ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಾಲಿವುಡ್ ಚಿತ್ರರಂಗದ ಅನೇಕ ನಟ ನಟಿಯರು ಖಂಡಿಸಿದ್ದಾರೆ. ಇದೀಗ ರಾಖಿ ಸಾವಂತ್ (Rakhi Sawant) ಅವರು ಹಿಂದೂ ಮತ್ತು ಮುಸ್ಲಿಂ ವಿಭಜನೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಮುಂದಿನ ರಜೆಯಲ್ಲಿ ಕಾಶ್ಮೀರಕ್ಕೆ ಭೇಟಿ ನೀಡೋದಾಗಿ ನಟಿ ಹೇಳಿದ್ದಾರೆ. ಇದನ್ನೂ ಓದಿ: ದಳಪತಿ ವಿಜಯ್ ನೋಡಲು ಮರದಿಂದ ಜಿಗಿದು ಅಭಿಮಾನಿಯ ಹುಚ್ಚಾಟ- ವಿಡಿಯೋ ವೈರಲ್
ರಾಖಿ ಬುರ್ಖಾ ಧರಿಸಿ ಉಗ್ರರ ದಾಳಿ ಕುರಿತು ಮಾತನಾಡಿ, ನಾವೆಲ್ಲರೂ ಒಂದೇ. ನಮ್ಮ ಹಿಂದೂಸ್ಥಾನದಿಂದ ಮುಸ್ಲಿಮರನ್ನು ಯಾರೂ ಓಡಿಸಲು ಸಾಧ್ಯವಿಲ್ಲ. ಭಾರತವು ಹಿಂದೂಗಳಿಗೆ ಸೇರಿದಷ್ಟೇ ಮುಸ್ಲಿಮರಿಗೂ ಸೇರಿದೆ. ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಬೇಡಿ. ಸಣ್ಣ ಮಕ್ಕಳಂತೆ ವರ್ತಿಸಬೇಡಿ, ಪ್ರಬುದ್ಧರಾಗಿರಿ. ದೇವರ ಮೇಲೆ ಕರುಣೆ ತೋರಿ. ದೇವರು ಎಷ್ಟು ನೋವನ್ನು ಅನುಭವಿಸುತ್ತಿರಬಹುದು ಎಂದು ಊಹಿಸಿ. ಅವನು ನಮ್ಮೆಲ್ಲರನ್ನೂ ಸೃಷ್ಟಿಸಿದನು, ನಾವೆಲ್ಲರೂ ಅವನ ಮಕ್ಕಳು. ಆದರೆ ನಾವು ಪರಸ್ಪರ ಜಗಳವಾಡುತ್ತಿದ್ದೇವೆ. ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದೇವೆ ಇದರಿಂದ ದೇವರಿಗೂ ಬೇಜಾರ್ ಆಗಿದೆ ಎಂದಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ತುಂಬಾ ಕ್ರೂರವಾಗಿ ಸಾಯಿಸಿದ್ದಾರೆ: ಉಗ್ರರ ದಾಳಿ ಬಗ್ಗೆ ರಾಗಿಣಿ ಕಿಡಿ
View this post on Instagram
ನಾನು ನನ್ನ ಮುಂದಿನ ರಜೆಯನ್ನು ಕಾಶ್ಮೀರದಲ್ಲಿ ಕಳೆಯುತ್ತೇನೆ. ಕಾಶ್ಮೀರಕ್ಕೆ ಹೋಗುವುದು ನಮ್ಮ ಹಕ್ಕು. ಕಾಶ್ಮೀರ ನಮ್ಮದು ಮತ್ತು ಕಾಶ್ಮೀರದ ಜನರು ನಮ್ಮ ಸಹೋದರ ಸಹೋದರಿಯರು. ನಾವು ಭಾರತದ ಹೊರಗೆ ಹೋಗುವುದಿಲ್ಲ. ನಾನು ಕಾಶ್ಮೀರಕ್ಕೆ ಹೋಗುತ್ತೇನೆ, ನೀವು ನನ್ನನ್ನು ಬೆಂಬಲಿಸುತ್ತೀರಾ? ಅಲ್ವಾ ಎಂದು ಅಭಿಮಾನಿಗಳಿಗೆ ನಟಿ ಪ್ರಶ್ನಿಸಿದ್ದಾರೆ. ಈ ಕಾರ್ಯಕ್ಕೆ ಬಾಲಿವುಡ್ ಕೂಡ ಬೆಂಬಲಿಸುತ್ತದೆ ಎಂದು ರಾಖಿ ಮಾತನಾಡಿದ್ದಾರೆ.
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ.