತೆ ಚಾರ್ಲಿ ಕುಟುಂಬ ಕೂಡ ಥೈಲ್ಯಾಂಡ್‌ಗೆ ಹಾರಿದ್ದಾರೆ. ರಕ್ಷಿತ್ ಶೆಟ್ಟಿ ಜತೆ ನಿರ್ದೇಶಕ ಕಿರಣ್ ರಾಜ್ ಮತ್ತು ತೆರೆಯ ಹಿಂದೆ ಕೆಲಸ ಮಾಡುವ ತಂತ್ರಜ್ಞರು ಕೂಡ ಭಾಗಿಯಾಗಿದ್ದಾರೆ. ಥೈಲ್ಯಾಂಡ್‌ನ ಸುಂದರ ಜಾಗಗಳಿಗೆ ಭೇಟಿ ನೀಡಿದ್ದಾರೆ. ಇಡೀ ತಂಡ ವಿದೇಶದಲ್ಲಿ ರಕ್ಷಿತ್ ಜತೆ ಏಂಜಾಯ್ ಮಾಡಿದ್ದಾರೆ. ಆದರೆ ಇಲ್ಲಿ ಚಾರ್ಲಿ ಮಾತ್ರ ಮಿಸ್ಸಿಂಗ್. ಒಟ್ನಲ್ಲಿ ತಂಡದ ಖುಷಿ, ಜೋಶ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
Live Tv