ಸಹೋದರ ಮತ್ತು ಸಹೋದರಿಯರ ಬಂಧವನ್ನು ಸಾರುವ ರಕ್ಷಾ ಬಂಧನವನ್ನು (Raksha Bandhan 2024) ಸಿನಿಮಾ ತಾರೆಯರು ಕೂಡ ಆಚರಿಸುವ ಮೂಲಕ ಸಂಭ್ರಮಿಸಿದ್ದಾರೆ. ಯಶ್, ನಟಿ ರಾಗಿಣಿ, ಡಾಲಿ ಧನಂಜಯ ಸೇರಿದಂತೆ ಅನೇಕರು ಸೆಲೆಬ್ರೆಟ್ ಮಾಡಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವು ಕೂಡ ತಪ್ಪದೇ ರಾಖಿ ಹಬ್ಬವನ್ನು ಆಚರಿಸಿದ್ದಾರೆ. ಸಹೋದರಿ ನಂದಿನಿ ಅವರು ಅಣ್ಣ ಯಶ್‌ಗೆ (Yash) ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಅದಷ್ಟೇ ಅಲ್ಲ, ಯಶ್ ಮಕ್ಕಳು ಕೂಡ ರಕ್ಷಾ ಬಂಧನ ಸೆಲೆಬ್ರೆಟ್ ಮಾಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನು ನಟಿ ರಾಧಿಕಾ ಹಂಚಿಕೊಂಡಿದ್ದಾರೆ.
View this post on Instagram
ಸಂಗೀತಾ ಶೃಂಗೇರಿ (Sangeetha Sringeri) ಅವರು ಅಣ್ಣ ಸಂತೋಷ್ ಮತ್ತು ಅತ್ತಿಗೆ ಇಬ್ಬರಿಗೂ ರಾಖಿ ಕಟ್ಟಿ ಆರತಿ ಬೆಳಗಿದ್ದಾರೆ. ಇದನ್ನೂ ಓದಿ:ನ್ಯಾಯಮೂರ್ತಿ ಹೇಮಾ ಸಮಿತಿ ವರದಿ: ಕೇರಳ ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ
ಮುಂಬೈಗೆ ತೆರಳಿ ಸಹೋದರ ರುದ್ರಾಕ್ಷಗೆ ರಾಖಿ ಕಟ್ಟಿ ರಾಗಿಣಿ (Ragini Dwivedi) ಸಂಭ್ರಮಿಸಿದ್ದಾರೆ. ನಿನ್ನ ಮೇಲಿನ ನನ್ನ ಪ್ರೀತಿಯನ್ನು, ನಿನ್ನ ಬಗೆಗಿನ ನನ್ನ ಕಾಳಜಿಯನ್ನು, ನಿನಗಾಗಿ ನನ್ನ ರಕ್ಷಣೆಯನ್ನು, ನಿನ್ನನ್ನು ನನ್ನ ಜೀವನದಲ್ಲಿ ನನ್ನ ಸಹೋದರನಾಗಿ ಪಡೆದಿದ್ದಕ್ಕಾಗಿ ನನ್ನ ಶಾಶ್ವತ ಕೃತಜ್ಞತೆಯನ್ನು ಪದಗಳು ವ್ಯಕ್ತಪಡಿಸಲು ಸಾಧ್ಯವಿಲ್ಲ. ನೀವು ವಯಸ್ಸಿನಲ್ಲಿ ನನಗಿಂತ ಚಿಕ್ಕವರಾಗಿರಬಹುದು. ಆದರೆ ಜೀವನದ ಪ್ರತಿ ಹಂತದಲ್ಲೂ ನೀವು ನನ್ನ ಶಕ್ತಿಯಾಗಿದ್ದೀರಿ, ನನಗೆ ಮಾರ್ಗದರ್ಶನ ನೀಡುವ ಶಕ್ತಿಯ ದಿಂಬು. ನಾನು ನಿನ್ನನ್ನು ಜಗತ್ತಿಗಿಂತ ಹೆಚ್ಚು ಪ್ರೀತಿಸುತ್ತೇನೆ ಎಂದು ಸಹೋದರನ ಜೊತೆಗಿನ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ.
View this post on Instagram
ಸದಾ ನಗುತಿರು, ನಿನ್ನ ನಗುವೇ ನನಗೆ ಶ್ರೀರಕ್ಷೆ. ರಕ್ಷಾ ಬಂಧನದ ಶುಭಾಶಯಗಳು ಪುಟ್ಟಮ್ಮ ಎಂದು ಕಾರ್ತಿಕ್ ಮಹೇಶ್ (Karthik Mahesh) ತಂಗಿ ಜೊತೆಗಿನ ಫೋಟೋ ಶೇರ್ ಮಾಡಿ ಶುಭಕೋರಿದ್ದಾರೆ.
ಇನ್ನೂ ‘ಕೋಟಿ’ ಸಿನಿಮಾದಲ್ಲಿ ಡಾಲಿ ಧನಂಜಯಗೆ (Daali Dhananjay) ತಂಗಿಯಾಗಿದ್ದ ನಟಿಸಿದ್ದ ಪೂಜಾ ಪ್ರಕಾಶ್ ಅವರು ಇದೀಗ ಡಾಲಿಗೆ ರಾಖಿ ಕಟ್ಟಿ ಹಬ್ಬದ ಆಚರಿಸಿದ್ದಾರೆ. ಅಕ್ಕ ತಂಗಿಯ ರಕ್ಷೆ ಎಂದು ಡಾಲಿ ಅಡಿಬರಹ ನೀಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.