ಪ್ರತಿಷ್ಠಿತ ಒಟಿಟಿಗಳಲ್ಲಿ ಒಂದಾದ ಜಿ-5 ಕನ್ನಡದಲ್ಲಿ ವೆಬ್ ಸಿರೀಸ್ ನಿರ್ಮಾಣಕ್ಕಿಳಿದಿರುವುದು ಗೊತ್ತೇ ಇದೆ. ಈಗಾಗಲೇ ಅಯ್ಯನ ಮನೆ, ಮಾರಿಗಲ್ಲು ಸೇರಿದಂತೆ ಹಲವು ವೆಬ್‌ಸರಣಿಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದೆ. ಇದೀಗ ಇದೇ ತಿಂಗಳ 20ರಿಂದ ಜಿ-5ನಲ್ಲಿ ರಾಕ್ಷಸ ವೆಬ್ ಸಿರೀಸ್ ಪ್ರಸಾರವಾಗಲಿದೆ. ನಟ ವಿಜಯ್ ರಾಘವೇಂದ್ರ (Vijay Raghavendra) ಅವರ ಚೊಚ್ಚಲ ವೆಬ್‌ಸರಣಿ ಇದಾಗಿದೆ. ಮಲಪ್ರಭಾ ನದಿ ತೀರದ ನಿಗೂಢ ಮೊಸಳೆ ದಾಳಿಗಳ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ನಿನ್ನೆ ಬೆಂಗಳೂರಿನ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ರಾಕ್ಷಸ ಪ್ರೀಮಿಯರ್ ಶೋ ಹಾಗೂ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಜಿ-5 ಬ್ಯುಸಿನೆಸ್ ಹೆಡ್ ದೀಪಕ್ ತಿಮ್ಮಯ್ಯ ಮಾತನಾಡಿ, ಜಿ-5 ವೆಬ್ ಸಿರೀಸ್ ಜರ್ನಿ ಶುರು ಮಾಡಿದಾಗ, ಶೃತಿ ನಾಯ್ಡು ಪ್ರೊಡಕ್ಷನ್, ಪಿಆರ್‌ಕೆ, ಕೆಆರ್‌ಜಿ ಈಗ ತರುಣ್ ಸುಧೀರ್ ಅವರು ಸಾಥ್ ಕೊಟ್ಟಿದ್ದಾರೆ. ನಾವು ಕೇಳಿದಾಗ ಸಿರೀಸ್ ಮಾಡಲು ಮುಂದೆ ಬಂದರು. ಈ ಒಂದು ವರ್ಷ ನಾವು ಸಾಕಷ್ಟು ಕಲಿತಿದ್ದೇವೆ. ಈ ಕಲಿಯುವಿಕೆ ಇಟ್ಟುಕೊಂಡು ಮುಂದಿನ ವರ್ಷ ಸಾಕಷ್ಟು ಜಾನರ್‌ನೊಂದಿಗೆ ಬರುತ್ತಿದ್ದೇವೆ. ಸಿರೀಸ್ ಜೊತೆಗೆ ನಾನ್ ಫಿಕ್ಷನ್, ಟಿವಿ ಫ್ಲಸ್ ಫ್ಲಸ್ ಸೇರಿದಂತೆ ಹಲವು ಫಾರ್ಮೆಟ್ ಜಾರಿಗೆ ತರುತ್ತೇವೆ. ರಾಕ್ಷಸ ಉತ್ತರ ಕರ್ನಾಟಕ ಭಾಗದ ಕಥೆ. ಕಲಾವಿದರು ಹಾಗೂ ನಿರ್ಮಾಪಕರು ಕೂಡ ಉತ್ತರ ಕರ್ನಾಟಕದವರೇ ಆಗಿದ್ದಾರೆ. 22 ರಿಂದ 25 ನಿಮಿಷದ ಏಳು ಎಪಿಸೋಡ್ ಆಗಿ ಪ್ರಸಾರ ಆಗಲಿದೆ. ನಿಮ್ಮ ಸಪೋರ್ಟ್ ಹೀಗೆ ಇರಲಿ. ಏಪ್ರಿಲ್‌ನಿಂದ ಬೇರೆ ಬೇರೆ ಪ್ರಾಜೆಕ್ಟ್ ಜೊತೆ ಬರುತ್ತೇವೆ ಎಂದರು. ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಹೋದ ವ್ಯಕ್ತಿ ಮೇಲೆ ಪಿಎಸ್‌ಐ ಹಲ್ಲೆ – ಎಫ್‌ಐಆರ್ ದಾಖಲು
ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ಈ ಪ್ರಾಜೆಕ್ಟ್ ಮಾಡಿರುವುದು ಬಹಳ ಖುಷಿ ಇದೆ. ಜಿ-5 ಇಡೀ ಟೀಂಗೆ ಧನ್ಯವಾದಗಳು. ಸಿನಿಮಾ ಅಂತಾ ಬಂದಾಗ ಥಿಯೇಟರ್‌ಗೆ ಹೋಗುತ್ತೇ. ಕಲೆಕ್ಷನ್ ಆಗುತ್ತದೆ. ಅಲ್ಲಿ ಯಾವುದೇ ಚೌಕಟ್ಟು ಇರುವುದಿಲ್ಲ. ಆದರೆ ವೆಬ್ ಸಿರೀಸ್ ಮಾಡಿದಾಗ ಫ್ಲಾಟ್ ಫಾರ್ಮ್ ಸಪೋರ್ಟ್ ಬೇಕು. ಅದನ್ನು ರೆಡಿ ಮಾಡಿ ಎಲ್ಲಿ ಪ್ರೆಸೆಂಟ್ ಮಾಡುತ್ತೀರಾ? ಒಂದು ಫ್ಲಾಟ್ ಫಾರ್ಮ್ ಸಪೋರ್ಟ್ ಮಾಡಿದಾಗ ಇಂಡಸ್ಟ್ರಿ ಬೆಳೆಯಲು ಆಗುವುದು. ಬೇರೆ ಇಂಡಸ್ಟ್ರಿಯಲ್ಲಿ ಫ್ಲಾಟ್ ಫಾರ್ಮ್ ಸಪೋರ್ಟ್ ಮಾಡಿದ್ದಕ್ಕೆ ಅಲ್ಲಿ ವೆಬ್ ಸಿರೀಸ್ ಸಂಪ್ರದಾಯ ಶುರುವಾಗಿದೆ. ಇಲ್ಲಿ ಈಗ ಅದನ್ನು ಜಿ-5 ಮಾಡುತ್ತಿದೆ. ಸುಹಾಸ್ ಹೇಳಿದ ಲೈನ್ ಇಷ್ಟವಾಯ್ತು. ನನಗೆ ಉತ್ತರ ಕರ್ನಾಟಕದ ಎಲಿಮೆಂಟ್ ನನ್ನ ಸಿನಿಮಾದಲ್ಲಿ ಇರಬೇಕು. ಅದನ್ನು ನನ್ನ ಸಿನಿಮಾದಲ್ಲಿ ಅಳವಡಿಸಿದ್ದೇನೆ. ಉತ್ತರ ಕರ್ನಾಟಕ ನಮ್ಮ ಕುಟುಂಬಕ್ಕೆ ಇರುವ ಕೊಡುಗೆ, ಪ್ರೀತಿ. ಅದನ್ನು ಈ ರೀತಿ ವಾಪಸ್ ನೀಡುತ್ತಿದ್ದೇನೆ. ಒಂದೊಳ್ಳೆ ತಂಡ ಈ ಸಿರೀಸ್‌ನಲ್ಲಿ ಕೆಲಸ ಮಾಡಿದೆ. 89 ಪಾತ್ರಗಳು ಈ ಸಿರೀಸ್‌ನಲ್ಲಿ ಇದ್ದಾರೆ. ಅವರೆಲ್ಲರೂ ಉತ್ತರ ಕರ್ನಾಟಕ ಭಾಗದವರು. ವೆಬ್ ಸಿರೀಸ್‌ಗೆ ಒಂದು ಪ್ರೆಸ್‌ಮೀಟ್ ಮಾಡುತ್ತಿದ್ದೇವೆ ಅಂದರೆ ಇದು ಗ್ರೇಟ್ ಮೂವ್. ಇದೆಲ್ಲಾ ಜಿ-5ನಿಂದ ಆಗಿದೆ ಎಂದರು.

ರಾಕ್ಷಸ, ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮೊದಲ ವೆಬ್‌ಸಿರೀಸ್. ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಜಾನರ್ ಒಳಗೊಂಡಿರುವ ಸರಣಿಯಲ್ಲಿ ವಿಜಯ ರಾಘವೇಂದ್ರ, ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಕ್ಷಸ ವೆಬ್ ಸೀರಿಸ್‌ಗೆ ಸುಹಾನ್ ಪ್ರಸಾದ್ ಮತ್ತು ಅಪೂರ್ವ ಕಥೆ ಒದಗಿಸಿದ್ದಾರೆ. ಹಾಗೇ ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸೀರಿಸ್ ಅನ್ನು ತರುಣ್ ಸುಧೀರ್ ಪ್ರೊಡಕ್ಷನ್‌ನಲ್ಲಿ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ನಿರ್ಮಿಸಿದ್ದಾರೆ.ಇದನ್ನೂ ಓದಿ: ಮತದಾರರ ಪಟ್ಟಿ ದೋಷ ಸರಿಪಡಿಸಲು ಬೀದಿ, ಮನೆವಾರು ಮ್ಯಾಪಿಂಗ್ ಮಾಡಿ: ಚುನಾವಣಾ ಆಯೋಗಕ್ಕೆ ಡಿಕೆಶಿ ಪತ್ರ

