ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮದೇ ಕಾರ್ಟೂನ್ ಫೋಟೋ ಹಂಚಿಕೊಂಡು ಟ್ರೋಲ್ ಆಗುತ್ತಿದ್ದಾರೆ.
ರಾಖಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಅಲ್ಲದೆ ವಿಚಿತ್ರ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಎಮೋಶನಲ್ ವಿಡಿಯೋ ನಂತರ ರಾಖಿ ಈಗ ತಮ್ಮ ಕಾರ್ಟೂನ್ ಫೋಟೋ ಪೋಸ್ಟ್ ಮಾಡಿದ್ದಾರೆ.
View this post on Instagram
ರಾಖಿ ಅವರ ಕಾರ್ಟೂನ್ ಫೋಟೋಗೆ ಅಭಿಮಾನಿಗಳು ವಿಭಿನ್ನವಾಗಿ ಕಮೆಂಟ್ ಮಾಡಿದ್ದಾರೆ. ಒಬ್ಬ ಅಭಿಮಾನಿ, “ರಾಖಿ ನಿನ್ನ ನಿಜವಾದ ಮುಖ ನೋಡುವುದಕ್ಕೆ ಹೀಗೆ ಇದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ “ಈ ಫೋಟೋದಲ್ಲಿ ಇರುವುದು ನಿನ್ನ ತರಹ ಇರುವ ದೆವ್ವ” ಎಂದು ಕಮೆಂಟ್ ಹಾಕಿದ್ದಾರೆ.
ಅಲ್ಲದೇ ಇನ್ನೊಬ್ಬರು, ರಾಖಿ ನೀನು ಮೇಕಪ್ ಹಾಕಲಿಲ್ಲ ಎಂದರೆ ಹೀಗೆ ಕಾಣಿಸುತ್ತೀಯಾ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಹಲವಾರು ಜನ ಈ ಪೋಸ್ಟ್ ಗೆ ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ರಾಖಿಯ ಈ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
View this post on Instagram