ರಾಯ್ಪುರ್: ನಕ್ಸಲರ ದಾಳಿಯಿಂದ ವೀರಮರಣವನ್ನಪ್ಪಿದ್ದ ಪೊಲೀಸ್ ಪೇದೆಯ ಪ್ರತಿಮೆಗೆ ಆತನ ತಂಗಿಯು ರಾಕಿ ಕಟ್ಟುವ ಮೂಲಕ ಛತ್ತೀಸಘಡ್‍ದ ದಾಂತೆವಾಡದಲ್ಲಿ ರಕ್ಷಾಬಂಧನವನ್ನು ಆಚರಿಸಿದ್ದಾರೆ.
ದಾಂತೆವಾಡದ ಶಾಂತಿ ಉದೆ ಅಣ್ಣನ ಪ್ರತಿಮೆಗೆ ರಾಕಿ ಕಟ್ಟಿ ಹಬ್ಬವನ್ನು ಆಚರಿಸಿದ್ದಾರೆ. ಶಾಂತಿಯ ಅಣ್ಣ ರಾಜೇಶ್ ಗಾಯಕ್ವಾಡ್ ಪೊಲೀಸ್ ಪೇದೆಯಾಗಿದ್ದರು. 2014ರ ನಕ್ಸಲರ ಕಾರ್ಯಾಚರಣೆಯಲ್ಲಿ ಗುಂಡಿನ ದಾಳಿಗೆ ಸಿಲುಕಿ ವೀರಮರಣವನ್ನಪ್ಪಿದ್ದರು. ಅಂದಿನಿಂದಲೂ ತಮ್ಮ ಊರಿನಲ್ಲಿರುವ ಅಣ್ಣನ ಪ್ರತಿಮೆಗೆ ರಾಕಿ ಕಟ್ಟುವ ಸಂಪ್ರದಾಯವನ್ನು ಆರಂಭಿಸಿದ್ದಾರೆ.
Advertisement
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಅಣ್ಣನನ್ನು 2014ರ ಮಾರ್ಚ್ 11ರಂದು ನಕ್ಸಲ್ ಕಾರ್ಯಾಚರಣೆಗಾಗಿ ಸುಕ್ಮಾದ ತೊಂಗಾಪಾಲ್ ಪ್ರದೇಶಕ್ಕೆ ನೇಮಕ ಮಾಡಿದ್ದರು. ಆದರೆ ಅವನು ನಕ್ಸಲರ ದಾಳಿಗೆ ಹುತಾತ್ಮನಾದ. ನನ್ನ ಒಬ್ಬನೇ ಒಬ್ಬ ಅಣ್ಣನ ಸಾವಿನಿಂದಾಗಿ ನನಗೆ ತುಂಬಾ ದುಃಖವಾಯಿತು. ಕೊನೆಯವರೆಗೂ ರಾಕಿ ಕಟ್ಟುವ ಆಸೆಯಿಟ್ಟುಕೊಂಡಿದ್ದ ನನಗೆ ನಿರಾಸೆಯಾಯಿತು. ಹೀಗಾಗಿ ನಾನು ಅಂದಿನಿಂದಲೂ ನನ್ನ ಅಣ್ಣನ ಪ್ರತಿಮೆಗೆ ರಾಕಿ ಕಟ್ಟುವ ಮೂಲಕ ಸಂಭ್ರಮಪಡುತ್ತೇನೆ ಎಂದು ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv