ಗುಂಪುಗಾರಿಕೆ ಮಾಡೋಕೆ ಬಿಗ್‌ ಬಾಸ್‌ಗೆ ಹೋದೋನಲ್ಲ- ಪ್ರತಾಪ್‌ ಹೇಳಿಕೆಗೆ ರಕ್ಷಕ್‌ ರಿಯಾಕ್ಷನ್

Public TV
2 Min Read
rakshak

ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಫಿನಾಲೆಗೆ ದಿನಗಣನೆ ಶುರುವಾಗುತ್ತಿದೆ. ವಿನಯ್ (Vinay Gowda) ಮತ್ತು ತಂಡದ ಗುಂಪುಗಾರಿಕೆ ಬಗ್ಗೆ ಮಾತನಾಡಿದ್ದ ಡ್ರೋನ್ ಪ್ರತಾಪ್‌ಗೆ (Drone Prathap) ರಕ್ಷಕ್ ಬುಲೆಟ್ ಖಡಕ್ ಉತ್ತರ ನೀಡಿದ್ದಾರೆ. ತುಳಿದು ಬೆಳೆಯುತ್ತಿರೋ ವಿನಯ್, ತಂಡದವರೆಲ್ಲಾ ಮನೆಗೆ ಹೋದರು ಎಂದ ಪ್ರತಾಪ್‌ಗೆ ರಕ್ಷಕ್ (Rakshak Bullet) ತಿರುಗೇಟು ನೀಡಿದ್ದಾರೆ.

rakshak bullet

ವಿನಯ್ ತಮ್ಮ ತಂಡದಲ್ಲಿದ್ದವರಿಗೆ ಎಂದೂ ಬುದ್ಧಿವಾದ ಹೇಳಲಿಲ್ಲ. ವಿನಯ್ & ಟೀಮ್ ಗುಂಪುಗಾರಿಕೆ ಬಗ್ಗೆ ಡ್ರೋನ್ ಪ್ರತಾಪ್ ಮಾತನಾಡಿದ್ದರು. ವಿನಯ್ ತಮ್ಮ ತಂಡದವರ ತಪ್ಪು ಹೇಳದೇ ಇದ್ದಿದ್ದಕ್ಕೆ ಒಬ್ಬೊಬ್ಬರೇ ಮನೆಯಿಂದ ಎಲಿಮಿನೇಟ್ ಆದರು ಎಂದು ರಕ್ಷಕ್, ಈಶಾನಿ, ಸ್ನೇಹಿತ್, ನೀತು ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಕ್ ಬುಲೆಟ್ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ನಮಸ್ಕಾರ, ಯಾವುದೇ ಗುಂಪುಗಾರಿಕೆ ಮಾಡೋಕೆ ಅಥವಾ ತಂಡ ಕಟ್ಟೋದಕ್ಕೆ ಬಿಗ್ ಬಾಸ್ ಮನೆಯೊಳಗೆ ನಾನು ಹೋದೋನಲ್ಲ. ಜನರ ಪ್ರೀತಿ ಮತ್ತೆ ಜನರ ವಿಶ್ವಾಸ ಗಳಿಸೋಕೆ ಅಂತ ಹೋಗಿದ್ದು, ನನ್ನ ಬೆಡ್‌ಶೀಟ್ ನನ್ನ ಹತ್ತಿರ ಜೋಪಾನವಾಗಿ ಇದೆ. ನಿಮ್ಮ ಬೆಡಶೀಟ್ ಜೋಪಾನ ಮಾಡಿಕೊಳ್ಳಿ. ಕೊನೆಯಲ್ಲಿ ಎಚ್ಚರ ಎಂದು ಸಂದೇಶ ಬರೆದಿದ್ದಾರೆ.

rakshak bullet

ಈ ವಾರಾಂತ್ಯದ ಶನಿವಾರದ (ಡಿ.6) ಪಂಚಾಯಿತಿಯಲ್ಲಿ ಸುದೀಪ್ (Sudeep) ಮನೆಮಂದಿಗೆ ಚಟುವಟಿಕೆಯೊಂದನ್ನ ಮಾಡಿಸಿದ್ದರು. ನಿಮ್ಮ ಅಭಿಪ್ರಾಯಗಳ ಪ್ರಕಾರ, ಯಾರು ಯಾವುದರ ಬಗ್ಗೆ ಪುಸ್ತಕ ಬರೆಯಬೇಕು? ಎಂದು ಟಾಸ್ಕ್ ಮಾಡಿಸಿದ್ದರು. ಆಗ ಬೇರೆಯವರನ್ನು ತುಳಿದು ಬೆಳೆಯೋದು ಹೇಗೆ? ಎಂಬ ಪುಸ್ತಕವನ್ನು ವಿನಯ್‌ಗೆ ನೀಡಿ ಪ್ರತಾಪ್ ಖಡಕ್ ಆಗಿ ರಿಯಾಕ್ಟ್ ಮಾಡಿದ್ದರು. ಇದನ್ನೂ ಓದಿ:‘ಯುಐ’ ಟೀಸರ್ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಕಿಚ್ಚ, ಶಿವಣ್ಣ, ಅಲ್ಲು ಅರವಿಂದ್

Bigg Boss 3 14

ಬೇರೆಯವರನ್ನ ತುಳಿದು ಬೆಳೆಯೋದು ಹೇಗೆ? ಪುಸ್ತಕವನ್ನ ವಿನಯ್‌ಗೆ ಡ್ರೋನ್ ಪ್ರತಾಪ್ ನೀಡಿದರು. ಇಲ್ಲಿಯವರೆಗೂ ಯಾರ್ಯಾರು ವಿನಯ್ ಜೊತೆಯಲ್ಲಿ ಇದ್ದರು ಆ ಎಲ್ಲಾ ಫ್ರೆಂಡ್ಸ್, ಹಾಗೆ ಹೀಗೆ ಅಂದುಕೊಂಡು ಅವರೆಲ್ಲಾ ಎಲ್ಲಿ ತಪ್ಪು ಮಾಡ್ತಿದ್ದಾರೆ ಎಂಬ ಅಭಿಪ್ರಾಯವನ್ನೇ ವಿನಯ್ ಅವರು ಎಂದಿಗೂ ಕೊಟ್ಟಿಲ್ಲ. ಇಂತಹ ಕಡೆ ತಪ್ಪು ಮಾಡ್ತಿದ್ದಾರೆ ಅಂತ ವಿನಯ್ ಹೇಳೇ ಇಲ್ಲ. ಸರಿ ಎಂದುಕೊಂಡೇ ಜೊತೆಯಲ್ಲಿ ಇದ್ದವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್ ಇವರ ಬೆಡ್‌ಗೆ ಸೇರಿಕೊಳ್ತು ಎಂದು ಪ್ರತಾಪ್ ಮಾತನಾಡಿದ್ದರು. ಡ್ರೋನ್ ಪ್ರತಾಪ್ ಮಾತನ್ನ ಕೇಳಿ ವಿನಯ್ ಶಾಕ್ ಆಗಿದ್ದರು.

ಅಂದಹಾಗೆ, ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ಮೂರೇ ವಾರಕ್ಕೆ ಎಲಿಮಿನೇಟ್‌ ಆಗಿ ಹೊರಬಂದಿದ್ದರು. ರಕ್ಷಕ್‌ ಎಲಿಮಿನೇಷನ್‌ ಫ್ಯಾನ್ಸ್‌ಗೆ ಬೇಸರ ಮೂಡಿಸಿತ್ತು.

Share This Article