– ಭಾರತದಲ್ಲಿ ಆರತಕ್ಷತೆ, ಪಾಕ್‌ನಲ್ಲಿ ಮದುವೆ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಹನಿಮೂನ್ ಅಂತಾರೆ ನಟಿ
ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ (Rakhi Sawant) ಕಾಂಟ್ರವರ್ಸಿ ಕ್ವೀನ್ ಎಂದೇ ಫೇಮಸ್. ಈಕೆ ಹೋದ ಕಡೆಯಲ್ಲ ಕಾಂಟ್ರವರ್ಸಿ ಇದ್ದೇ ಇರುತ್ತೆ. ಕೆಲವೊಮ್ಮೆ ಅಭಿಮಾನಿಗಳಿಗಾಗಿ ಅವರೇ ಗಾಸಿಪ್ ಮೈ ಮೇಲೆ ಎಳೆದುಕೊಳ್ತಾರೆ ಅನ್ನಿಸುತ್ತೆ. ಈ ಎಲ್ಲ ಬೆಳವಣಿಗೆಗಳ ನಡುವೆ ರಾಖಿ 3ನೇ ಮದುವೆಯಾಗಲು (Rakhi Sawant Marriage) ಸಜ್ಜಾಗಿದ್ದಾರಂತೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಖಿ ಸಾವಂತ್, ಪಾಕಿಸ್ತಾನದ ವ್ಯಕ್ತಿಯೊಬ್ಬರಿಂದ ಮದುವೆ ಪ್ರಸ್ತಾಪ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
- Advertisement
ಪಾಕಿಸ್ತಾನದಿಂದ (Pakistan) ನನಗೆ ಮದುವೆ ಪ್ರಸ್ತಾಪಗಳು ಬರುತ್ತಿವೆ ಎಂದಿರುವ ರಾಖಿ, ನನ್ನ ಹಿಂದಿನ ಮದುವೆಗಳಿಂದ ನನಗಾದ ನೋವು, ನಾನು ಅನುಭವಿಸಿದ ನರಕಯಾತನೆ, ಎಲ್ಲವೂ ಪಾಕಿಸ್ತಾನದ ಪ್ರಜೆಗಳಿಗೆ ಗೊತ್ತು ಅವರು ಕೂಡ ಎಲ್ಲವನ್ನು ನೋಡಿದ್ದಾರೆ. ಭಾವಿ ಪತಿ ನಟ ಹಾಗೂ ಪೊಲೀಸ್ ಅಧಿಕಾರಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 2ನೇ ಮದುವೆಗೆ ಸಜ್ಜಾದ ಚೈತ್ರಾ ವಾಸುದೇವನ್
- Advertisement
ಮುಂದುವರಿದು… ಈ ಬಾರಿ ಉತ್ತಮ ವ್ಯಕ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಪಾಕಿಸ್ತಾನದ ಜನರನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ಅಲ್ಲಿ ನನಗೆ ತುಂಬಾ ಜನ ಅಭಿಮಾನಿಗಳಿದ್ದಾರೆ. ಈ ರೀತಿಯ ಮದುವೆಗಳಿಂದ 2 ದೇಶಗಳ ನಡುವೆ ಶಾಂತಿ ನೆಲೆಸುತ್ತೆ ಎಂದು ಅಂತ ಹೇಳಿದ್ದಾರೆ. ಇದನ್ನೂ ಓದಿ: ಆದಿಲ್ ಖಾನ್ ಜೊತೆ ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ
ಇನ್ನೂ ಪಾಕಿಸ್ತಾನದಲ್ಲಿ ನನ್ನ ಮದುವೆ ನಡೆಯಲಿದ್ದು ಭಾರತದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದಿರುವ ರಾಖಿ ಸ್ವಿಜರ್ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್‌ಗೆ ಹನಿಮೂನ್‌ಗೆ ನಾವು ಹೋಗಲಿದ್ದೇವೆ, ಆ ನಂತರ ದುಬೈನಲ್ಲಿ ನಾವು ಖಾಯಂ ಆಗಿ ನೆಲಸಲಿದ್ದೇವೆ ಅಂತ ತಿಳಿಸಿದ್ದಾರೆ.
ಈ ಹಿಂದೆ… ಮೈಸೂರಿನ ಅದಿಲ್ ಖಾನ್ ದುರಾನಿ ಅವರನ್ನು ಮದುವೆಯಾಗಿದ್ದ ರಾಖಿ ಸಾವಂತ್ 2023ರಲ್ಲಿ ಬೇರೆಯಾಗಿದ್ದರು. ಆದಿಲ್‌ಗೂ ಮುನ್ನ ರಾಖಿ ರಿತೇಶ್ ರಾಜ್ ಸಿಂಗ್ ಅವರನ್ನ ವಿವಾಹವಾಗಿದ್ದರು. ರಿತೇಶ್ ಮತ್ತು ರಾಖಿ ಹಿಂದಿ ಬಿಗ್ ಬಅಸ್ 15ರ ಸೀಸನ್‌ನಲ್ಲಿ ಸ್ಪರ್ಧಿಗಳಾಗಿದ್ದರು. ಇದನ್ನೂ ಓದಿ: ಇಂದು ಸ್ವಗ್ರಾಮಕ್ಕೆ ಬಿಗ್ ಬಾಸ್ ವಿನ್ನರ್ ಹನುಮಂತ – ಅದ್ಧೂರಿ ಸ್ವಾಗತಕ್ಕೆ ಸ್ನೇಹಿತರು, ಗ್ರಾಮಸ್ಥರ ಸಿದ್ಧತೆ