‘R B 01’ ಚಿತ್ರದಲ್ಲಿ ಪಾತ್ರ ಹೇಗಿರಲಿದೆ? ಮಾಹಿತಿ ಬಿಚ್ಚಿಟ್ಟ ರಕ್ಷಕ್

Public TV
2 Min Read
RAKSHAK BULLET 1

‘ಬಿಗ್ ಬಾಸ್ ಕನ್ನಡ 10′ (Bigg Boss Kannada 10) ಮೂಲಕ ಮನೆ ಮಾತಾಗಿರುವ ಬುಲೆಟ್ ಪ್ರಕಾಶ್ (Bullet Prakash) ಸದ್ಯ ತಮ್ಮ ಚೊಚ್ಚಲ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ತಂದೆಯ ಆಸೆಯಂತೆಯೇ ಉತ್ತಮ ನಟನಾಗಿ ಅಖಾಡಕ್ಕೆ ಇಳಿಯಲು ರೆಡಿಯಾಗಿದ್ದಾರೆ. ಸದ್ಯ ಚಿತ್ರದ ಪೋಸ್ಟರ್‌ನಿಂದ ಹವಾ ಕ್ರಿಯೇಟ್ ಮಾಡಿರುವ ರಕ್ಷಕ್, ಚಿತ್ರದಲ್ಲಿನ ಪಾತ್ರ ಮತ್ತು ಸಿನಿಮಾ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.

rakshak bullet

ಬುಲೆಟ್ ಪ್ರಕಾಶ್ ಅವರು ಇದ್ದಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವುದಕ್ಕೆ ರಕ್ಷಕ್ ಉತ್ಸುಕರಾಗಿದ್ದರು. ಅದಕ್ಕಾಗಿ ಪೂರ್ವ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದರು. ಈಗ ಸೂಕ್ತ ಸಮಯ ಬಂದಿದೆ. ಉತ್ತಮ ಕಥೆ ಸಿಕ್ಕ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಶುರು ಮಾಡಲು ರೆಡಿಯಾಗಿದ್ದಾರೆ.

rakshak bullet

‘R B 01’ ಸಿನಿಮಾದಲ್ಲಿ ತನ್ನ ಪಾತ್ರ ರಾ ಮತ್ತು ಮಾಸ್ ಆಗಿರಲಿದೆ. ಸದ್ಯ ಸಿನಿಮಾದ ಪ್ರೀ- ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಪಾತ್ರಕ್ಕಾಗಿ ಪ್ರತಿದಿನ ವರ್ಕೌಟ್ ಕೂಡ ಮಾಡುತ್ತಿದ್ದೇನೆ. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಸಂಪೂರ್ಣವಾಗಿ ಸಿದ್ಧವಾದ ಮೇಲೆಯೇ ಕ್ಯಾಮೆರಾ ಮುಂದೆ ಬರುವುದಾಗಿ ರಕ್ಷಕ್ ತಿಳಿಸಿದ್ದಾರೆ.

ಸದ್ಯದಲ್ಲೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ನನ್ನ ಪಾತ್ರದ ಲುಕ್ ಹೇಗಿರಲಿದೆ ಎಂಬುದಕ್ಕೆ ಪೋಸ್ಟರ್ ಕೂಡ ರಿಲೀಸ್ ಮಾಡುತ್ತೇವೆ. ನನ್ನ ಪಾತ್ರದ ಕಾಸ್ಟ್ಯೂಮ್ ಕೂಡ ಸಿದ್ಧವಾಗುತ್ತಿದೆ. ನನ್ನ ಇಷ್ಟಪಡುವ ಅಭಿಮಾನಿಗಳಿಗೆ ಖಂಡಿತಾ ನಿರಾಸೆ ಮಾಡುವುದಿಲ್ಲ ಎಂದು ರಕ್ಷಕ್ ಬುಲೆಟ್ ತಿಳಿಸಿದ್ದಾರೆ.

ಎಲ್ಲಾ ನನ್ನ ಆತ್ಮೀಯರೇ, ಇಂದು (ಏ.2) ನನ್ನ ಪೂಜ್ಯ ತಂದೆ ದಿವಂಗತ ‘ಬುಲೆಟ್’ ಪ್ರಕಾಶ್ ಅವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು. ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರತಂಡಕ್ಕೂ ಹರಸಿ, ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ರಕ್ಷಕ್ ಬರೆದುಕೊಂಡಿದ್ದಾರೆ.

ತಮ್ಮ ಮೊದಲ ಸಿನಿಮಾ ರಕ್ಷಕ್ ಮಾಸ್ ಆಗಿ ಎಂಟ್ರಿ ಕೊಡಲಿದ್ದಾರೆ. ಶೇರ್ ಮಾಡಿರುವ ಪೋಸ್ಟರ್‌ನಲ್ಲಿ ಡೈಲಾಗ್‌ಗಳು ಪಂಚಿAಗ್ ಆಗಿವೆ. ಮಚ್ಚಾ ಏರಿಯಾದಲ್ಲಿ ಕಣ್ಮುಂದೆ ಬೇಜಾನ್ ಗಾಡಿಗಳು ಸೌಂಡ್ ಮಾಡ್ತಾವೆ. ಆದರೆ ಸೌಂಡ್ ಕೇಳ್ತಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದುನ್ನೆ. ‘ಬುಲೆಟ್’… ಇನ್ನುಂದೆ ನಂದೆ ರೌಂಡು, ನನ್ನದೇ ಸೌಂಡು ಎಂಬ ಡೈಲಾಗ್ ಹೈಲೆಟ್ ಆಗಿದೆ.

‘R B 01’ ಚಿತ್ರಕ್ಕೆ ಶ್ರೀಹರಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಕ್ರಿಶ್ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಶ್ರೀಧರ್ ಕಶ್ಯಪ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಸದ್ಯ ರಕ್ಷಕ್ ಲುಕ್, ಪಾತ್ರ ಸಿನಿಮಾದಲ್ಲಿ ಹೇಗಿರಲಿದೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ. ತಂದೆ ಬುಲೆಟ್ ಪ್ರಕಾಶ್‌ರಂತೆಯೇ ರಕ್ಷಕ್ ಕೂಡ ಚಿತ್ರರಂಗದಲ್ಲಿ ಬೆಳೆಯಲಿ ಎಂಬುದೇ ಅಭಿಮಾನಿಗಳ ಆಶಯ.

Share This Article