ಮುಂಬೈ: ನನ್ನ ಸ್ತನಗಳನ್ನು ದಾನ ಮಾಡಿ ವಿಶ್ವದಾದ್ಯಂತ ಪ್ರೀತಿಯನ್ನು ಹರಡುತ್ತೇನೆ ಎಂದು ಬಾಲಿವುಡ್ ಮೋಹಕ ಬೆಡಗಿ ರಾಖಿ ಸಾವಂತ್ ವಿಡಿಯೋವೊಂದರಲ್ಲಿ ಹೇಳಿ ಅದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋ ಆರಂಭದಲ್ಲಿ ಐಶ್ವರ್ಯ ಅವರ ಈ ಕೆಲಸವನ್ನು ಹೊಗಳಿದ ರಾಖಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಐಶ್ವರ್ಯ ಅವರ ಈ ಕೆಲಸದಿಂದ ಸಾಕಷ್ಟು ಮಂದಿ ಸ್ಫೂರ್ತಿಗೊಂಡಿದ್ದು, ಅದರಲ್ಲಿ ನಾನು ಒಬ್ಬಳಾಗಿದ್ದೇನೆ. ನನ್ನಲ್ಲಿರುವ ಅಮೂಲ್ಯವಾದ ಸ್ತನಗಳನ್ನು ದಾನ ಮಾಡಲು ನಿರ್ಧರಿಸಿದ್ದೇನೆ ಅಂತಾ ರಾಖಿ ಹೇಳಿಕೊಂಡಿದ್ದಾರೆ.
ನನಗೆ ಐಶ್ವರ್ಯ ರೈ ಅವರ ಕಣ್ಣುಗಳು ಇಷ್ಟ. ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಈ ಜಗತ್ತಿನಲ್ಲಿ ತುಂಬಾ ಒಳ್ಳೆಯವರಿದ್ದು, ಕೆಲವರು ತಮ್ಮ ಶ್ವಾಸಕೋಶ, ಕಿಡ್ನಿ, ಕಣ್ಣುಗಳನ್ನು ದಾನ ಮಾಡುತ್ತಾರೆ. ಎಲ್ಲರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದು, ನಾನು ಸಮಾಜಕ್ಕೆ ಸೇವೆ ಮಾಡಲು ನಿರ್ಧರಿಸಿದ್ದೇನೆ. ಜನರು ಒಬ್ಬರನ್ನೊಬ್ಬರು ತುಂಬಾ ಪ್ರೀತಿ ತೋರಿಸುವಾಗ ನಾನು ಏಕೆ ತೋರಿಸಬಾರದು ಎಂದು ಅನಿಸಿತು. ನನ್ನ ಬಳಿ ನನ್ನ ಸ್ತನ ಬಿಟ್ಟರೆ ಬೇರೆ ಏನೂ ಇಲ್ಲ. ಹಾಗಾಗಿ ನಾನು ನನ್ನ ಸ್ತನಗಳನ್ನು ದಾನ ಮಾಡಿ ಪ್ರೀತಿ ಹರಡಿಸುತ್ತೇನೆ. ಸದ್ಯ ನನ್ನ ಸ್ತನ ಯಾರಿಗೆ ಬೇಕೆಂದು ನನಗೆ ಗೊತ್ತಿಲ್ಲ. ಆದರೆ ಅವಶ್ಯಕತೆ ಇರುವವರಿಗೆ ನಾನು ನನ್ನ ಸ್ತನ ದಾನ ಮಾಡುತ್ತೇನೆ ಎಂದು ರಾಖಿ ವಿಡಿಯೋದಲ್ಲಿ ಬ್ರೇಕಿಂಗ್ ಸುದ್ದಿ ಕೊಟ್ಟಿದ್ದಾರೆ.
ಸದ್ಯ ರಾಖಿ ಸಾವಂತ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv