ಸಹೋದರ-ಸಹೋದರಿಯರ ನಡುವಿನ ಪವಿತ್ರ ಬಂಧನವನ್ನು ಗುರುತಿಸೋ ರಕ್ಷಾ ಬಂಧನ ಹಬ್ಬದ ಹತ್ತಿರದಲ್ಲಿ ನಾವಿದ್ದೇವೆ. ಪರಸ್ಪರ ರಕ್ಷಣೆಯ ಭರವಸೆ ನೀಡುವ ಈ ದಿನ ನಿಮ್ಮ ಕೈಯಾರೆ ಸಿಹಿಯನ್ನು ತಯಾರಿಸಿ, ನಿಮ್ಮ ಒಡಹುಟ್ಟಿದವರಿಗೆ ನೀಡುವ ಮೂಲಕ ನೀವು ಅವರನ್ನು ಸೋತೋಷಪಡಿಸಬಹುದು. ನಾವಿಂದು ಚಾಕ್ಲೇಟ್‌ನಿಂದ ಸಿಂಪಲ್ ಆಗಿ ಬರ್ಫಿ ಹೇಗೆ ಮಾಡೋದು ಎಂದು ಹೇಳಿಕೊಡುತ್ತೇವೆ. ರಾಖಿ ಕಟ್ಟೋದರೊಂದಿಗೆ ಪರಸ್ಪರ ಈ ಸಿಹಿಯನ್ನೂ ಹಂಚಿ ರಕ್ಷಾಬಂಧನವನ್ನು ಆಚರಿಸಿ.
Advertisement
ಬೇಕಾಗುವ ಪದಾರ್ಥಗಳು:
ಹಾಲಿನ ಪುಡಿ – 2 ಕಪ್
ಕೋಕೋ ಪೌಡರ್ – ಕಾಲು ಕಪ್
ಕಂಡೆನ್ಸ್ಡ್ ಮಿಲ್ಕ್ – 400 ಗ್ರಾಂ
ಹಾಲು – ಕಾಲು ಕಪ್
ಏಲಕ್ಕಿ ಪುಡಿ – 1 ಟೀಸ್ಪೂನ್
ಪಿಸ್ತಾ – ಅಲಂಕರಿಸಲು ಬೇಕಾಗುವಷ್ಟು
ಬೆಣ್ಣೆ – 2 ಟೀಸ್ಪೂನ್
ತುಪ್ಪ – 2 ಟೀಸ್ಪೂನ್ ಇದನ್ನೂ ಓದಿ: ಮತ್ತೆ ಮತ್ತೆ ತಿನ್ನಬೇಕು ಎನಿಸುವ ಎಳ್ಳು ಚಿಕ್ಕಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಅದರಲ್ಲಿ ಬೆಣ್ಣೆ ಹಾಕಿ ಕರಗಿಸಿಕೊಳ್ಳಿ. ಉರಿಯನ್ನು ಆಫ್ ಮಾಡಿ, ಹಾಲಿನ ಪುಡಿ ಹಾಗೂ ಕೋಕೋ ಪೌಡರ್ ಅನ್ನು ಸೇರಿಸಿ.
* ಒಂದು ಸೌಟಿನ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಬಳಿಕ ಕಂಡೆನ್ಸ್ಡ್ ಮಿಲ್ಕ್ ಅನ್ನು ಸೇರಿಸಿ.
* ಉರಿಯನ್ನು ಆನ್ ಮಾಡಿ, ಕಡಿಮೆ ಉರಿಯಲ್ಲಿ ಮಿಶ್ರಣ ಮಾಡಿಕೊಳ್ಳಿ.
* ಬಳಿಕ ಹಾಲು ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ, ಸುಮಾರು 10-12 ನಿಮಿಷಗಳ ವರೆಗೆ ಆಗಾಗ ಬೆರೆಸುತ್ತಾ ಬೇಯಿಸಿಕೊಳ್ಳಿ.
* ಚಾಕ್ಲೇಟ್ ಮಿಶ್ರಣ ಪ್ಯಾನ್‌ನ ಬದಿಯನ್ನು ಬಿಡಲು ಪ್ರಾರಂಭಿಸಿದಾಗ ಉರಿಯನ್ನು ಆಫ್ ಮಾಡಿ, ಅದಕ್ಕೆ ತುಪ್ಪದಿಂದ ಗ್ರೀಸ್ ಮಾಡಿ, ಒಂದು ಪ್ಲೇಟ್‌ಗೆ ವರ್ಗಾಯಿಸಿ.
* ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಒಂದು ಚಮಚ ತುಪ್ಪವನ್ನು ನಿಮ್ಮ ಕೈಗೆ ಸವರಿಕೊಂಡು ಪುಟ್ಟ ಪುಟ್ಟ ಉಂಡೆಗಳನ್ನು ತಯಾರಿಸಿಕೊಳ್ಳಿ.
* ಪಿಸ್ತಾ ಬಳಸಿ ಪೇಡಾಗಳನ್ನು ಅಲಂಕರಿಸಿ.
* ಪೇಡಾ ಆರಂಭದಲ್ಲಿ ಜಿಗುಟಾಗಿದ್ದರೂ ಸುಮಾರು 3-4 ಗಂಟೆಗಳಲ್ಲಿ ಅದು ಸೆಟ್ ಆಗುತ್ತದೆ.
* ಇದೀಗ ಚಾಕ್ಲೇಟ್ ಪೇಡಾ ತಯಾರಾಗಿದ್ದು, ನಿಮ್ಮ ಒಡಹುಟ್ಟಿದವರಿಗೆ ಹಂಚಿ ರಕ್ಷಾಬಂಧನ ಆಚರಿಸಿ. ಇದನ್ನೂ ಓದಿ: ಮನೆಯಲ್ಲೇ ಮಾಡ್ನೋಡಿ ಅಂಜೂರ, ಖರ್ಜೂರ ಬರ್ಫಿ
Advertisement
Web Stories