ರಿತೇಶ್ (Ritish) ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿ ಅವರಿಂದ ಡಿವೋರ್ಸ್ ಪಡೆದಿದ್ದರು ರಾಖಿ ಸಾವಂತ್. ಆನಂತರವೇ ಅವರು ಮೈಸೂರಿನ ಹುಡುಗ ಆದಿಲ್ ಜೊತೆ ನಿಕಾ ಮಾಡಿಕೊಂಡಿದ್ದರು. ಆದಿಲ್ ಮೇಲೂ ಆರೋಪಗಳನ್ನು ಮಾಡಿ ಜೈಲಿಗೆ ಕಳುಹಿಸಿದ್ದರು. ಆದಿಲ್ ನಿಂದ ದೂರವಾದ ನಂತರ ಮತ್ತೆ ಹಳೆ ಗಂಡನ ಪಾದವೇ ಗತಿ ಎನ್ನುವಂತೆ ರಿತೇಶ್ ಜೊತೆ ಸೇರಿದ್ದಾರೆ ರಾಖಿ.
ಕ್ಯಾಮೆರಾ ಕಣ್ಣಿಗೆ ಮಾಜಿಪತಿಯ ಜೊತೆ ಕಾಣಿಸಿಕೊಂಡಿರುವ ರಾಖಿ, ಈ ಇಬ್ಬರೂ ಸೇರಿ ಆದಿಲ್ ಮೇಲೆ ಆರೋಪ ಮಾಡಿದ್ದಾರೆ. ಕೋರ್ಟ್ ವಿಷಯದಲ್ಲಿ ಆದಿಲ್ ಸುಳ್ಳು ಹೇಳುತ್ತಿದ್ದಾನೆ. ನಾನು ಜೈಲಿಗೆ ಹೋಗಲಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾನೆ. ನಾನು ಅದನ್ನು ಕೇಳಿ ಮಜಾ ಮಾಡುತ್ತಿದ್ದೇನೆ ಎಂದಿದ್ದಾರೆ ರಾಖಿ.
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬಾಲಿವುಡ್ ನಟಿ ರಾಖಿ ಸಾವಂತ್ ಬಾಂಬೆ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಜಾಮೀನು ನೀಡಬೇಕು ಎಂದು ರಾಖಿ ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಈಗಾಗಲೇ ತಿರಸ್ಕರಿಸಿದೆ. ಹಾಗಾಗಿ ರಾಖಿ ಇದೀಗ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲು ಏರಿದ್ದರು.
ತಮ್ಮ ಖಾಸಗಿ ವಿಡಿಯೋಗಳನ್ನು ರಾಖಿ ಸಾವಂತ ಇತರರಿಗೆ ಹಂಚುತ್ತಿದ್ದಾರೆ. ಇದರಿಂದ ಮಾನನಷ್ಟವಾಗುತ್ತಿದೆ ಎಂದು ರಾಖಿ ಮಾಜಿ ಗೆಳೆಯ ಆದಿಲ್ (Adil Khan) ದೂರು ನೀಡಿದ್ದರು. ಜೊತೆಗೆ ಗಂಭೀರ ಆರೋಪವನ್ನೂ ಅವರು ಮಾಡಿದ್ದರು. ಈ ನಡುವೆ ಆದಿಲ್ ಬಿಗ್ ಬಾಸ್ ಸ್ಪರ್ಧಿ ಸೋಮಿ ಖಾನ್ (Somi Khan) ಜೊತೆ ಮದುವೆ (Marriage) ಆಗಿದ್ದಾರೆ, ಇದೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ನಾನು ರಾಖಿ ಸಾವಂತ್ ಜೊತೆ ಮದುವೆ ಆಗಿರಲಿಲ್ಲ. ಸೋಮಿ ಖಾನ್ ಜೊತೆಗಿನ ಮದುವೆಯೇ ನನ್ನ ಮೊದಲ ಮ್ಯಾರೇಜ್ ಎಂದು ಪ್ರತಿಕ್ರಿಯೆ ನೀಡಿದ್ದರು.
ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್‌ಗೆ (Rakhi Sawant) ಕೈ ಕೊಟ್ಟು ಸೀಕ್ರೆಟ್ ಆಗಿ ಆದಿಲ್ ಖಾನ್ 2ನೇ ಮದುವೆಯಾಗಿದ್ದಾರೆ. ‘ಬಿಗ್ ಬಾಸ್ ಹಿಂದಿ 12’ರ (Bigg Boss Hindi 12) ಸ್ಪರ್ಧಿ ಸೋಮಿ ಖಾನ್ ಜೈಪುರನಲ್ಲಿ ಗ್ರ್ಯಾಂಡ್ ಆಗಿ ಮದುವೆಯಾಗಿದ್ದಾರೆ. ಮಾರ್ಚ್ 2ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ನಿಖಾ ಆಗಿದ್ದಾರೆ.