ಮಡಿಕೇರಿ: ಸ್ಯಾಂಡಲ್‍ವುಡ್‍ನ ಕಿರಿಕ್ ಪ್ರೇಮಿಗಳು ಮದುವೆ ಬಂಧವನ್ನು ನಿಶ್ಚಯಿಸಿಕೊಂಡಿದ್ದಾರೆ. ಮಂಜಿನ ನಗರಿಯಲ್ಲಿ ಹಿರಿಯರ ಸಮ್ಮುಖದಲ್ಲಿ ಪರಸ್ಪರ ರಿಂಗ್ ಬದಲಿಸಿಕೊಂಡು ವಿವಾಹ ಬಂಧನಕ್ಕೆ ಮುನ್ನಡಿ ಬರೆದಿದ್ದಾರೆ.
ಹೌದು. ಕಿರಿಕ್ ಪಾರ್ಟಿಯ ಕರ್ಣ-ಸಾನ್ವಿ ಈಗ ರಿಯಲ್ ಲೈಫ್‍ನಲ್ಲಿ ಜೋಡಿಯಾಗಿದ್ದಾರೆ. ಸೋಮವಾರದಂದು ಕೊಡಗಿನ ವಿರಾಜಪೇಟೆಯ ಸೆರೆನೆಟಿ ಹಾಲ್‍ನಲ್ಲಿ ವಜ್ರದ ಉಂಗುರ ಬದಲಿಸಿಕೊಳ್ಳೋ ಮೂಲಕ ಮದುವೆಗೆ ಮುನ್ನುಡಿ ಬರೆದಿದ್ದಾರೆ.
Advertisement
Advertisement
Advertisement
ಒಂದೇ ಕಾರಿನಲ್ಲಿ ಬಂದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣರನ್ನು ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಲಾಯ್ತು. ನಿಶ್ಚಿತಾರ್ಥ ಸಮಾರಂಭದಲ್ಲಿ ರಕ್ಷಿತ್ ಶೆಟ್ಟಿ ಕೆನೆ ಬಣ್ಣದ ಟುಕ್ಸೆಡೋ ಮತ್ತು ಪೀಚ್ ಕಲರ್‍ನ ಟೈ ಧರಿಸಿ ಕಂಗೊಳಿಸಿದ್ರೆ, ರಶ್ಮಿಕಾ ಪೀಚ್ ಕಲರ್ ಗೌನ್‍ನಲ್ಲಿ ಮಿಂಚಿದ್ರು. ಅಲ್ದೆ ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದ ಸ್ಪೆಷಲ್ ಕೇಕ್ ಕತ್ತರಿಸಿ ಕುಣಿದು ಕುಪ್ಪಳಿಸಿದ್ರು.
Advertisement
ಈ ಅಪೂರ್ವ ಕ್ಷಣಕ್ಕೆ ವಿಜಯ್ ರಾಘವೇಂದ್ರ, ಯಜ್ಞಾ ಶೆಟ್ಟಿ, ರಿಷಬ್ ಶೆಟ್ಟಿ, ಶೀತಲ್ ಶೆಟ್ಟಿ ಸೇರಿದಂತೆ ಚಿತ್ರಂಗದ ಹಲವು ತಾರೆಯರು ಸಾಕ್ಷಿಯಾದ್ರು. ಇದಕ್ಕೂ ಮುನ್ನ ನವಜೋಡಿ ವಿರಾಜಪೇಟೆಯ ಮುಖ್ಯ ಬೀದಿಯಲ್ಲಿರುವ ಗಣಪತಿ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಿದ್ರು. ಮುಂದಿನ ವರ್ಷ ಮದುವೆಯಾಗೋ ಸೂಚನೆ ನೀಡಿದ್ರು.
ನಿಶ್ಚಿತಾರ್ಥದಲ್ಲಿ ಭರ್ಜರಿ ಭೋಜನ ಸವಿದ ಬಂಧು-ಬಳಗ ನವಜೋಡಿಯನ್ನು ಹರಸಿ ಆಶೀರ್ವದಿಸಿದ್ರು.